Sira : ಹೈವೇಯಲ್ಲಿ ಏಕಾಏಕಿ ಕ್ಯಾಂಟರ್ ಟೈಯರ್ ಬ್ಲ್ಯಾಸ್ಟ್ – ನಿಂತಿದ್ದ ಕ್ಯಾಂಟರ್ಗೆ ಬಸ್ ಡಿಕ್ಕಿ.. ಇಬ್ಬರು ಸಾವು

ಹೆದ್ದಾರಿಯಲ್ಲಿ ಟೈಯರ್ ಬ್ಲ್ಯಾಸ್ಟ್ ಆಗಿ ನಿಂತಿದ್ದ ಕ್ಯಾಂಟರ್ಗೆ ಹಿಂಬದಿಯಿಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬಸ್ ಡ್ರೈವರ್ ಸೇರಿ ಹಲವು ಮಂದಿ ಪ್ರಯಾಣಿಗರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯೆ ಚಾಲಕ ಸೇರಿ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆ Sira ತಾಲೂಕಿನ ದ್ವಾರಾಳು ಬ್ರಿಡ್ಜ್ ಬಳಿ ಸಂಭವಿಸಿದೆ.
35 ಮಂದಿ ಪ್ರಯಾಣಿಕರಿಗೆ ಗಾಯ
KSRTC ಬಸ್ವೊಂದು ಶಿಡ್ಲಘಟ್ಟದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದು, ಶಿರಾ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಚಿತ್ರದುರ್ಗ ಕಡೆಗೆ ತೆರಳಿತ್ತು. ಇತ್ತ ಶಿರಾದ ದ್ವಾರಳು ಸೇತುವೆ ಬಳಿ ಏಕಾಏಕಿ ಕ್ಯಾಂಟರ್ನ ಟೈಯರ್ ಬ್ಲ್ಯಾಸ್ಟ್ ಆಗಿ, ಹೆದ್ದಾರಿಯಲ್ಲೇ ನಿಂತಿದೆ. ಹಿಂಬದಿಯಿಂದ ಬರ್ತಿದ್ದ ಕೆಎಸ್ಆರ್ಟಿಸಿ ಬಸ್ ಕ್ಯಾಂಟರ್ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿದ್ದ 35 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕೂಡಲೇ ಗಾಯಾಳುಗಳನ್ನು ಶಿರಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

READ THIS : ಮಚ್ಚಿನಿಂದ ಕೊಚ್ಚಿ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!
ಮಾರ್ಗಮಧ್ಯೆ ಇಬ್ಬರು ಸಾವು
ಅದರಲ್ಲಿ ಗಂಭೀರವಾಗಿ ಗಾಯಗೊಂಡ 10 ಮಂದಿ ಪ್ರಯಾಣಿಕರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಯಿತು. ಭೀಕರ ಅಪಘಾತದಲ್ಲಿ ಬಸ್ನ ಚಾಲಕ ಶ್ರೀ ಕಾಂತ್ ಹಾಗೂ ಮತ್ತೋರ್ವ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತಿದ್ದು, ಆದ್ರೆ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಇನ್ನು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ DS ಅಸ್ಗರ್ ಬೇಗ್, ಡಾ ನಾಗರಾಜು, ಡಾ ಸುರೇಶ್ ಸೇರಿದಂತೆ ಹಲವು ವೈದ್ಯರ ತಂಡ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.
ಜಿಲ್ಲಾಸ್ಪತ್ರೆಗೆ ಶಿರಾದ ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು.

ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಸ್ಥಳಕ್ಕೆ ಶಿರಾ ಉಪ ವಿಭಾಗದ ಡಿವೈಎಸ್ಪಿ ಶೇಕರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನೆಡೆಸಿದರು.
ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

MUST WATCH : ಶಾಸಕರಿಗೆ ಖಡಕ್ ವಾರ್ನಿಂಗ್ ಕೊಟ್ರಾ ಡಿಕೆಶಿ – ಮುಂದಿನ ನಡೆ ಬಗ್ಗೆ ಡಿಸಿಎಂ ಏನಂದ್ರು ಗೊತ್ತಾ




