Tumkur ನ ಆರೋಗ್ಯ ಇಲಾಖೆಯಲ್ಲಿದ್ದಾರೆ ಭ್ರಷ್ಟ ಅಧಿಕಾರಿಗಳು.

ತುಮಕೂರಿನ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಚಾರ ತಾಂಡವ ಆಡ್ತಾ ಇದ್ದು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುವಾಗ್ಲೆ ರೆಡ್ ಹ್ಯಾಂಡ್ ಆಗಿ ಆರೋಗ್ಯ ಇಲಾಖೆಯ ಲೆಕ್ಕ ಪತ್ರ ವ್ಯವಸ್ಥಾಪಕ ಬಲೆಗೆ ಬಿದ್ದಿದ್ದು, ಭ್ರಷ್ಟ ಅಧಿಕಾರಿಗಳು ಫುಲ್ ಶಾಕ್ಗೆ ಒಳಗಾಗಿದ್ದಾರೆ.
13 ಸಾವಿರಕ್ಕೆ ಬೇಡಿಕೆ
Tumkur ಆರೋಗ್ಯ ಇಲಾಖೆಯಲ್ಲಿ ಲೆಕ್ಕ ಪತ್ರ ವ್ಯವಸ್ಥಾಪಕ ಅರವಿಂದ್ ಎಂಬುವವರು ಲಂಚ ಪಡೆಯುವಾಗ್ಲೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಸುಮಾರು 13 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದು, 12 ಸಾವಿರ ರೂಪಾಯಿ ಲಂಚ ಪಡೆಯುವಾಗ್ಲೆ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಲೋಕಾ ಬಲೆಗೆ ಬಿದ್ದ ಆರೋಗ್ಯ ಇಲಾಖೆಯ ಲೆಕ್ಕ ಪತ್ರ ವ್ಯವಸ್ಥಾಪಕ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತುಮಕೂರು ಜಿಲ್ಲೆಯ ಎಲ್ಲಾ 10 ತಾಲೂಕುಗಳಲ್ಲಿ ನಡೆಯುವ ಜಾತ್ರೆ ಹಾಗೂ ಸಂತೆಗಳಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಶಾಮಿಯಾನ ಹಾಕಲು ರಾಜಶೇಖರ್ ಎಂಬುವವರು ಟೆಂಡರ್ ಪಡೆದು ಶಾಮಿಯಾನ ಹಾಕಿದ್ದರು. ಈ ಸಂಬಂಧ ಒಂದು ಲಕ್ಷದ 98 ಸಾವಿರ ರೂಪಾಯಿ ಬಿಲ್ ಪಾವತಿಸಲು ರಾಜಶೇಖರ್ ಎಂಬುವವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಅರವಿಂದ್ ಎಂಬುವವರು ಸುಮಾರು 12 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.
READ THIS : ಅವಧಿಗೂ ಮುನ್ನ ಶಾಸಕರ ಫೋಟೋ ಶೂಟ್! ಇದರ ಹಿಂದೆ ಅಡಗಿದೆಯೇ ಬಿಗ್ ಟ್ವಿಸ್ಟ್?
ಹೀಗಾಗಿ ಇಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ರಾಜಶೇಖರ್ ದೂರು ನೀಡಿದ್ದು, ಇಂದು ಸಂಜೆ 4 ಗಂಟೆ 10 ನಿಮಿಷ ಸುಮಾರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಕಾಂಪೌಂಡ್ ಒಳಗೆ ರಾಜಶೇಖರ್ ಅವರಿಂದ ಲಂಚ ಪಡೆಯುವಾಗ, ತನಿಖಾಧಿಕಾರಿ ಸಂತೋಷ್ ನೇತೃತ್ವದ ತಂಡ ರೇಡ್ ಮಾಡಿದ್ದು, ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಪೊಲೀಸರಿಂದ ತೀವ್ರ ವಿಚಾರಣೆ
ಇನ್ನು ಕಳೆದ 13 ವರ್ಷಗಳಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅರವಿಂದ್ ಲಂಚಕ್ಕೆ ಬೇಡಿಕೆ ಇಟ್ಟು, ಲೋಕಾ ಬಲೆಗೆ ಬಿದ್ದಿದ್ದಾರೆ. ಈ ವೇಳೆ ಬಿಲ್ ಪಾಸ್ ಮಾಡುವ ಬಗ್ಗೆDHO ಬಳಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕೇಳಿದ್ದು, ನಿಮಗೆ ಗೊತ್ತಿಲ್ಲದೆ ಈ ಘಟನೆ ಆಗಿದೆಯೇ ಎಂದು ಲೋಕಾಯುಕ್ತ ಎಸ್ಪಿ ತರಾಟೆಗೆ ತೆಗೆದುಕೊಂಡರು. ಸದ್ಯ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
MUST WATCH : ಈ ಶಾಲಿನ ರೇಟ್ 13 ಸಾವಿರ ಕಣಯ್ಯ – ಸದನದಲ್ಲಿ CM ಸ್ವಾರಸ್ಯಕರ ಮಾತು..! :




