16,706 ಕೋಟಿ ರೂ.ಗೆ ಸೇಲ್ ಆಯ್ತು RCB – ಇನ್ಮುಂದೆ ಆರ್ಸಿಬಿಗೆ ಹೊಸ ಓನರ್!

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ದೊಡ್ಡ ಹಾಗೂ ಐತಿಹಾಸಿಕ ಒಪ್ಪಂದವೊಂದು ನಡೆದಿದೆ. ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಒಡೆತನ ಇದೀಗ ಅಧಿಕೃತವಾಗಿ ಬದಲಾಗಿದೆ.

16,706 ಕೋಟಿ ರೂ.ಗೆ ಸೇಲ್ ಆಯ್ತು RCB
ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಇಂಡಿಯಾ ಗ್ರೂಪ್, ಬೋಲ್ಡ್ ವೆಂಚರ್ಸ್ ಮತ್ತು ಬ್ಲಾಕ್ ಸ್ಟೋನ್ ಕಂಪನಿಗಳನ್ನೊಳಗೊಂಡ ಜಂಟಿ ಒಕ್ಕೂಟವು 1.78 ಬಿಲಿಯನ್ ಡಾಲರ್ ನೀಡಿ ಆರ್ಸಿಬಿ ತಂಡವನ್ನ ಖರೀದಿಸಿದೆ. ಆದಿತ್ಯ ನಿರ್ಲಾ ಗ್ರೂಪ್ನ ನಿರ್ದೇಶಕ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಆರ್ಸಿಬಿ ಪ್ರಾಂಚೈಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
READ THIS : Bengaluru IPL ಮ್ಯಾಚ್ ಬಗ್ಗೆ RCB ಬಿಗ್ ಅಪ್ಡೇಟ್..!!

ದೇಶದ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳ ಕೈ ಸೇರಿದೆ
ಟೈಮ್ಸ್ ಆಫ್ ಇಂಡಿಯಾ ಗ್ರೂಪ್ನ ಸತ್ಯನ್ ಗಜ್ವಾನಿ ಅವರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಒಟ್ನಲ್ಲಿ ದಶಕಗಳ ಕಾಲ ಮದ್ಯದ ಕಂಪನಿಯ ಒಡೆತನದಲ್ಲಿದ್ದ ಕರುನಾಡಿನ ನೆಚ್ಚಿನ ಆರ್ಸಿಬಿ ತಂಡವೀಗ, ದೇಶದ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳ ಕೈ ಸೇರಿದ್ದು, ತಂಡದ ಮುಂದಿನ ಪಯಣ ಮತ್ತಷ್ಟು ಕುತೂಹಲ ಕೆರಳಿಸಿದೆ.

MUST WATCH : TUMAKURU BUS ನಿಲ್ದಾಣದಲ್ಲಿ ಘೋರ ದುರಂತ ? – ಚಕ್ರಕ್ಕೆ ಸಿಲುಕಿದ STUDENT ಕಾಲಿಗೆ ಗಂಭೀರ ಗಾಯ..!




