ಮದುವೆಗೆ ಹೆಣ್ಣು ಸಿಗಲಿಲ್ಲವೆಂದು ಬೇಸರಗೊಂಡ 26 ವರ್ಷದ ಯುವಕ ತೆಂಗಿನ ಮರಕ್ಕೆ ನೇಣು ಬಿಗಿದು Suicide ಮಾಡಿಕೊಂಡ ಘಟನೆ ನಡೆದಿದೆ..

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ಮದುವೆಗೆ ಹೆಣ್ಣು ಸಿಗಲಿಲ್ಲ ಎಂಬ ಕಾರಣದಿಂದ ಮನನೊಂದು 26 ವರ್ಷದ ಯುವಕ Suicide ಗೆ ಶರಣಾಗಿರುವ ಘಟನೆ ಕಡೂರು ತಾಲೂಕಿನ ಯಗಟಿ ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತೆಂಗಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ
ಮೃತ ಯುವಕನನ್ನು ಕುಮಾರ್ ಎಂದು ಗುರುತಿಸಲಾಗಿದೆ. ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿಯಾಗಿದ್ದ ಕುಮಾರ್,
ತನ್ನ ಪೋಷಕರ ಜೊತೆ ಕಡೂರು ತಾಲೂಕಿನ ಬಾಸೂರು ಬಳಿ ವಾಸವಾಗಿದ್ದನು.

ಅವರು ಹಳ್ಳಿ-ಹಳ್ಳಿಗಳಿಗೆ ಹೋಗಿ ತೋಟಗಳಲ್ಲಿ ಗೊಬ್ಬರಕ್ಕಾಗಿ ಕುರಿಮಂದೆಯನ್ನು ನಿಲ್ಲಿಸಿ ಹಣ ಪಡೆಯುವ ಕೆಲಸ ಮಾಡುತ್ತಿದ್ದರು. ಆದರೆ, ಮದುವೆ ವಿಚಾರದಲ್ಲಿ ನಿರಂತರ ನಿರಾಸೆ ಅನುಭವಿಸುತ್ತಿದ್ದ ಕಾರಣದಿಂದ ಮನನೊಂದು, ತೆಂಗಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
MUST READ : ವರದಕ್ಷಿಣೆಗಾಗಿ ಪೆಟ್ರೋಲ್ ಸುರಿದು ಗರ್ಭಿಣಿ ಸೊಸೆಯನ್ನೇ ಕೊಂದ ಅತ್ತೆ- ಮಾವ
ಪೋಷಕರ ಬಳಿ ಮದುವೆ ಮಾಡುವಂತೆ ಕೇಳುತ್ತಿದ್ದ ಯುವಕ
ಕುಮಾರ್ ಕುಟುಂಬದಲ್ಲಿ ಮೂವರು ಗಂಡು ಮಕ್ಕಳು ಇದ್ದರು. ಇವರಲ್ಲಿ ಯಾರಿಗೂ ಇನ್ನೂ ಮದುವೆಯಾಗಿರಲಿಲ್ಲ.
ಇದರಿಂದಾಗಿ ಕುಮಾರ್ ತನ್ನ ಪೋಷಕರ ಬಳಿ ಮದುವೆ ಮಾಡುವಂತೆ ಹಲವು ಬಾರಿ ಕೇಳುತ್ತಿದ್ದ. ಆದರೆ, ಪೋಷಕರು
“ಮೊದಲು ಅಣ್ಣಂದಿರಿಗೆ ಮದುವೆ ಮಾಡುತ್ತೇವೆ, ನಂತರ ನಿನಗೆ ಮಾಡುತ್ತೇವೆ” ಎಂದು ಹೇಳುತ್ತಿದ್ದರು ಎಂದು ತಿಳಿದುಬಂದಿದೆ.
ಈ ವಿಷಯದಿಂದ ಬೇಸರಗೊಂಡ ಕುಮಾರ್, ಕಳೆದ ಕೆಲವು ದಿನಗಳಿಂದ ಮದ್ಯ ಸೇವನೆ ಮಾಡುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ.

ಸಾವಿಗೆ ನಿಖರ ಕಾರಣ ಸ್ಪಷ್ಟವಾಗಿಲ್ಲ
ಘಟನೆ ಕುರಿತು ಮಾಹಿತಿ ಪಡೆದ ಯಗಟಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆದರೆ, ಯುವಕನ ಸಾವಿಗೆ ನಿಖರ ಕಾರಣ ಮದ್ಯ ಸೇವನೆಯೋ ಅಥವಾ ಮದುವೆಗೆ ಹೆಣ್ಣು ಸಿಗದಿರುವ ಬೇಸರವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
MUST WATCH : FATHER MURDER HIS SON | ಕಟ್ಟಿಕೊಳ್ಳಬೇಕಾಗಿದ್ದವಳೇ ವಿಲನ್ ಆದ್ಳು- ಮದುವೆ ಖುಷಿಯಲ್ಲಿದ್ದ ಮದುಮಗನ ಭೀಕರ ಹತ್ಯೆ




