
ಮೈಸೂರಿನಂತೆ ತುಮಕೂರಿನಲ್ಲೂ ನಾಡಹಬ್ಬ ದಸರಾ ಹಬ್ಬವನ್ನು ಅದ್ಧೂರಿಯಾಗಿ ಕಳೆದ ವರ್ಷದಿಂದಲೂ ಆಚರಿಸಿಕೊಂಡು ಬರಲಾಗ್ತಿದೆ. ಈ ವರ್ಷವೂ ಕಳೆದ ಬಾರಿಗಿಂತ ಮತ್ತಷ್ಟು ಅದ್ಧೂರಿಯಾಗಿ ದಸರಾವನ್ನು ತುಮಕೂರು ಜಿಲ್ಲಾಡಳಿತ ಆಚರಿಸಲಾಗ್ತಿದೆ. ದಸರಾ ಅಂಗವಾಗಿ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗ್ತಿದೆ.

ನಿನ್ನೆ ತುಮಕೂರು ದಸರಾ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹೇಶ್ ಪಿಯು ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿ, ಮಿಂಚಿದ್ರು. ಓದುವುದರ ಜೊತೆಗೆ ಮಹೇಶ್ ಕಾಲೇಜು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನಾ ಪ್ರದರ್ಶನ ಮಾಡಿದ್ದು, ಪ್ರೇಕ್ಷಕರು ಮನಸೋತರು. ಇನ್ನು ಮಹೇಶ್ ಪಿಯು ಕಾಲೇಜು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಸಾಳೆ, ಯಕ್ಷಗಾನ, ಹುಲಿಕುಣಿತ ಸೇರಿ ಕೊಡಗಿನ ನೃತ್ಯಕ್ಕೆ ಹೆಜ್ಜೆ ಹಾಕಿದ್ದು, ವಿದ್ಯಾರ್ಥಿಗಳ ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಒನ್ಸ್ ಮೋರ್ ಒನ್ಸ್ ಮೋರ್ ಎಂದು ಕೂಗಿದ್ರು.

ಇನ್ನು ಮಹೇಶ್ ಪಿಯು ಕಾಲೇಜು ಮಕ್ಕಳ ನೃತ್ಯ ಪ್ರದರ್ಶನವನ್ನು ಎಸ್ಪಿ ಅಶೋಕ್, ಪಾಲಿಕೆ ಕಮಿಷನರ್ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ವೀಕ್ಷಿಸಿದ್ರು. ಬಳಿಕ ಉತ್ತಮ ಪ್ರದರ್ಶನ ನೀಡಿದ ಮಹೇಶ್ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ವೇದಿಕೆ ಮೇಲೆ ಎಸ್ಪಿ ಅಭಿನಂದನೆ ಸಲ್ಲಿಸಿದ್ರು.




