Hassan ಜಿಲ್ಲೆಯ ಶ್ರವಣಬೆಳಗೊಳದಲ್ಲಿ 40 ವರ್ಷದ ಪುತ್ರ ಮದುವೆ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿ ಕೊಲೆ ಮಾಡಿದ ಘಟನೆ ನಡೆದಿದೆ…

Hassan ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.
40 ವರ್ಷವಾದರೂ ತನ್ನ ಮದುವೆ ಮಾಡಿಸಿಲ್ಲ ಎಂದು ಕೋಪಗೊಂಡ ಪುತ್ರನೊಬ್ಬ, ಹೆತ್ತ ತಾಯಿಯನ್ನೇ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಗಂಗಮ್ಮ (65) ಮೃತ ಮಹಿಳೆ ಆಗಿದ್ದು, ಉಮಾಶಂಕರ್ (40) ಎಂಬಾತ ಆರೋಪಿಯಾಗಿದ್ದಾನೆ.

ಅಪಘಾತದ ಬಳಿಕ ಬದಲಾದ ವರ್ತನೆ
ಕಳೆದ ಒಂದು ವರ್ಷದ ಹಿಂದೆ ಕುಂಭಮೇಳಕ್ಕೆ ತೆರಳಿ ವಾಪಾಸ್ ಆಗುವ ವೇಳೆ ನಡೆದ ಅಪಘಾತದಲ್ಲಿ ಆರೋಪಿ ಉಮಾಶಂಕರ್ ತಲೆಗೆ ಪೆಟ್ಟು ಬಿದ್ದಿತ್ತು.
ಆ ನಂತರದಿಂದ ಅವನು , ಒಮ್ಮೆೊಮ್ಮೆ ಬುದ್ಧಿಭ್ರಮಣೆಯಾದಂತೆ ವರ್ತಿಸುತ್ತಿದ್ದ , ಪದೇ ಪದೇ ಮದುವೆ ಮಾಡಿಸುವಂತೆ ತಾಯಿಯೊಂದಿಗೆ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ.
ಮಾರ್ಚ್ 26ರಂದು ಮತ್ತೆ ಮದುವೆ ವಿಚಾರಕ್ಕೆ ತಾಯಿ ಗಂಗಮ್ಮರೊಂದಿಗೆ ಜಗಳ ಆರಂಭವಾಗಿದೆ.
ಆ ವೇಳೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಉಮಾಶಂಕರ್ ಮೊದಲು ಕೈಯಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ನಂತರ ಆಕೆ ಕೆಳಗೆ ಬಿದ್ದಾಗ ತಲೆಯ ಮೇಲೆ ಕಲ್ಲು ಎತ್ತಿಹಾಕಿದ್ದಾನೆ .ಇದರಿಂದ ಗಂಗಮ್ಮ ಅವರಿಗೆ ತೀವ್ರ ಗಾಯಗಳಾಗಿವೆ.
MUST READ : Bengaluru – Mysuru ಎಕ್ಸ್ಪ್ರೆಸ್ವೇ ಟೋಲ್ ದರ ಏರಿಕೆ..!!

ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು
ಗಂಭೀರವಾಗಿ ಗಾಯಗೊಂಡಿದ್ದ ಗಂಗಮ್ಮ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 30ರ ಮಧ್ಯರಾತ್ರಿ ಅವರು ಮೃತಪಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಶ್ರವಣಬೆಳಗೊಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.
MUST WATCH : ಸಿದ್ದಗಂಗಾ ಶ್ರೀಗಳ ಜನ್ಮೋತ್ಸವದಂದು ಮಠದಲ್ಲಿ ಹಳೆ ವಿದ್ಯಾರ್ಥಿ ಸಾ* | TUMKURU NEWS |




