ಬೆಂಗಳೂರು : ಸಿದ್ದರಾಮಯ್ಯ ಓರ್ವ ಕನ್ನರಾಮಯ್ಯ – R. Ashok .

Bengaluru : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ (R. Ashok) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜನರನ್ನು ತಪ್ಪು ದಾರಿಗೆಳೆಯುತ್ತಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದರು. ಕೇಂದ್ರ ಸರ್ಕಾರ ನೀಡುವ ಅನ್ನಭಾಗ್ಯದ ಅಕ್ಕಿಯನ್ನು ರಾಜ್ಯ ಸರ್ಕಾರ ತನ್ನದೇ ಯೋಜನೆ ಎಂದು ಹೇಳಿಕೊಂಡು ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ದೂರಿದರು.
ಹಲವು ಭರವಸೆಗಳು ಇನ್ನೂ ಜಾರಿಗೆ ಬಂದಿಲ್ಲ
ಅನ್ನಭಾಗ್ಯ ಯೋಜನೆ ವಿಚಾರದಲ್ಲಿ ಸುಳ್ಳು ಹೇಳಲಾಗುತ್ತಿದೆ. ಚುನಾವಣೆಯ ವೇಳೆ ಘೋಷಿಸಿದ್ದ ಇಂದಿರಾ ಗಾಂಧಿ ಕಿಟ್ ಸೇರಿದಂತೆ ಹಲವು ಭರವಸೆಗಳು ಇನ್ನೂ ಜಾರಿಗೆ ಬಂದಿಲ್ಲ ಎಂದು ಅವರು ಟೀಕಿಸಿದರು.
ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಬಿಡುಗಡೆ ಮಾಡದೇ ಸುಮಾರು 5000 ಕೋಟಿ ರೂ. ಬಾಕಿ ಇಟ್ಟಿರುವುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.
700 ಕೋಟಿ ರೂ. ಹಣವೂ ಬಿಡುಗಡೆ ಆಗಿಲ್ಲ
ಇನ್ನೂ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ 700 ಕೋಟಿ ರೂ. ಹಣವೂ ಬಿಡುಗಡೆ ಆಗಿಲ್ಲ. ಒಟ್ಟು 5,700 ಕೋಟಿ ರೂ. ಹಣ ಎಲ್ಲಿ ಹೋಗಿದೆ ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಕಡಿಮೆ ಅನುದಾನ ನೀಡಿದೆ
ಹಿಂದುಳಿದ ವರ್ಗಗಳ ನಿಗಮಗಳಿಗೆ ನೀಡುವ ಅನುದಾನದಲ್ಲೂ ಭಾರೀ ಕಡಿತ ಮಾಡಲಾಗಿದೆ ಎಂದು ಆರೋಪಿಸಿದ ಅಶೋಕ್, ವಿವಿಧ ನಿಗಮಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಅನುದಾನಕ್ಕಿಂತ ಕಾಂಗ್ರೆಸ್ ಸರ್ಕಾರ ಕಡಿಮೆ ಅನುದಾನ ನೀಡಿದೆ ಎಂದು ಹೇಳಿದರು.
READ THSI : ವರದಕ್ಷಿಣೆಗಾಗಿ ಪೆಟ್ರೋಲ್ ಸುರಿದು ಗರ್ಭಿಣಿ ಸೊಸೆಯನ್ನೇ ಕೊಂದ ಅತ್ತೆ- ಮಾವ
56,000 ಉದ್ಯೋಗಗಳ ಘೋಷಣೆ
ವಾಲ್ಮೀಕಿ ನಿಗಮದಲ್ಲಿ ನಡೆದ 165 ಕೋಟಿ ರೂ. ಹಗರಣ, ಯುವಕರಿಗೆ ಉದ್ಯೋಗ ನೀಡುವ ಭರವಸೆ ಈಡೇರಿಸದಿರುವುದು, 56,000 ಉದ್ಯೋಗಗಳ ಘೋಷಣೆ ಇನ್ನೂ ಜಾರಿಗೆ ಬರದಿರುವುದನ್ನೂ ಅವರು ಉಲ್ಲೇಖಿಸಿದರು.
ಸಾರ್ವಜನಿಕ ಹಣ ವ್ಯಯ ಮಾಡುತ್ತಿದೆ
ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜಕೀಯ ನೇಮಕಾತಿಗಳನ್ನು ಮಾಡಿ ಸಾರ್ವಜನಿಕ ಹಣ ವ್ಯಯ ಮಾಡುತ್ತಿದೆ. ಬಡವರಿಗಾಗಿ ಹಣವಿಲ್ಲ ಎಂದು ಹೇಳುತ್ತಾ, ಪಕ್ಷದ ನಾಯಕರಿಗಾಗಿ ಮಾತ್ರ ವೆಚ್ಚ ಮಾಡುತ್ತಿದೆ ಎಂದು ಟೀಕಿಸಿದರು.
ಗುತ್ತಿಗೆದಾರರಿಗೆ ನೀಡಬೇಕಾದ ಸುಮಾರು 75,000 ಕೋಟಿ ರೂ. ಬಾಕಿ
ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಮಾತನಾಡಿದ ಅವರು, ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಬಾಕಿ ಹಣಗಳನ್ನು ಸೇರಿಸಿದರೆ ಆರ್ಥಿಕ ಶಿಸ್ತು ಮಿತಿ ಮೀರಲಿದೆ ಎಂದು ಹೇಳಿದರು. ಜೊತೆಗೆ, ಗುತ್ತಿಗೆದಾರರಿಗೆ ನೀಡಬೇಕಾದ ಸುಮಾರು 75,000 ಕೋಟಿ ರೂ. ಬಾಕಿ ಇರುವುದನ್ನೂ ಉಲ್ಲೇಖಿಸಿದರು.

ಒಟ್ಟಿನಲ್ಲಿ, ರಾಜ್ಯ ಸರ್ಕಾರ ಜನತೆಗೆ ಸರಿಯಾದ ಲೆಕ್ಕ ನೀಡಬೇಕು ಎಂದು ಆರ್. ಅಶೋಕ್ ಆಗ್ರಹಿಸಿದರು.
MUST WATCH : ಬಿಯರ್ ಬಾಟಲಿ ತುಂಬಿದ್ದ ಲಾರಿ ಪಲ್ಟಿ ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರು




