ಗೃಹ ಸಚಿವರ ಮೇಲೆ FIR ದಾಖಲು ಮಾಡುವಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ.

ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಮೇಲೆ FIR ದಾಖಲು ಮಾಡುವಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ. ಸಾರ್ವಜನಿಕವಾಗಿ ಬೆಟ್ಟಿಂಗ್ ಕಾನೂನುಬಾಹಿರ. ಸಮಾಜದಲ್ಲಿ ಬೆಟ್ಟಿಂಗ್ ದಂಧೆಯನ್ನು ತಡೆಯಬೇಕಿದ್ದ ಇಲಾಖೆಯ ಸಚಿವರೇ ಇದೀಗ ಬೆಟ್ಟಿಂಗ್ ಆರೋಪದಲ್ಲಿ ಸಿಲುಕಿಕೊಂಡಿದ್ದಾರೆ. ಗೃಹ ಸಚಿವರು ಬಹಿರಂಗವಾಗಿ ನೀಡಿದ್ದ ಹೇಳಿಕೆಯೇ ಸಚಿವರಿಗೆ ಉರುಳಾಗಿದೆ.

READ THIS : ಕಾರ್ಮಿಕರಿಗೆ ಗುಡ್ ನ್ಯೂಸ್ – ಕೆಲಸದ ಸ್ಥಳದಲ್ಲೇ ಸಿಗಲಿದೆ ಉಚಿತ ಚಿಕಿತ್ಸೆ.!
ವಿಜಯಪುರ ತಂಡ ಗೆಲ್ಲುತ್ತೆ ಎಂದು 500 ರೂಪಾಯಿ ಬೆಟ್ಟಿಂಗ್!
ತುಮಕೂರಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಡಿಸಿ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ರಂತೆ. ಬಾಜಿ ಹಣವನ್ನು ಕಳೆದುಕೊಂಡ ಸಚಿವ ಪರಮೇಶ್ವರ್, ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಈ ವಿಷಯವನ್ನು ಸ್ವತಃ ಬಹಿರಂಗಪಡಿಸಿದ್ದರು. ಇದೇ ಈಗ ಪರಂಗೆ ದೊಡ್ಡ ಕಂಟಕ ತರುವಂತಾಗಿದೆ.

FIR ದಾಖಲಿಸುವಂತೆ ಕೋರ್ಟ್ ಆದೇಶ
ಇನ್ನು ಗೃಹ ಸಚಿವರು ಬೆಟ್ಟಿಂಗ್ ನಡೆಸಿದ್ದರ ಬಗ್ಗೆ ನಾಗಭೂಷಣ್ ಅವರು ದೂರು ನೀಡಿದ್ದು, ಈ ಬಗ್ಗೆ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಎಫ್ಐಆರ್ ದಾಖಲಿಸುವಂತೆ ಆದೇಶಿಸಿದೆ. ಅಲ್ದೇ ತುಮಕೂರಿನ ಪೊಲೀಸರಿಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಇದು ಕಾನೂನು ಪಾಲಕರಿಗೇ ಇದು ದೊಡ್ಡ ಮುಜುಗರ ತಂದಿದೆ.
MUST WATCH : ಸಿದ್ದರಾಮಯ್ಯ ಯಾವತ್ತಿದ್ರು ಟಗರುನೇ ಎಂದು ಜಮೀರ್ ಫುಲ್ ಸ್ಮೈಲಿಂಗ್ !




