ಸಿದ್ದಗಂಗಾ ಶ್ರೀ Shivakumara ಸ್ವಾಮೀಜಿಗಳ 119ನೇ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾವಪೂರ್ಣ ನಮನ ಸಲ್ಲಿಸಿದ್ದಾರೆ..!!

ಸಿದ್ದಗಂಗಾ ಮಠದ ಪೂಜ್ಯ ಶ್ರೀಶ್ರೀಶ್ರೀ Shivakumara ಸ್ವಾಮೀಜಿಗಳ 119ನೇ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ.

“ಸೇವೆಯ ಜೀವನವೇ ನಿಜವಾದ ಮಹತ್ವ” – ಮೋದಿ
ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಶಿವಕುಮಾರ ಶ್ರೀಗಳನ್ನು ಕರುಣೆ, ವಿನಯ ಮತ್ತು ಮಾನವಕುಲದ ಮೇಲಿನ ಅಚಲ ಸೇವೆಯ ಪ್ರತಿರೂಪ ಎಂದು ಕೊಂಡಾಡಿದ್ದಾರೆ.
ಅವರು ಹೇಳಿರುವಂತೆ ಇತರರ ಉದ್ಧಾರಕ್ಕಾಗಿ ಸಮರ್ಪಿತ ಜೀವನ ನಡೆಸಿದರು .ನಿಜವಾದ ಮಹತ್ವ ಇತರರಿಗೆ ಸೇವೆ ಸಲ್ಲಿಸುವುದರಲ್ಲಿದೆ ಎಂದು ತೋರಿಸಿಕೊಟ್ಟರು .ಅವರ ಸೇವಾ ಮನೋಭಾವ ಸಮಾಜಕ್ಕೆ ಮಾದರಿಯಾಗಿದೆ.
MUST READ : ಮತ್ತೆ ಶಾಕ್ ಕೊಟ್ಟ Shell Petrol ಬಂಕ್ – ಡೀಸೆಲ್ ₹25 ಏರಿಕೆ..!!

ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಶಾಶ್ವತ ಕೊಡುಗೆ
ಶಿವಕುಮಾರ ಶ್ರೀಗಳು ಶಿಕ್ಷಣ, ಸಾಮಾಜಿಕ ಕಲ್ಯಾಣ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.
ಹೀಗಾಗಿ ಅವರ ಕೊಡುಗೆಗಳು ಸಮಾಜದ ಮೇಲೆ ಶಾಶ್ವತ ಗುರುತು ಮೂಡಿಸಿವೆ , ಅನೇಕ ಜನರಿಗೆ ಪ್ರೇರಣೆಯಾಗಿ ಉಳಿದಿವೆ , ನಿಸ್ವಾರ್ಥ ಸೇವೆಯ ಮಾರ್ಗದಲ್ಲಿ ನಡೆಯಲು ಪ್ರೋತ್ಸಾಹ ನೀಡಿವೆ ..

ಶ್ರೀಗಳ ಜೊತೆಗಿನ ಭಾವಚಿತ್ರ ಹಂಚಿಕೊಂಡ ಪ್ರಧಾನಿ
ಜಯಂತಿ ಅಂಗವಾಗಿ ಪ್ರಧಾನಿ ಮೋದಿ ಶಿವಕುಮಾರ ಶ್ರೀಗಳ ಜೊತೆಗಿನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದರಿಂದ ದೇಶದಾದ್ಯಂತ ಭಕ್ತರು ಮತ್ತು ಅಭಿಮಾನಿಗಳು ಶ್ರೀಗಳನ್ನು ಸ್ಮರಿಸಿ ಗೌರವ ಸಲ್ಲಿಸುತ್ತಿದ್ದಾರೆ.
MUST WATCH : ಸಿದ್ದಗಂಗಾ ಶ್ರೀಗಳ ಜನ್ಮೋತ್ಸವದಂದು ಮಠದಲ್ಲಿ ಹಳೆ ವಿದ್ಯಾರ್ಥಿ ಸಾ* | TUMKURU NEWS |




