Rohith Sharma : ಮುಂಬೈ ಇಂಡಿಯನ್ಸ್ನಲ್ಲಿ 15 ವರ್ಷ ಪೂರೈಸಿದ ಇತಿಹಾಸ ನಿರ್ಮಿಸಿದ ಹಿಟ್ಮ್ಯಾನ್.

ಭಾರತೀಯ ಕ್ರಿಕೆಟ್ ಲೋಕ ಎಂದೂ ನೆನಪಿಟ್ಟುಕೊಳ್ಳುವ ಸ್ಟಾರ್ ಬ್ಯಾಟರ್ ಅಂದ್ರೆ ಹಿಟ್ಮ್ಯಾನ್ ರೋಹಿತ್ ಶರ್ಮಾ. ಇನ್ನೂ ಕೆಲ ವರ್ಷಗಳವರೆಗೆ ಟಾಪ್-10 ಕ್ರಿಕೆಟಿಗರ ಪಟ್ಟಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಹೆಸರೆಂದರೇ ಅದೂ ರೋಹಿತ್ ಶರ್ಮಾ. ಅವರೀಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
15 ಸೀಸನ್ಗಳಲ್ಲಿ ಒಂದೇ ತಂಡದ ಪರ ಆಡಿದ ಮೊದಲ ಆಟಗಾರ
2011ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಸೇರಿದ್ದ ರೋಹಿತ್, ಇಂದಿಗೂ ಅದೇ ತಂಡದೊಂದಿಗೆ ತಮ್ಮ ಬಾಂಧವ್ಯ ಮುಂದುವರಿಸಿಕೊಂಡು ಬಂದಿದ್ದಾರೆ.
ಈ ಮೂಲಕ 15 ಸೀಸನ್ಗಳಲ್ಲಿ ಒಂದೇ ತಂಡದ ಪರ ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಶೇಷ ಕ್ಷಣವನ್ನು ಸ್ಮರಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ವಿಡಿಯೋವನ್ನು ಹಂಚಿಕೊಂಡಿದೆ.

ತಂಡಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ
15 ವರ್ಷಗಳ ಹಿಂದೆ ಇದೇ ದಿನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸೇರಿಕೊಂಡ ರೋಹಿತ್ ಶರ್ಮಾ ತಂಡಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ.
Rohith Sharma ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ IPL ನಲ್ಲಿ 5 ಬಾರಿ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದೆ. ನಾಯಕನಾಗಿ ಒಂದು ಬಾರಿ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.
READ THIS : ಹುಲಿಕಲ್ ಘಾಟ್ನಲ್ಲಿ ದುರಂತ – ಮೂವರು ಕಾರ್ಮಿಕರು ದಾರುಣ ಸಾವು!
ಹಲವು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ
ನಾಯಕನಾಗಿ 87 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿರುವ ರೋಹಿತ್, ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ಗೆಲುವು ತಂದುಕೊಟ್ಟ ನಾಯಕನಾಗಿ ಹೊರಹೊಮ್ಮಿದ್ದಾರೆ.
ಅದಲ್ಲದೆ, ತಂಡದ ಪರ ಅತಿ ಹೆಚ್ಚು ರನ್ಗಳ ದಾಖಲೆಯೂ ಅವರ ಹೆಸರಿನಲ್ಲಿದ್ದು, ಹಲವು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Rohith Sharma ಆರಂಭಿಕ ಬ್ಯಾಟರ್ ಆಗಿ ತಂಡಕ್ಕೆ ಸೇವೆ
ಪ್ರಸ್ತುತ, ಕಳೆದ ಮೂರು ಆವೃತ್ತಿಗಳಿಂದ Hardik Pandya ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದು, ರೋಹಿತ್ ಶರ್ಮಾ ಆರಂಭಿಕ ಬ್ಯಾಟರ್ ಆಗಿ ತಂಡಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.
MUST WATCH : GBA ಜಾಗದಲ್ಲಿ ಅಕ್ರಮ ಮರಳು ವ್ಯಾಪಾರ – ಶಾಸಕರ ಸೂಚನೆ ಮೇರೆಗೆ ತೆರವು ಕಾರ್ಯ

