ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್ ನೌಕರನಿಂದಲೇ IPL ಟಿಕೆಟ್ ದಂಧೆ! KSCA ಸದಸ್ಯನೇ ಮಾಸ್ಟರ್ ಮೈಂಡ್!

IPL ಶುರುವಾಗಿದ್ದು, ಕೋಟ್ಯಾಂತರ ಅಭಿಮಾನಿಗಳು ಮ್ಯಾಚ್ ನೋಡಲು ಕಾತರರಾಗಿದ್ದಾರೆ. ಇತ್ತ ಆರ್ಸಿಬಿ ಫ್ಯಾನ್ಸ್ ಅಂತೂ ಲೈವ್ ಅಲ್ಲೇ ಮ್ಯಾಚ್ ನೋಡಬೇಕು ಅಂತಾ ಸ್ಟೇಡಿಯಂನತ್ತ ಬರ್ತಾ ಇದ್ದಾರೆ. ಆದರೆ ಐಪಿಲ್ ಟಿಕೆಟ್ಗಳನ್ನು ಬ್ಲಾಕ್ನಲ್ಲಿ ಮಾರಾಟ ಮಾಡ್ತಾ ಇದ್ದು, ಬ್ಲಾಕ್ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ.
ಬೆಂಗಳೂರಿನಲ್ಲಿ IPL ಟಿಕೆಟ್ ಬ್ಲಾಕ್ ದಂಧೆ
ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್ ಬ್ಲಾಕ್ ದಂಧೆ ನಡೆಸುತ್ತಿದ್ದ ಕೆಎಸ್ಸಿಎ ಸದಸ್ಯ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಹೋಟೆಲ್ ಉದ್ಯೋಗಿಯನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. 17 ಲಕ್ಷ ರೂ. ಮೌಲ್ಯದ ಟಿಕೆಟ್ಗಳನ್ನು ಖರೀದಿ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇವರ ವಿರುದ್ಧ ಇದೀಗ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿಗಿದ್ದು, ಓರ್ವನನ್ನು ಬಂಧಿಸಲಾಗಿದೆ.
READ THIS : ಶಿಕ್ಷಣ ಇಲಾಖೆ ಎಡವಟ್ಟು – ತಡವಾಗುತ್ತಾ SSLC ಎಕ್ಸಾಂ ರಿಸಲ್ಟ್?

ಒಂದು ಟಿಕೆಟ್ಗೆ 15,000ದಿಂದ 19,000 ರೂ.
ಸಿಸಿಬಿ ಡಿಸಿಪಿ ಹರಿಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಲಕ್ಷ್ಮೀ ಕ್ಯಾಟರ್ಸ್ ಹೋಟೆಲ್ನ ಕ್ಯಾಪ್ಟನ್ ಚಂದ್ರಶೇಖರ್ ಸಿಕ್ಕಿಬಿದ್ದಿದ್ದಾನೆ. ಇವರು 15 ಸಾವಿರ ರೂಪಾಯಿ ಬೆಲೆಯ ಟಿಕೆಟ್ಗಳನ್ನು ಬರೋಬ್ಬರಿ 19 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಲಾಕ್ ಮಾಡಿದ್ದಾರೆ. ಈತನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಆಘಾತಕಾರಿ ಮಾಹಿತಿಯನ್ನು ನೀಡಿದ್ದಾನೆ.
KSCA ಸದಸ್ಯನಿಂದಲೇ ನಡಿತಿದೆ ದಂಧೆ
ಈ ಐಪಿಎಲ್ ಟಿಕೆಟ್ ಮಾರಾಟ ದಂಧೆಯಲ್ಲಿ KSCA ಸದಸ್ಯ ಗಣೇಶ್ ಹರಿಕೇಶ್ ಭಾಗಿಯಾಗಿರುವುದರ ಬಗ್ಗೆ ಬಾಯ್ಬಿಟ್ಟಿದ್ದಾನೆ. ಇನ್ನು ಆರೋಪಿ ಗಣೇಶ್ ಹರಿಕೇಶ್, ಎರಡು ಖಾಸಗಿ ಕಂಪನಿಗಳ ಹೆಸರಿನಲ್ಲಿ ಆನ್ಲೈನ್ ಮೂಲಕ ದೊಡ್ಡ ಪ್ರಮಾಣದಲ್ಲಿ ಟಿಕೆಟ್ಗಳನ್ನು ಖರೀದಿಸಿ, ಚಂದ್ರಶೇಖರ್ ಮೂಲಕ ಅವುಗಳನ್ನು ಬ್ಲಾಕ್ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಸಂಬಂಧ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕ್ರಮಕ್ಕೆ ಮುಂದಾಗಿದ್ದಾರೆ.
MUST WATCH : ಅಂಬೇಡ್ಕರ್ ಫೋಟೋ ಇದ್ದ ಬ್ಯಾನರ್ ಧ್ವಂಸ – ಮಸ್ಕಲ್ ಗ್ರಾಮದಲ್ಲಿ ರೊಚ್ಚಿಗೆದ್ದ ದಲಿತರು





