Murder : ಆರೈಕೆ ಮಾಡಿ ರೋಸಿ ಹೋದನಾ ಮಗ – ಹಾಸಿಗೆ ಹಿಡಿದಿದ್ದ ಅಮ್ಮನನ್ನು 4ನೇ ಮಹಡಿಯಿಂದ ಕೆಳಗೆಸೆದು ಕೊಂದ ಮಗ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಿಕೊಳ್ಳಲಾಗದೆ ಮಗನೇ ಹೆತ್ತ ತಾಯಿಯನ್ನು ಮಹಡಿಯ ಮೇಲಿಂದ ತಳ್ಳಿ ಕೊಲೆ ಮಾಡಿದ ಘಟನೆ ನಡೆದಿದೆ.
ಮಲ್ ಲೇಔಟ್ನಲ್ಲಿ ಘಟನೆ
ರಾಜರಾಜೇಶ್ವರಿ ನಗರದಲ್ಲಿರುವ ಬೆಮಲ್ ಲೇಔಟ್ನಲ್ಲಿ ಈ ಘಟನೆ ಸಂಭವಿಸಿದೆ. ಮೃತ ತಾಯಿಯನ್ನು ಸಾವಿತ್ರಮ್ಮ (72) ಎಂದು ಗುರುತಿಸಲಾಗಿದ್ದು, ಅವರು ಕಳೆದ 4-5 ವರ್ಷಗಳಿಂದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರು.
READ THIS : Bengaluru|ಲವ್ ಜಿಹಾದ್ ಆರೋಪ – ಮದುವೆಗೆ ನಿರಾಕರಿಸಿದ ಯುವತಿ ಮೇಲೆ ಹಲ್ಲೆ?!
ಮಹಡಿಯಿಂದ ತಳ್ಳಿ ಕೊಂದ ಮಗ!
ತಾಯಿಯ ಅನಾರೋಗ್ಯ ಬಳಲುತ್ತಿರುವುದನ್ನು ಕಂಡು ಬೇಸರದಲ್ಲಿದ್ದ ಮಗ ವೆಂಕಟೇಶ್, ತಾಯಿಯನ್ನು ನಾಲ್ಕನೇ ಮಹಡಿಯಿಂದ ತಳ್ಳಿ Murder ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Murder – ಆರೋಪಿ ಪೊಲೀಸ್ ವಶಕ್ಕೆ!
ಘಟನೆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಇಳಿ ವಯಸ್ಸಿನ ಹೆತ್ತ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗಿದ್ದ ಮಗ ಯಾರು ಊಹಿಸದ ಕೆಲಸವನ್ನು ಮಾಡಿದ್ದಾನೆ.
MUST WATCH : ಶಾಸಕ ವಿನಯ್ ಕುಲಕರ್ಣಿ ಕೊಲೆಗಾರ ಅಂತಾ ತೀರ್ಪು- 10 ವರ್ಷಗಳ ಬಳಿಕ ಮಹತ್ವದ ತೀರ್ಪು ಪ್ರಕಟ





