
Massive Water Resource Project In State : ಚಿತ್ರದುರ್ಗದ ಅಘನಾಶಿನಿ ನದಿಯನ್ನು ವೇದಾವತಿ ನದಿಗೆ ಸಂಪರ್ಕಿಸುವ ಬೃಹತ್ ಯೋಜನೆ ಸದ್ಯದಲ್ಲಿ ಗಮನ ಸೆಳೆಯದೇ ಸಾಗುತ್ತಿದೆ. ಸಿದ್ದಾಪುರ ತಾಲ್ಲೂಕಿನ ಬಾಳೆಕೊಪ್ಪ ಬಳಿ ಡ್ಯಾಂ ನಿರ್ಮಿಸಿ, 35 ಟಿಎಂಸಿ (TMK) ನೀರನ್ನು ವೇದಾವತಿ ಜಲಾಶಯಕ್ಕೆ(aghanashini vedhavathi river) ಹರಿಸುವ ಯೋಜನೆಗೆ ಸುಮಾರು 23,000 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದ್ದು, 194 ಕಿಲೋ ಮೀಟರ್ ಪೈಪ್ ಲೈನ್(PIPELINE) ಅಳವಡಿಕೆ ನಡೆಯಲಿದೆ.
ಇನ್ನು ಈ ಬಗ್ಗೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು ಪ್ರಿ-ಫಿಸಿಬಿಲಿಟಿ ವರದಿ (feasibility report ) ಸಿದ್ಧಪಡಿಸಿದ್ದು, ವರದಿ ಈಗ ಹೈದರಾಬಾದಿನ ಕಚೇರಿಗೆ ಕಳುಹಿಸಲಾಗಿದೆ. ಆದರೆ, ಈ ಯೋಜನೆಯಿಂದ ಶಿರಸಿ ಹಾಗೂ ಸಾಗರ ಅರಣ್ಯ ಪ್ರದೇಶಗಳ ಸುಮಾರು 1.2 ಲಕ್ಷ ಮರಗಳನ್ನು ನಾಶವಾಗಲಿದೆ ಎಂದು ಅಂದಾಜಿಸಲಾಗ್ತಿದೆ. ಸುಮಾರು 600 ಎಕರೆ ಅರಣ್ಯ ಭೂಮಿಯನ್ನು (Forest Land) ಬಲಿ ಕೊಡಬೇಕಾಗಿದ್ದು, ಈ ಬಗ್ಗೆ ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅವರು ಕಂಟಕ ಎಚ್ಚರಿಸಿದ್ದಾರೆ.

ಇನ್ನು ಕುಮಟಾ ತಾಲ್ಲೂಕಿನ ಬಹುಗ್ರಾಮ ಯೋಜನೆಗಳು ಮತ್ತು ರೈತರ ಪಂಪ್ಸೆಟ್ಗಳಿಗೆ ಈ ನದಿ ತಿರುವಿನಿಂದ ದೊಡ್ಡ ಸವಾಲು ಎದುರಾಗಲಿದ್ದು, ಪರಿಸರ ಮತ್ತು ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
AghanashiniRiver




