ರಾಜ್ಯದಲ್ಲಿ ಲವ್ ಜಿಹಾದ್ (Love Jihad) ಆರೋಪಗಳು ಹೆಚ್ಚಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಲವ್ ಜಿಹಾದ್ ಆರೋಪ ಪ್ರಕರಣಗಳು ಕೇಳಿ ಬರ್ತಾ ಇದ್ದು, ಈಗಾಗಲೇ ಹಲವು ಕಡೆ ಲವ್ ಜಿಹಾದ್ ಕೃತ್ಯಕ್ಕೆ ಹಿಂದೂ ಹುಡುಗಿಯರು ಬಲಿಯಾಗಿರುವ ಘಟನೆಗಳು ಅಲ್ಲಲ್ಲಿ ಬೆಳಕಿಗೆ ಬರ್ತಿವೆ. ಇದೀಗ ಬೆಂಗಳೂರಿನಲ್ಲೂ Love Jihad ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಡೆಲ್ ಹಾಗೂ ನಟಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಯುವತಿ ಮೇಲೆ ಮನಬಂದಂತೆ ಹಲ್ಲೆ ಆರೋಪ
ಬೆಂಗಳೂರಿನಲ್ಲಿ ಮಾಡೆಲ್ ಒಬ್ಬರಿಗೆ ಲವ್ ಜಿಹಾದ್ ಆರೋಪದಡಿ ಮುಸ್ಲಿಂ ಯುವಕನೊಬ್ಬ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮದುವೆಯಾಗುವಂತೆ ಜುಹೇಬ್ ಎಂಬ ಯುವಕ ಒತ್ತಾಯಿಸಿದ್ದ, ಆದರೆ ಮದುವೆಗೆ ಹಿಂದೂ ಯುವತಿ ನಿರಾಕರಿಸಿದ್ದಕ್ಕೆ ಮನಬಂದಂತೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
READ THIS : ಬಿಸಿಲ ಬೇಗೆಗೆ ಜನರು ತತ್ತರ – ಏನು ಮಾಡಬೇಕು? ಏನು ಮಾಡಬಾರದು?

ಮದುವೆಯಾಗದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ
ಇನ್ನು ಸಂತ್ರಸ್ತ ಯುವತಿ ವೃತ್ತಿಯಲ್ಲಿ ಮಾಡೆಲ್ ಮತ್ತು ನಟಿಯಾಗಿದ್ದು, ಮಾಡೆಲಿಂಗ್ ಇಂಡಸ್ಟ್ರಿಯಲ್ಲಿರುವ ಜುಹೇಬ್ ಎಂಬಾತನ ಪರಿಚಯವಾಗಿತ್ತು. 2024 ರಿಂದ ಜುಹೇಬ್ ಯುವತಿಯ ಹಿಂದೆ ಬಿದ್ದಿದ್ದು, ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಯುವತಿ ಆತನನ್ನು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿಯು, “ನೀನು ನನ್ನನ್ನು ಮದುವೆಯಾಗದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಲು ಪ್ರಾರಂಭಿಸಿದ್ದ. ಯುವತಿಯು ಫ್ರೇಜರ್ ಟೌನ್ನಲ್ಲಿದ್ದಾಗ ಆರೋಪಿಯು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಾಡೆಲ್ ಆರೋಪ ಮಾಡಿದ್ದು, ಈ ಸಂಬಂಧ ಸೋಶಿಯಲ್ ಮಿಡಿಯಾದಲ್ಲಿ ಮಾಡೆಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸಂತ್ರಸ್ತ ಯುವತಿಯು ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಜುಹೇಬ್ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
MUST WATCH : ಪ್ರಧಾನಿ ಮೋದಿಯನ್ನು ದಳಪತಿ ಹೆಂಗೆ ಹೊಗಳಿದ್ರು ನೋಡಿ..!





