
Tumakuru : ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯ ಜನ್ಮ ದಿನೋತ್ಸವ ಕೇವಲ ಏಪ್ರಿಲ್ 1ಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂದು ಕೂಡ ಮಠದಲ್ಲಿ ಹಬ್ಬದ ವಾತಾವರಣದ ಸಂಭ್ರಮ ಇದ್ದು, ಶ್ರೀಗಳ 119ನೇ ಜನ್ಮದಿನದ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ನಾಮಕರಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 119 ಪುಟ್ಟ ಕಂದಮ್ಮಗಳಿಗೆ ಶ್ರೀಗಳ ಹೆಸರನ್ನು ಇಡುವ ಮೂಲಕ ಭಕ್ತಿಯನ್ನು ಮೆರೆಯಲಾಯ್ತು.
119 ಮಕ್ಕಳಿಗೆ ನಾಮಕಾರಣ
ಶಿವಕುಮಾರ ಮಹಾಸ್ವಾಮೀಜಿ ದಾಸೋಹ ಟ್ರಸ್ಟ್ ವತಿಯಿಂದ ಕಳೆದ 8 ವರ್ಷದಿಂದ ಶ್ರೀಗಳ ಹುಟ್ಟುಹಬ್ಬದ ಅಂಗವಾಗಿ, ಮಕ್ಕಳಿಗೆ ಶ್ರೀಗಳ ಹೆಸರನ್ನು ಇಡುವ ಮೂಲಕ ಅರ್ಥಪೂರ್ಣವಾಗಿ ಶ್ರೀಗಳ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡು ಬರಲಾಗ್ತಿದೆ. ಇದೀಗ ಶ್ರೀಗಳ 119ನೇ ಜನ್ಮ ದಿನೋತ್ಸವದ ಅಂಗವಾಗಿ ಸುಮಾರು 119 ಮಕ್ಕಳಿಗೆ ನಾಮಕಾರಣ ಶಾಸ್ತ್ರವನ್ನು ಅರ್ಥಪೂರ್ಣವಾಗಿ ಮಾಡಲಾಯ್ತು. ನಾಮಕರಣ ಶಾಸ್ತ್ರದಲ್ಲಿ ಗಂಡು ಮಕ್ಕಳಿಗೆ ಶಿವಕುಮಾರ ಸ್ವಾಮಿ ಅಂತಾ ಹೆಣ್ಣು ಮಕ್ಕಳಿಗೆ ಶಿವಾನಿ ಎಂದು ಹೆಸರಿಡಲಾಯ್ತು.

ಶಿವಸಿದ್ದೇಶ್ವರ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಚಾಲನೆ
ರಾಜ್ಯದ ವಿವಿಧ ಜಿಲ್ಲೆಗಳಿಂದ ಪೋಷಕರು ತಮ್ಮ ಮಕ್ಕಳೊಂದಿಗೆ ಆಗಮಿಸಿ ನಾಮಕರಣ ಮಹೋತ್ಸವದಲ್ಲಿ ಭಾಗವಹಿಸಿದ್ದು, ಶ್ರೀಗಳಿಂದ ತಮ್ಮ ಮಕ್ಕಳಿಗೆ ಹೆಸರನ್ನು ಇಡಿಸಿ, ಆಶೀರ್ವಾದ ಪಡೆದುಕೊಂಡರು. ಇನ್ನು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಬೇಕಾಗಿತ್ತು. ಆದ್ರೆ ಅವರ ಅನುಪಸ್ಥಿತಿಯಲ್ಲಿ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಮಕರಣದೊಂದಿಗೆ ಟ್ರಸ್ಟ್ ವತಿಯಿಂದ 119 ಮಕ್ಕಳಿಗೆ ತೊಟ್ಟಿಲು, ಹಾಸಿಗೆ ಹಾಗೂ ಸೊಳ್ಳೆಪರದೆಗಳನ್ನು ಉಚಿತವಾಗಿ ವಿತರಿಸಲಾಯಿತು.
ಅವರ ಹೆಸರು ಮುಂದಿನ ತಲೆಮಾರಿಗೆ ಅಜರಾಮರವಾಗಿ ಉಳಿಯಬೇಕು
ಈ ವೇಳೆ ಮಾತನಾಡಿದ ಕಿರಿಯ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ, ಪೂಜ್ಯ ಶಿವಕುಮಾರ ಶ್ರೀಗಳ ಹೆಸರನ್ನು ಮಕ್ಕಳಿಗೆ ಇಡುವ ಮೂಲಕ ಅವರ ಹೆಸರು ಮುಂದಿನ ತಲೆಮಾರಿಗೆ ಅಜರಾಮರವಾಗಿ ಉಳಿಯಬೇಕು ಎಂಬುದು ಈ ಕಾರ್ಯಕ್ರಮದ ಆಶಯವಾಗಿದೆ.. ನಾವೆಲ್ಲರೂ ಪರಮ ಪೂಜ್ಯರನ್ನು ನೇರವಾಗಿ ಕಂಡಿದ್ದೇವೆ, ಅವರ ವಚನಗಳನ್ನು ಕೇಳಿದ್ದೇವೆ ಮತ್ತು ಅವರ ಆಚಾರ-ವಿಚಾರಗಳನ್ನು ಗಮನಿಸಿದ್ದೇವೆ. ಆದರೆ ಮುಂದಿನ ಪೀಳಿಗೆಗೆ ಅವರ ತತ್ವಗಳನ್ನು ತಲುಪಿಸಲು ಈ ನಾಮಸ್ಮರಣೆ ಒಂದು ಸೇತುವೆಯಾಗಲಿದೆ. ಎಂದರು.
READ THIS : ಬೆಂಗಳೂರು – ದೆಹಲಿ ಇಂಡಿಗೋ ಫ್ಲೈಟ್ನಲ್ಲಿ ಹುಸಿ ಬಾಂಬ್ ಬೆದರಿಕೆ!

ಅಜ್ಜಯ್ಯನ ಆಶೀರ್ವಾದ ಸದಾ ಇರಲಿ
ಇನ್ನು ಈ ವೇಳೆ ಮಾತನಾಡಿದ ಪೋಷಕರು, ನಮ್ಮ ಮಗುವಿಗೆ ಸಿದ್ದಗಂಗಾ ಶ್ರೀಗಳ ಹೆಸರಿಟ್ಟಿರುವುದು ತುಂಬಾ ಖುಷಿ ತಂದಿದೆ. ಮಠದಿಂದ ಉಚಿತವಾಗಿ ತೊಟ್ಟಿಲು, ಹಾಸಿಗೆ ನೀಡಿದ್ದಾರೆ. ಅಜ್ಜಯ್ಯನ ಆಶೀರ್ವಾದ ಸದಾ ಇರಲಿ ಎಂದು ಸಂತಸ ವ್ಯಕ್ತಪಡಿಸಿದ್ರು.
ಭಕ್ತರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನಾಮಕರಣ
ಏಪ್ರಿಲ್ 1ರಂದು ಸಿದ್ದಗಂಗಾ ಶ್ರೀಗಳ ಜನ್ಮದಿನದಂದೇ ನಾಮಕರಣ ಮಹೋತ್ಸವನ್ನು ಆಯೋಜಿಸಲಾಗಿದ್ದರೂ, ರಾಷ್ಟ್ರಪತಿಗಳ ಕಾರ್ಯಕ್ರಮದ ಭದ್ರತಾ ಕಾರಣಗಳಿಂದ ಮುಂದೂಡಲಾಗಿತ್ತು. ಇದೀಗ ಭಕ್ತರ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನಾಮಕರಣ ಮಹೋತ್ಸವ ನೆರವೇರಿದ್ದು, ಸಿದ್ದಗಂಗಾ ಮಠದ ಸೇವಾ ಪರಂಪರೆಯನ್ನು ಮತ್ತೊಮ್ಮೆ ಪ್ರತಿಬಿಂಬಿಸಿತು..

MUST WATCH : RCB VS CSK | RCB V/S CSK ಹೈವೋಲ್ಟೇಜ್ ಮ್ಯಾಚ್- ಪ್ರಜಾಶಕ್ತಿ PREDICTION ಏನ್ ಹೇಳುತ್ತೆ?




