ನಟಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಮಲಯಾಳಂ ನಿರ್ದೇಶಕ Ranjith ಅವರನ್ನು ಪೊಲೀಸರು ಬಂಧಿಸಿದ್ದಾರೆ…

ಕೇರಳದ ತಿರುವನಂತಪುರದಲ್ಲಿ ಮಲಯಾಳಂ ಚಿತ್ರರಂಗದ ನಿರ್ದೇಶಕ ಹಾಗೂ ನಟ Ranjith ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಸಿನಿಮಾ ಚಿತ್ರೀಕರಣದ ವೇಳೆ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂಬ ಆರೋಪದ ಮೇರೆಗೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಕ್ಯಾರವಾನ್ಗೆ ಕರೆದೊಯ್ದು ದೌರ್ಜನ್ಯಕ್ಕೆ ಯತ್ನಿಸಿದ ಆರೋಪ
ಸೋಮವಾರ (ಮಾ.30) ಕೊಚ್ಚಿ ನಗರ ಪೊಲೀಸ್ ಠಾಣೆಯಲ್ಲಿ ನಟಿಯೊಬ್ಬರು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಸಿನಿಮಾ ಚಿತ್ರೀಕರಣ ಸಮಯದಲ್ಲಿ ರಂಜಿತ್ ತಮ್ಮನ್ನು ಕ್ಯಾರವಾನ್ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
MUST READ : ಮತ್ತೆ ಶಾಕ್ ಕೊಟ್ಟ Shell Petrol ಬಂಕ್ – ಡೀಸೆಲ್ ₹25 ಏರಿಕೆ..!!

ಇಡುಕ್ಕಿಯಲ್ಲಿ ಬಂಧನ, 14 ದಿನ ನ್ಯಾಯಾಂಗ ಬಂಧನ
ದೂರಿನನ್ವಯ ಪೊಲೀಸರು ಮಂಗಳವಾರ (ಮಾ.31) ತಡರಾತ್ರಿ ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ರಂಜಿತ್ ಅವರನ್ನು ಬಂಧಿಸಿದ್ದಾರೆ. ನಂತರ ಅವರನ್ನು ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ (JFMC) ಕೋರ್ಟ್ಗೆ ಹಾಜರುಪಡಿಸಲಾಗಿದ್ದು , 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳಿಕ ಅವರನ್ನು ಎರ್ನಾಕುಲಂ ಜೈಲಿಗೆ ಸ್ಥಳಾಂತರಿಸಲಾಗಿದೆ..

ಆರೋಪ ಸುಳ್ಳು ಎಂದು ನಿರ್ದೇಶಕ ರಂಜಿತ್ ಪ್ರತಿಕ್ರಿಯೆ
ಮ್ಯಾಜಿಸ್ಟ್ರೇಟ್ ನಿವಾಸದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ರಂಜಿತ್ , “ಈ ಪ್ರಕರಣದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು” ಎಂದು ತಿಳಿಸಿದ್ದಾರೆ.
ಸದ್ಯ ಕೊಚ್ಚಿ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.

ಇದೇ ಮೊದಲ ಆರೋಪವಲ್ಲ – ಹಿಂದೆ ಕೂಡ ಪ್ರಕರಣಗಳು
ನಿರ್ದೇಶಕ ರಂಜಿತ್ ವಿರುದ್ಧ ಈ ರೀತಿಯ ಆರೋಪಗಳು ಕೇಳಿಬಂದಿರುವುದು ಇದೇ ಮೊದಲಲ್ಲ.
ಇದಕ್ಕೂ ಮುನ್ನ ಕಿರುಕುಳ ಮತ್ತು ನಿಂದನೆ ಆರೋಪಗಳು ಕೇಳಿಬಂದಿವೆ, 2024ರಲ್ಲಿ ಬಂಗಾಳಿ ನಟಿಯೊಬ್ಬರು ದೂರು ನೀಡಿದ್ದರು , 2009ರಲ್ಲಿ ಚಿತ್ರೀಕರಣದ ವೇಳೆ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿತ್ತು..
ಹೀಗಾಗಿ, ಇದು ಅವರ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣ ಎಂದು ತಿಳಿದುಬಂದಿದೆ.
MUST WATCH : ಸಿದ್ದಗಂಗಾ ಶ್ರೀಗಳ ಜನ್ಮೋತ್ಸವದಂದು ಮಠದಲ್ಲಿ ಹಳೆ ವಿದ್ಯಾರ್ಥಿ ಸಾ* | TUMKURU NEWS |




