Belagavi : ಪತ್ನಿ ಮತ್ತು ಪ್ರಿಯಕರ ಸೇರಿ ಪತಿಯನ್ನು ಕೊಲೆ ಮಾಡಿದ ಘಟನೆ ಬೆಳ2ಕಿಗೆ ಬಂದಿದೆ. ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ನೀಡಿ ಹತ್ಯೆ ಮಾಡಿದ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

Belagavi Murder Case ನಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಅನಗೋಳ ಪ್ರದೇಶದಲ್ಲಿ ನಡೆದಿದೆ.
ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿ, ಬಳಿಕ ಸಿಲಿಂಡರ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ಪತಿ ಸಾವಿನ ಬಳಿಕ ಅಮಾಯಕಳಂತೆ ನಟಿಸಿದ್ದ ಪತ್ನಿಯ ನಿಜಸ್ವರೂಪ ತನಿಖೆ ವೇಳೆ ಬಯಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮೃತ ವ್ಯಕ್ತಿ ಯಾರು?
ಈ ಪ್ರಕರಣದಲ್ಲಿ ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ Avinash Suppannavar (40) ಮೃತ ವ್ಯಕ್ತಿಯಾಗಿದ್ದಾರೆ.ಘಟನೆ ಸಂಬಂಧ ಪತ್ನಿ Lakshmi Suppannavar ಹಾಗೂ ಆಕೆಯ ಪ್ರಿಯಕರ Kailash Achital ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
MUST READ : CSK vs DC : ಸಂಜು ಸ್ಯಾಮ್ಸನ್ ಅಜೇಯ ಶತಕ – 23 ರನ್ಗಳಿಂದ CSK ಭರ್ಜರಿ ಜಯ..!!!

ಕೊಲೆ ಹೇಗೆ ನಡೆಯಿತು..?
ಮಾರ್ಚ್ 6ರಂದು ಸಂಜೆ 4 ಗಂಟೆಗೆ ಅವಿನಾಶ್ ತಮ್ಮ ಕ್ಲಿನಿಕ್ಗೆ ತೆರಳಿದ್ದರು. ಈ ವೇಳೆ ಥೆರಪಿ ಮಾಡಿಸಿಕೊಳ್ಳುವ ನೆಪದಲ್ಲಿ ಕೈಲಾಶ್ ಕೂಡ ಕ್ಲಿನಿಕ್ಗೆ ಬಂದಿದ್ದ.
ಇದರ ಮಧ್ಯೆ, ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಅವಿನಾಶ್ ಅವರಿಗೆ ಕುಡಿಸಿದ್ದಾನೆ. ಪಾನೀಯ ಕುಡಿದ ಕೆಲವೇ ಕ್ಷಣಗಳಲ್ಲಿ ಅವಿನಾಶ್ ಕುಸಿದು ಬಿದ್ದಿದ್ದಾರೆ.
ಆ ಬಳಿಕ ಅಲ್ಲೇ ಇದ್ದ ಸಿಲಿಂಡರ್ನಿಂದ ತಲೆ ಮತ್ತು ಎದೆ ಭಾಗಕ್ಕೆ ಹಲ್ಲೆ ನಡೆಸಿ ಕೈಲಾಶ್ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ . ಹತ್ಯೆಯ ನಂತರ ಪತ್ನಿ ಲಕ್ಷ್ಮೀ ವಿಡಿಯೋ ಕಾಲ್ ಮೂಲಕ ಗಂಡ ಸತ್ತಿರುವುದನ್ನು ಖಚಿತಪಡಿಸಿಕೊಂಡಿದ್ದಾಳೆ.
ಅಷ್ಟೇ ಅಲ್ಲದೆ,“ಮೂಗು ಬಿಗಿಹಿಡಿದು ಸಾಯಿಸು” ಎಂದು ಕೈಲಾಶ್ಗೆ ಸೂಚನೆ ನೀಡಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ನಂತರ ಕ್ಲಿನಿಕ್ಗೆ ಬಂದ ಲಕ್ಷ್ಮೀ, ಗಂಡ ಸಾವಿನ ಬಗ್ಗೆ ಏನೂ ಗೊತ್ತಿಲ್ಲದಂತೆ ಗೋಳಾಟ ನಡೆಸಿ, ಶುಗರ್ ಹೆಚ್ಚಾಗಿ ಕುಸಿದು ಬಿದ್ದು ಸಾವನಪ್ಪಿದರೆಂದು ಕಥೆ ಹೇಳಿದ್ದಳು.

ತಾಯಿಯ ಅನುಮಾನದಿಂದ ಬಯಲಾಯ್ತು ಕೊಲೆ ರಹಸ್ಯ
ಮೃತ ಅವಿನಾಶ್ ಅವರ ತಾಯಿ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು, ಪತ್ನಿ ಲಕ್ಷ್ಮೀ ಮೇಲೆಯೇ ಅನುಮಾನ ಪಟ್ಟು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅನೈತಿಕ ಸಂಬಂಧ ಹಾಗೂ ಕೊಲೆ ಸಂಚು ಬಗ್ಗೆ ಸತ್ಯಾಂಶಗಳು ಹೊರಬಂದವು.
ಎರಡು ವರ್ಷಗಳಿಂದ ಅನೈತಿಕ ಸಂಬಂಧ – ಕೊಲೆಗೆ ತಿಂಗಳಿನಿಂದ ಪ್ಲಾನ್
ಪೊಲೀಸರ ತನಿಖೆಯಲ್ಲಿ, ಲಕ್ಷ್ಮೀ ಮತ್ತು ಕೈಲಾಶ್ ನಡುವೆ ಸುಮಾರು ಎರಡು ವರ್ಷಗಳಿಂದ ಅನೈತಿಕ ಸಂಬಂಧ ಇದ್ದದ್ದು ಗೊತ್ತಾಗಿದೆ.
ಮೊಬೈಲ್ ರಿಚಾರ್ಜ್ ಮಾಡಿಸಲು ಹೋದಾಗ ಇಬ್ಬರ ನಡುವೆ ಪರಿಚಯವಾಗಿದ್ದು, ನಂತರ ಸಂಬಂಧ ಗಾಢವಾಗಿದೆ. ಈ ವಿಚಾರ ತಿಳಿದು ಅವಿನಾಶ್ ಇಬ್ಬರಿಗೂ ಎಚ್ಚರಿಕೆ ನೀಡಿದ್ದರು.
ಇದೇ ಸಿಟ್ಟಿನಿಂದ, ಕಳೆದ ಒಂದು ತಿಂಗಳಿಂದ ಪತಿ ಅವಿನಾಶ್ ಕೊಲೆಗೆ ಲಕ್ಷ್ಮೀ ಯೋಜನೆ ರೂಪಿಸಿದ್ದಳು ಎಂದು ತಿಳಿದುಬಂದಿದೆ.
ಈ ಸಂಬಂಧ Tilakwadi Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
MUST WATCH : TUMAKURU |ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇದೆಂಥಾ ಅವ್ಯವಸ್ಥೆ ಆಂಬ್ಯುಲೆನ್ಸ್ ಸಿಗದೇ ರೋಗಿಗಳ ಪರದಾಟ.




