ಕೊಪ್ಪಳದಲ್ಲೂ ‘Love Jihad’: ಮುಸ್ತಫಾ ಮೊಬೈಲ್ನಲ್ಲಿ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಪತ್ತೆ!

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಎರಡೆರಡು ಲವ್ ಜಿಹಾದ್ (Love Jihad) ಪ್ರಕರಣಗಳು ದೊಡ್ಡ ಸಂಚಲನ ಮೂಡಿಸಿದ್ದವು. ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಸಹ ಇದೇ ರೀತಿಯ ಆರೋಪ ಕೇಳಿಬಂದಿದೆ.
ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಪತ್ತೆ!
ಕುಷ್ಟಗಿ ತಾಲೂಕಿನ ಗ್ರಾಮವೊಂದರ ಹಿಂದೂ ನರ್ಸಿಂಗ್ ವಿದ್ಯಾರ್ಥಿನಿಯನ್ನು ಅನ್ಯಕೋಮಿನ ಯುವಕಮುಸ್ತಫಾ ಪುಸಲಾಯಿಸಿದ್ದ. ವಿದ್ಯಾರ್ಥಿನಿ ಜೊತೆಗಿದ್ದ ವೇಳೆ ಹಿಂದೂ ಯುವಕರ ಕೈಗೆ ಸಿಕ್ಕಿಬಿದ್ದಿದ್ದ. ಇನ್ನು ಆತನ ಮೊಬೈಲ್ ಪರಿಶೀಲಿಸಿದ ವೇಳೆ ಹಿಂದೂ ಯುವತಿಯರ ಜೊತೆಗಿರುವ ಅಶ್ಲೀಲ ವಿಡಿಯೋಗಳು ಪತ್ತೆ ಆಗಿವೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ ಯುವತಿಯರಿಗೆ ಬಿಯರ್ ಕುಡಿಸಿದ್ದಾನೆ. ಮಟ್ಕಾ ಬರೆಯುತ್ತಿರುವುದೂ ಪತ್ತೆ ಆಗಿದೆ. ಈ ವೇಳೆ ಕೂಡಲೇ ಮೊಬೈಲ್ ಕಸಿದುಕೊಂಡ ಮುಸ್ತಫಾ ರೀಸೆಟ್ ಮಾಡಿದ್ದಾನೆ.
READ THIS : PUC ಫಲಿತಾಂಶದಲ್ಲಿ ಶೇಷಾದ್ರಿಪುರಂ ಕಾಲೇಜಿಗೆ 9 ರ್ಯಾಂಕ್

ನಾನು ಹಿಂದೂ ಯುವತಿಯನ್ನು ಮದುವೆ ಆಗಿದ್ದೇನೆ
ನಾನು ಹಿಂದೂ ಯುವತಿಯನ್ನು ಮದುವೆ ಆಗಿರುವುದಾಗಿ ಮುಸ್ತಫಾ ಹೇಳಿದ್ದಾನೆ. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿರುವ ಹಿಂದೂ ಯುವಕರು, ಕೊಪ್ಪಳ ನಗರ ಠಾಣೆ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸ್ ಅಧಿಕಾರಿಗಳಿಗೆ ದೂರು
ಈ ಸಂಬಂಧ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಸಂಗಮೇಶ್ ಹಿರೇಮಠ ಸೇರಿದಂತೆ ಹಲವರು ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
MUST WATCH : ದೇವಸ್ಥಾನದ ಜಾಗ ಅತಿಕ್ರಮಣ ಆರೋಪ – ಗ್ರಾಮಸ್ಥರಿಂದ ದಿಢೀರ್ ಪ್ರತಿಭಟನೆ





