H5N1 VIRUS : ಚಿಕನ್ ಪ್ರಿಯರೇ ಹುಷಾರ್ – ರಾಜ್ಯಕ್ಕೆ ಕಾಲಿಟ್ಟಿದೆ ಹಕ್ಕಿ ಜ್ವರ

ಕರ್ನಾಟಕದಲ್ಲಿ H5N1 ಹಕ್ಕಿ ಜ್ವರ (Bird flu) ಪತ್ತೆಯಾಗಿದೆ. ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂಗಳಲ್ಲಿ ತಪಾಸಣೆ ನಡೆಲಾಗಿದೆ. ಈ ವೇಳೆ ಕೋಳಿಗಳಲ್ಲಿ H5N1 ವೈರಸ್ ಪತ್ತೆಯಾಗಿದೆ. ಮೊದಲ ತಪಾಸಣೆಯಲ್ಲಿ H5 N1 ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲರ್ಟ್ ನೀಡಲಾಗಿದೆ. ವೈರಸ್ ಪತ್ತೆಯಾದ ಪೌಲ್ಟ್ರಿ ಫಾರಂ ಕೋಳಿಗಳನ್ನು ಗುಂಡಿ ಹಾಕಿ ಮುಚ್ಚಲಾಗಿದೆ.

ಪೌಲ್ಟ್ರಿ ಫಾರಂನಲ್ಲಿ ವೈರಸ್ ಪತ್ತೆ
ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಪೌಲ್ಟ್ರಿ ಫಾರಂನಲ್ಲಿ ವೈರಸ್ ಪತ್ತೆಯಾಗಿದೆ. ಇದೇ ಫಾರಂನಿಂದ ರಾಜ್ಯದ ವಿವಿಧ ಭಾಗಗಳಿಗೆ ಕೋಳಿಗಳನ್ನು ಸರಬರಾಜು ಮಾಡಲಾಗುತ್ತಿದ್ದು, ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಅಲ್ಲಿನ ಕೋಳಿಗಳನ್ನು ಗುಂಡಿ ತೆಗೆದು ಮುಚ್ಚಲಾಗಿದೆ. ಇನ್ನು ಸೋಂಕು ಪತ್ತೆಯಾದ ಹಿನ್ನೆಲೆ ಕೋಳಿ ಸಾಗಣೆ ಮಾಡುತ್ತಿದ್ದ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ವೈರಸ್ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
READ THIS : BREAKING|ಖಾಸಗಿ ಬಸ್ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು – 6 ಜನ ಸಜೀವ ದಹನ!

ಕೋಳಿ ಅಂಗಡಿಗಳಲ್ಲಿ ಕಡ್ಡಾಯ ತಪಾಸಣೆ
ಪಶು ವೈದ್ಯಾಧಿಕಾರಿಗಳು ಸುತ್ತಮುತ್ತಲಿನ ಪಂಚಾಯಿತಿಗಳಿಗೆ ನೋಟಿಸ್ ನೀಡಿದ್ದು, ಕೋಳಿ ಸಾಕಾಣಿಕೆ ಶೆಡ್ಗಳು ಹಾಗೂ ಕೋಳಿ ಅಂಗಡಿಗಳಲ್ಲಿ ಕಡ್ಡಾಯ ತಪಾಸಣೆ ನಡೆಸುವಂತೆ ಸೂಚಿಸಿಲಾಗಿದೆ.
H5 N1 ವೈರಸ್ ತೀವ್ರವಾಗಿ ಹರಡುವ ಸಾಧ್ಯತೆ
ಬಿಸಿಲ ತಾಪದಲ್ಲಿ H5 N1 ಹಕ್ಕಿ ಜ್ವರ ಬಂದಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಬಾರಿ ಬಿಸಿಲ ಬೇಗೆ ಹೆಚ್ಚಾಗಿದೆ. ಇದರಿಂದ ಕೋಳಿಗಳಲ್ಲಿH5 N1 ವೈರಸ್ ತೀವ್ರವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಮುನ್ನಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

MUST WATCH : ಪಾವಗಡ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ – ಮಾದರ ಮಹಾಸಭಾ ಸಂಘ ಆಕ್ರೋಶ




