Bengaluru : ಫಾರಿನ್ ಸ್ಟೈಲಲ್ಲಿ ಪ್ರಪೋಸ್ ಮಾಡ್ತೀನಿ ಅಂತ ಸೀಮೆ ಎಣ್ಣೆ ಸುರಿದು ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ..!

ಪ್ರೇಯಸಿಯೊಬ್ಬಳು ಫಾರಿನ್ ಟೈಪ್ ಲವ್ ಪ್ರಪೋಸ್ ಮಾಡ್ತೀನಿ ಅಂತೇಳಿ ಪ್ರಿಯಕರನನ್ನು ತನ್ನ ಮನೆಗೆ ಕರೆಸಿಕೊಂಡು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತೈಗೈದಿರುವ ಘಟನೆ Bengaluru ನಗರದಲ್ಲಿ ನಡೆದಿದೆ.
ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ಘಟನೆ
ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕನನ್ನುಕಿರಣ್ ಎಂದು ಗುರುತಿಸಲಾಗಿದೆ. ಇನ್ನು ಕಿರಣ್ ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದವ. ಬೆಂಗಳೂರಿನಲ್ಲಿ ವಾಸವಿದ್ದು, ವಿಐ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನು ಇಲ್ಲಿಯೇಪ್ರೇಮಾ ಸಹ ಕೆಲಸ ಮಾಡ್ತಿದ್ದಳಂತೆ, ಈ ಮಧ್ಯೆ ಇಬ್ಬರಿಗೂ ಸ್ನೇಹ ಶುರುವಾಗಿದ್ದು, ಬಳಿಕ ಪ್ರೀತಿಗೆ ತಿರುಗಿತ್ತಂತೆ. ಆದ್ರೆ ಈ ನಡುವೆ ಅದ್ಯಕೋ ಇಬ್ಬರ ಮಧ್ಯೆ ಅದೇನಾಯ್ತೋ ಗೊತ್ತಿಲ್ಲ. ಇಬ್ಬರ ಬಿನ್ನಾಭಿಪ್ರಾಯ ಉಂಟಾಗಿ ಕಿರಣ್ ಪ್ರೇಮಾಳನ್ನ ದೂರ ಮಾಡಲು ಆರಂಭಿಸಿದ್ನಂತೆ.

ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ..!
ಇನ್ನು ಇದ್ರಿಂದ ಮನನೊಂದಿದ್ದ ಪ್ರೇಮಾ, ಪ್ರಿಯಕರ ಕಿರಣ್ಗೆ ಪಾಠ ಕಲಿಸುಲು ಸಂಚು ರೂಪಿಸಿದ್ಳಂತೆ. ಆದ್ರಂತೆ ನಿನ್ನೆ ಬೆಳಗ್ಗೆ ತಾಯಿ ಹಾಗೂ ಆಕೆಯ ಸಹೋದರ ಮನೆಯಿಂದ ಹೊರಟ ಬಳಿಕ, ಕಿರಣ್ಗೆ ಪೋನ್ ಮಾಡಿ ಮನೆಗೆ ಬಾ ಎಂದು ಕರೆದಿದ್ದಾಳೆ. ಇನ್ನು ನೆಲಮಂಗಲಕ್ಕೆ ಹೋಗಬೇಕಿದ್ದ ಪ್ರೇಮಾ ಕರೆದಾದ ಆಕೆಯ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಕಿರಣ್ನನ್ನ ಆತ್ಮೀಯವಾಗಿ ಬರಮಾಡಿಕೊಂಡ ಪ್ರೇಮಾ, ಫಾರಿನ್ ಸ್ಟೈಲ್ ನಲ್ಲಿ ಪ್ರೇಮ ನಿವೇದನೆ ಮಾಡ್ತೀನಿ ಅಂತ ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳಿಗೆ ಹಗ್ಗ ಕಟ್ಟಿ ಬಿಗಿದಿದ್ದಾಳೆ. ಬಳಿಕ ಕಿರಣ್ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಇನ್ನು ತಪ್ಪಿಸಕೊಳ್ಳಲಾಗದೇ ಕಿರಣ್ ಸ್ಥಳದಲ್ಲೇ ಸಜೀವ ದಹನವಾಗಿದ್ದಾನೆ.
READ THIS : ಗೃಹ ಸಚಿವರ ಮೇಲೆ FIR ದಾಖಲಿಸಲು ಖಡಕ್ ಸೂಚನೆ..!
ಮಾಯಗಾತಿಯ ರಹಸ್ಯ ಬಯಲಾಗಿದ್ದು ಹೇಗೆ?
ಇನ್ನು ಯುವಕನ ಕಿರುಚಾಟ ಕೇಳಿ ಸ್ಥಳೀಯರು ಮಾಹಿತಿ ನೀಡಿದ ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಷ್ಟರಲ್ಲಾಗಲೇ ಕಿರಣ್ ಸಾವನ್ನಪ್ಪಿದ್ದಾನೆ. ಇನ್ನು ಮೊದಲು ಆತ್ಮಹತ್ಯೆ ಎಂದು ಶಂಕಿಸಿದ್ದ ಪೊಲೀಸರು, ಬಳಿಕ ಯುವತಿಯನ್ನ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಂದಿದೆ. ಯುವತಿ ಪ್ರೇಮಾ ಮೊದಲೇ ಸೀಮೆಎಣ್ಣೆ ಖರೀದಿಸಿ ಇಟ್ಟುಕೊಂಡಿದ್ದು, ಅಲ್ದೇ, ಕೃತ್ಯದ ದೃಶ್ಯವನ್ನ ಮೋಬೈಲ್ ಸೆರೆಹಿಡಿದಿದ್ದು, ಆಕೆಯ ಮೋಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರೇಮಾಳನ್ನ ವಶಕ್ಕೆ ಪಡೆದು ವಿಚಾರಣೆ
ಇನ್ನು ವಿಷಯ ತಿಳಿದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರೇಮಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಇದ್ರಲ್ಲಿ ಇನ್ನು ಯಾರಾದ್ರೂ ಭಾಗಿಯಾಗಿದ್ದಾರಾ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
MUST WATCH : ಲೋಕಾ ಬಲೆಗೆ ರೆಡ್ ಹ್ಯಾಂಡ್ ಆಗಿ ತಗ್ಲಾಕೊಂಡ SDA ಸಿಬ್ಬಂದಿ





