ರಾಜ್ಯದ Workers ಗಳಿಗೆ ಸಿಹಿ ಸುದ್ದಿ – ಇನ್ಮುಂದೆ ಕೆಲಸ ಮಾಡೋ ಸ್ಥಳದಲ್ಲೇ ಸಿಗಲಿದೆ ಉಚಿತ ಚಿಕಿತ್ಸೆ.!

ರಾಜ್ಯದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ‘ಹೈಟೆಕ್ ಸಂಚಾರಿ ಆರೋಗ್ಯ ಘಟಕ’ ಯೋಜನೆ ಜಾರಿಗೆ ತರಲಾಗಿದ್ದು, ಇನ್ಮುಂದೆ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲೇ ಉಚಿತ ವೈದ್ಯಕೀಯ ಸೇವೆ ಪಡೆಯಲು ಸಾಧ್ಯವಾಗಲಿದೆ.
ಯೋಜನೆ ಏನು?
ನೋಂದಾಯಿತ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ಉದ್ದೇಶಿಸಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂಚಾರಿ ಚಿಕಿತ್ಸಾ ವಾಹನಗಳು (ಕ್ಲಿನಿಕ್ ಆನ್ ವೀಲ್ಸ್) ನೇರವಾಗಿ ಕೆಲಸ ನಡೆಯುವ ಸ್ಥಳಗಳಿಗೆ ಭೇಟಿ ನೀಡಲಿವೆ. ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗುವ ತೊಂದರೆ ತಪ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
READ THIS : CSK ಗೆ ಮತ್ತೊಂದು ಆಘಾತ – IPL ಟೂರ್ನಿಯಿಂದ ಯುವ ಬ್ಯಾಟ್ಸ್ಮನ್ ಔಟ್!

ಮುಖ್ಯ ಅಂಶಗಳು
- ಪ್ರತಿ ಜಿಲ್ಲೆಗೆ ತಲಾ ಮೂರು ಹೈಟೆಕ್ ಸಂಚಾರಿ ವೈದ್ಯಕೀಯ ವಾಹನಗಳ ನಿಯೋಜನೆ
- ಪ್ರತಿ ವಾಹನದಲ್ಲಿ ಒಬ್ಬ ಎಂಬಿಬಿಎಸ್ ವೈದ್ಯ, ನರ್ಸ್, ಫಾರ್ಮಾಸಿಸ್ಟ್ ಮತ್ತು ಲ್ಯಾಬ್ ಟೆಕ್ನಿಷಿಯನ್ ನೇಮಕ
- ಜಿಪಿಎಸ್ ಸೌಲಭ್ಯ ಹೊಂದಿದ ವಾಹನಗಳು, ಬೆಂಗಳೂರಿನ ಕೇಂದ್ರೀಕೃತ ಕಮಾಂಡ್ ಸೆಂಟರ್ ಮೂಲಕ ನಿಗಾ
- ಪ್ರಾಥಮಿಕ ಚಿಕಿತ್ಸೆ, ವೈದ್ಯಕೀಯ ಸಲಹೆ, ಅಗತ್ಯ ಔಷಧ ವಿತರಣೆ ಹಾಗೂ ಡಿಜಿಟಲ್ ಆರೋಗ್ಯ ಸೇವೆಗಳು ಲಭ್ಯ
ಸಹಾಯವಾಣಿ ಮಾಹಿತಿ
ಯೋಜನೆ ಕುರಿತು ಹೆಚ್ಚಿನ ಮಾಹಿತಿ ಅಥವಾ ತುರ್ತು ಸಹಾಯಕ್ಕಾಗಿ ಕಾರ್ಮಿಕ ಇಲಾಖೆ ಸಹಾಯವಾಣಿ ಸಂಖ್ಯೆ 155214 ಅನ್ನು ಸಂಪರ್ಕಿಸಬಹುದು.

MUST WATCH : ದಿನೇ ದಿನೇ ಏರುತ್ತಿದೆ ತಾಪಮಾನ – ರಾಜ್ಯದಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಬಿಸಿಲು..!




