Suicide : ಪ್ರೀತಿ ಹೆಸರಲ್ಲಿ ಪ್ರೇಯಸಿ ಮೋಸ ಮಾಡಿದಳೆಂದು ಪ್ರಿಯಕರ ಸೂಸೈಡ್ ಮಾಡಿಕೊಂಡಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಈ ಪ್ರೀತಿ ಅನ್ನೋ ಮಾಯೆಗೆ ಸಿಲುಕಿ ಯುವಕ ಮತ್ತು ಯುವತಿಯರು ಜೀವ ಬಿಡೋದಕ್ಕೂ ಮುಂದಾಗುತ್ತಿದ್ದಾರೆ.
ನೇಣಿಗೆ ಕೊರಳೊಡ್ಡಿದ್ದ ಯುವಕ
ಮೊನ್ನಯಷ್ಟೇ ಯುವಕನೊಬ್ಬ ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸಿದ್ಲು ಅಂತೇಳಿ ಮನನೊಂದು ನೇಣಿಗೆ ಕೊರಳೊಡ್ಡಿದ್ದ. ಇದೀಗ ಆತ ಆತ್ಮಹತ್ಯೆಗೂ ಮುನ್ನ ತಾನು ಪ್ರೀತಿ ಮಾಡುತ್ತಿದ್ದ ಯುವತಿಗೆ ವಿಡಿಯೋಕಾಲ್ ಮಾಡಿ ಸಾಯುತ್ತಿರುವುದಾಗಿ ತಿಳಿಸಿದ್ದ ಎನ್ನಲಾಗಿದೆ.
ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ
ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಬಿಕಾಂ ಪದವಿ ಪೂರ್ಣಗೊಳಿಸಿದ್ದ 23 ವರ್ಷದ ಅಭಿಷೇಕ್, ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ್ಲು ಅಂತ ಆತ್ಮಹತ್ಯೆ ಮಾಡಿಕೊಂಡಿದ್ದ, ಇದೀಗ ಮೃತ ಅಭಿಷೇಕ್ ಆತ್ಮಹತ್ಯೆಗೆ ಮೊದಲು ಯುವತಿಗೆ ವೀಡಿಯೊ ಕಾಲ್ ಮಾಡಿ, ತಾನು ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದಾನೆ. ಅಲ್ದೇ, ಸಾಯುವ ಮುನ್ನ ಯುವತಿಗೆ ಅಭಿಷೇಕ್ ಕಳುಹಿಸಿದ್ದ ವೀಡಿಯೊ ಕಾಲ್ ಹಾಗೂ ಮೆಸೇಜ್ಗಳ ಸ್ರೀನ್ಶಾಟ್ಗಳು ಪೊಲೀಸರಿಗೆ ದೊರೆತಿವೆ.

READ THIS : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ – ಇಂದಿನ ರೇಟ್ ಚೆಕ್ ಮಾಡಿ
ಡೆತ್ ನೋಟ್ ಬರೆದಿಟ್ಟು, ವಿಡಿಯೋಕಾಲ್ ಮಾಡಿSuicide
ಇನ್ನು ಇಷ್ಟೇ ಅಲ್ಲದೇ, ಮನೆಯವರಿಗೆ ತಿಳಿಯದೆ ಯುವತಿಯೊಂದಿಗೆ ಮದುವೆಯಾಗಿದ್ದಾಗಿ ಅಭಿಷೇಕ್ ಡೆತ್ ನೋಟ್ನಲ್ಲಿ ಬರೆದಿದ್ದಾನೆ. ಅಲ್ದೇ ಈ ಹಿಂದೆ ಯುವತಿಯ ಪೋಷಕರು ಅಭಿಷೇಕ್ ತಮ್ಮ ಮಗಳ ಹಿಂದೆ ಬಿದ್ದಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಂತೆ.
ಈ ಸಂಬಂಧ ಇಬ್ಬರ ನಡುವೆ ಸ್ಟೇಷನ್ನಲ್ಲಿ ರಾಜಿ ಸಂಧಾನ ಕೂಡ ನಡೆಸಲಾಗಿತ್ತು ಎಂದು ತಿಳಿದುಬಂದಿದೆ. ಆದ್ರೆ ಇತ್ತೀಚೆಗೆ ಯುವತಿ ಅಭಿಷೇಕ್ನಿಂದ ದೂರವಾಗಲು ಪ್ರಾರಂಭಿಸಿದ್ಲಂತೆ.
ಇನ್ನು ಇದರಿಂದ ಮನನೊಂದ ಅಭಿಷೇಕ್ ಡೆತ್ ನೋಟ್ ಬರೆದಿಟ್ಟು, ವಿಡಿಯೋಕಾಲ್ ಮಾಡಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ.
ಯುವತಿಯನ್ನು ವಿಚಾರಣೆ
ಸದ್ಯ ಘಟನೆಗೆ ಸಂಬಂಧಿಸಿದಂತೆ ಯಲಹಂಕ ನ್ಯೂ ಟೌನ್ ಪೊಲೀಸರು ಯುವತಿಯನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

MUST WATCH : ತುಮಕೂರು ಸಿಟಿ ಸೆಂಟರ್ ನಲ್ಲೇ ಇದೆಂಥಾ ಕರ್ಮಕಾಂಡ- ಅಧಿಕಾರಿಗಳು ಏನ್ ಮಾಡ್ತಿದ್ದಾರೆ?




