Bengaluru : 14 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ!

Bengaluru ನಗರದಲ್ಲಿ ಮನಕಲಕುವ ಘಟನೆೊಂದು ನಡೆದಿದೆ. ನಗರದ ವೈಟ್ಫೀಲ್ಡ್ ಸಮೀಪದ ಇಮ್ಮಡಿ ಹಳ್ಳಿಯಲ್ಲಿ ತಾಯಿ–ಮಗಳು ದಾರುಣ ಅಂತ್ಯ ಕಂಡಿದ್ದಾರೆ .
ಮಗಳನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ
40 ವರ್ಷದ ಸುವರ್ಣ ಎಂಬ ಮಹಿಳೆ ತನ್ನ 14 ವರ್ಷದ ಮಗಳು ಕಾರುಣ್ಯಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ತಾವೂ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಇನ್ನು ಈ ಘಟನೆ ನಡೆದ ವೇಳೆ ಸುವರ್ಣ ಮನೆಯಲ್ಲಿ ಅವರ ಅತ್ತೆ ಮತ್ತು ಮಾವ ಇದ್ದರು ಎಂದು ತಿಳಿದುಬಂದಿದೆ. ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
READ THIS : Tumakuru|ಕ್ಯಾಂಟರ್ಗೆ KSRTC ಬಸ್ ಡಿಕ್ಕಿ – ಇಬ್ಬರು ಸಾವು

ಪೊಲೀಸರು ಭೇಟಿ, ಪರಿಶೀಲನೆ
ಸ್ಥಳಕ್ಕೆ ವೈಟ್ಫೀಲ್ಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಈ ಘಟನೆಗೆ ಏನು ಕಾರಣ ಎನ್ನುವುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.
MUST WATCH : ಸರ್ಕಾರದ ಖಜಾನೆ ಬಗ್ಗೆ ಸುಳ್ಳು ಹೇಳಿಕೆ ಬೇಡ ವಿ. ಸೋಮಣ್ಣ ವಿರುದ್ಧ ಗುಬ್ಬಿ ಶಾಸಕ ಗರಂ




