
SKY WALK COLLAPSES IN KOLAR : ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ (Lorry) ಡಿಕ್ಕಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೈವಾಕ್ (Skywalk) ಮುರಿದು ಬಿದ್ದ ಪರಿಣಾಮ ಕಾರು ಜಖಂಗೊಂಡ ಘಟನೆ ಕೋಲಾರ (Kolar) ಹೊರವಲಯದ ಕೊಂಡರಾಜನಹಳ್ಳಿಯಲ್ಲಿ ನಡೆದಿದೆ. ಸ್ಕೈವಾಕ್ ಪಿಲ್ಲರ್ಗೆ ಲಾರಿ ಡಿಕ್ಕಿಯಾದ ಪರಿಣಾಮ ಸ್ಕೈವಾಕ್ ಮುರಿದು ಬಿದ್ದಿದೆ.
ಅಪಘಾತದಿಂದ ಸ್ಕೈವಾಕ್ನಲ್ಲಿ ತೆರಳುತ್ತಿದ್ದ ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯ ಹಿನ್ನೆಲೆಯಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತ ಗೊಂಡಿತ್ತು.
ಇನ್ನು ಘಟನಾ ಸ್ಥಳಕ್ಕೆ ತಕ್ಷಣವೇ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದರು. ಬೃಹತ್ ಎರಡು ಕ್ರೇನ್ಗಳ ಸಹಾಯದಿಂದ ಸ್ಕೈವಾಕ್ನ ಅವಶೇಷಗಳನ್ನು ತೆರವುಗೊಳಿಸಲು ಸುಮಾರು ನಾಲ್ಕೈದು ಗಂಟೆಗಳ ಕಾಲ ಶ್ರಮವಹಿಸಲಾಯಿತು.
ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಲಾರಿಯ ಅತಿವೇಗ ಅಥವಾ ನಿರ್ಲಕ್ಷ್ಯವೇ ಕಾರಣವೆಂಬ ಬಗ್ಗೆ ತನಿಖೆ ನಡೆಯುತ್ತಿದೆ.

