SSLC ವಿದ್ಯಾರ್ಥಿಗಳಿಗೆ ಇದೀಗ ಢವ ಢವ ಶುರುವಾಗಿದೆ.

2026ನೇ ಸಾಲಿನ SSLC ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇದ್ರಿಂದ ಪ್ರಸಕ್ತ ಸಾಲಿನಿಂದಲೇ SSLC ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಗ್ರೇಡ್ ನೀಡಬೇಕೆಂದು ಪಟ್ಟು ಹಿಡಿದಿದ್ದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ಹಗ್ಗ-ಜಗ್ಗಾಟದ ತಲೆ ಬಿಸಿ ವಿದ್ಯಾರ್ಥಿಗಳಿಗೆ ತಟ್ಟಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಹೈಕೋರ್ಟ್ ತೀರ್ಪು
ಚಿಕ್ಕಮಗಳೂರಿನ ವಿದ್ಯಾರ್ಥಿನಿ ಸಹನಾ ಆರ್. ನಾಯ್ಕ್ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಏಕಸದಸ್ಯ ಪೀಠ, ತೃತೀಯ ಭಾಷೆಗಳಿಗೆ ಅಂಕಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರೊಂದಿಗೆ ಗ್ರೇಡಿಂಗ್ ವ್ಯವಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಶಿಕ್ಷಣ ಇಲಾಖೆ ಇಕ್ಕಟ್ಟಿನಲ್ಲಿ
ಪರೀಕ್ಷೆ ನಡೆಯುವ ಸಮಯದಲ್ಲೇ ಗ್ರೇಡಿಂಗ್ ವ್ಯವಸ್ಥೆ ಪರಿಚಯಿಸಲು ಮುಂದಾದ ಶಿಕ್ಷಣ ಇಲಾಖೆ ಈಗ ಸಂಕಷ್ಟಕ್ಕೆ ಸಿಲುಕಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ
- ಮೇಲ್ಮನವಿ ಸಲ್ಲಿಸಬೇಕೇ?
- ಅಥವಾ ಈ ವರ್ಷ ಅಂಕಗಳನ್ನೇ ನೀಡಬೇಕೇ?
ಎಂಬ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ.

ಫಲಿತಾಂಶ ವಿಳಂಬ ಸಾಧ್ಯತೆ
ಈ ಗೊಂದಲದ ಪರಿಣಾಮವಾಗಿ SSLC ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ
ತೃತೀಯ ಭಾಷೆಯ ಮೌಲ್ಯಮಾಪನ ಕುರಿತ ವಿದ್ಯಾರ್ಥಿಗಳಲ್ಲಿ ಒತ್ತಡ ಹೆಚ್ಚಿಸಿದೆ. ಹೆಚ್ಚಿನ ಅಂಕ ನಿರೀಕ್ಷಿಸಿದ್ದ ವಿದ್ಯಾರ್ಥಿಗಳಿಗೂ ಈಗ ಗೊಂದಲ ಉಂಟಾಗಿದೆ.
READ THIS : ಚಿಕನ್ ಪ್ರಿಯರೇ ಎಚ್ಚರ! ಕರ್ನಾಟಕದಲ್ಲಿ H5N1 ವೈರಸ್ ಪತ್ತೆ!
ಇಲಾಖೆ ಎಡವಿದ್ದು ಎಲ್ಲಿ?
-ಏನೇ ಬದಲಾವಣೆ ತಂದರೂ ಶೈಕ್ಷಣಿಕ ವರ್ಷದ ಆರಂಭದಲ್ಲಿ ತರಬೇಕು
-ಬದಲಾವಣೆ ಬಗ್ಗೆ ಪೋಷಕರು ವಿದ್ಯಾರ್ಥಿಗಳು ಸಂಬಂಧಪಟ್ಟವರಿಗೆ ಮಾಹಿತಿ ಕೊಡಬೇಕು
-ಶೈಕ್ಷಣಿಕ ವರ್ಷ ಕೊನೆಯ ಹಂತದಲ್ಲಿ ಗ್ರೇಡಿಂಗ್ ನಿರ್ಧಾರ ತೆಗೆದುಕೊಂಡ ಇಲಾಖೆ -ಪರೀಕ್ಷೆ ನಡೆಯುವ ಸಂದರ್ಭದಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ಎಂದದ್ದು ಇಲಾಖೆ ಮಾಡಿದ ತಪ್ಪು
-2026 ನೇ ಸಾಲಿನ ಪರೀಕ್ಷೆ ಮುಗಿದ ಮೇಲೆ ಪರೀಕ್ಷೆ ಬಗ್ಗೆ ಕರಡು ಅಧಿಸೂಚನೆ ಹೊರಡಿಸಿದ್ದು ಮೂರ್ಖತನ
-ಶಿಕ್ಷಣ ಇಲಾಖೆ & ಅಧಿಕಾರಿಗಳ ಯಡವಟ್ಟಿಗೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಮುಂದಿನ ನಡೆ ಏನು?
ತೃತೀಯ ಭಾಷೆಗೆ ಅಂಕ ನೀಡಿದರೆ ಒಟ್ಟಾರೆ ಫಲಿತಾಂಶದ ಶೇಕಡಾವಾರು ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಸರ್ಕಾರ ಮುಂದಿನ ಕೆಲವು ದಿನಗಳಲ್ಲಿ ಕಾನೂನು ಸಲಹೆ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಒಟ್ಟಿನಲ್ಲಿ, ಹೈಕೋರ್ಟ್ ತೀರ್ಪಿನಿಂದ SSLC ಪರೀಕ್ಷಾ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿದ್ದು, ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸ್ಪಷ್ಟತೆಗೆ ಕಾಯುತ್ತಿದ್ದಾರೆ.
MUST WATCH : ಮಹಿಳಾ ಮೀಸಲಾತಿ ಬಿಲ್ ಮಂಡನೆ ಬೊಮ್ಮಾಯಿ ಹೀಗ್ಯಾಕಂದ್ರು ಗೊತ್ತಾ?




