Koppala ದಲ್ಲಿ ಮದುವೆಯಾಗಿ ಕೇವಲ ಒಂದು ತಿಂಗಳೊಳಗೆ ನವವಿವಾಹಿತೆ ಪತಿಯನ್ನು ಬಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ…

Koppala ಜಿಲ್ಲೆಯಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಮದುವೆಯಾಗಿ ಕೇವಲ ಒಂದು ತಿಂಗಳೊಳಗೆ ನವವಿವಾಹಿತೆ ಪತಿಯನ್ನು ಬಿಟ್ಟು ನಾಪತ್ತೆಯಾಗಿದ್ದು, ಈ ವಿಷಯ ತಿಳಿದ ಮಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ದುರಂತದಿಂದ ಕುಟುಂಬದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.
ಮದುವೆಯಾಗಿ ಒಂದು ತಿಂಗಳಲ್ಲೇ ನಾಪತ್ತೆ
ಮೂಲತಃ ಕೊಪ್ಪಳದ ಗೌರಿ ಅಂಗಳ ನಿವಾಸಿ ನಾಗರಾಜ್ ಅವರ ವಿವಾಹ Sindhanur ನಿವಾಸಿ ಸಂಜನಾ ಅವರೊಂದಿಗೆ ಫೆಬ್ರವರಿ 8ರಂದು ನಡೆದಿತ್ತು. ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ ಕೊಪ್ಪಳದ ಪಾರ್ಥಾ ಕಲ್ಯಾಣ ಮಂಟಪದಲ್ಲಿ ಮದುವೆ ನೆರವೇರಿತ್ತು. ನಂತರ ದಂಪತಿ ನಾಗರಾಜ್ ಅವರ ಮನೆಯ ಮೇಲ್ಮಹಡಿಯಲ್ಲಿ ವಾಸವಿದ್ದರು.
MUST READ : Gold & Silver Rate : ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ..!!
ಆದರೆ, ಮಾರ್ಚ್ 21ರ ರಾತ್ರಿ ಸುಮಾರು 8.30ರ ವೇಳೆಗೆ, ಆರೋಗ್ಯ ಸರಿ ಇಲ್ಲ ಎಂದು ಹೇಳಿ ಔಷಧ ತರಲು ಪತಿಯನ್ನು ಕಳುಹಿಸಿದ್ದ ಸಂಜನಾ, ಪತಿ ಮನೆಗೆ ಮರಳುವಷ್ಟರಲ್ಲಿ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.
ಪತ್ನಿಗಾಗಿ ಪತಿ ಹುಡುಕಾಟ; ಪೊಲೀಸ್ ದೂರು ದಾಖಲು
ಪತ್ನಿ ಮನೆಯಲ್ಲಿ ಕಾಣಿಸದ ಹಿನ್ನೆಲೆಯಲ್ಲಿ ನಾಗರಾಜ್ ತಮ್ಮ ಸಂಬಂಧಿಕರು ಹಾಗೂ ಪರಿಚಿತರ ಮನೆಗಳಲ್ಲಿ ಹುಡುಕಾಟ ನಡೆಸಿದರು. ಆದರೆ ಎಲ್ಲಿಯೂ ಮಾಹಿತಿ ಸಿಗದ ಕಾರಣ, ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನೂ ನಾಪತ್ತೆಯಾಗಿರುವ ಯುವತಿ ತನ್ನ ತವರು ಮನೆಗೂ ತೆರಳಿಲ್ಲ ಎಂದು ತಿಳಿದುಬಂದಿದೆ. ಆಕೆಯ ಸಹೋದರ ಸಹ ಹುಡುಕಾಟದಲ್ಲಿ ತೊಡಗಿದ್ದಾರೆ. ದೂರಿನಲ್ಲಿ ಸಂಜನಾ ಅವರ ಕೈಯಲ್ಲಿ “ರವಿ” ಎಂಬ ಟ್ಯಾಟೂ ಇರುವುದಾಗಿ ಉಲ್ಲೇಖಿಸಲಾಗಿದೆ.

ಸೊಸೆ ನಾಪತ್ತೆ ವಿಚಾರ ತಿಳಿದು ಮಾವ ಸಾವು
ಈ ನಡುವೆ ಮತ್ತೊಂದು ದುರ್ಘಟನೆ ಸಂಭವಿಸಿದೆ. ಸೊಸೆ ನಾಪತ್ತೆಯಾದ ವಿಷಯ ತಿಳಿದು ನಾಗರಾಜ್ ಅವರ ತಂದೆ ಖಂಡೆಪ್ಪ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
MUST READ : PDOಗಳದ್ದೇ ಏಕಪಕ್ಷೀಯ ಆಡಳಿತ – ಆಡಳಿತಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ..! | PAVAGADA NEWS |




