Tumakuru : ಸೀಟಿಗಾಗಿ ಓಡಿದ ವಿದ್ಯಾರ್ಥಿನಿ ಮೇಲೆ ಹರಿದ ಬಸ್ – ಚಕ್ರಕ್ಕೆ ಸಿಲುಕಿದ ಸ್ಟೂಡೆಂಟ್ ಕಾಲಿಗೆ ಗಂಭೀರ ಗಾಯ.

ಸೀಟಿಗಾಗಿ ಬಸ್ ಬಳಿ ಓಡಿದ ವಿದ್ಯಾರ್ಥಿನಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ತುಮಕೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ವಿದ್ಯಾರ್ಥಿನಿ ಮೇಲೆ ಬಸ್ ಹರಿದಿದ್ದು, ಸಹ ಪ್ರಯಾಣಿಕರು ಭಯಭೀತಿಗೊಂಡಿದ್ದಾರೆ.
ಬಸ್ ಚಕ್ರಕ್ಕೆ ಸಿಲುಕಿದ ಸ್ಟೂಡೆಂಟ್
ತುಮಕೂರು ನಗರದ ಬಸ್ ನಿಲ್ದಾಣದಲ್ಲಿ ಸೀಟಿಗಾಗಿ ಬಸ್ ಬಳಿ ಓಡಿದ್ದು, ಬಸ್ ಟೈಯರ್ ವಿದ್ಯಾರ್ಥಿನಿ ಮೇಲೆ ಹರಿದಿದೆ. ಘಟನೆಯಲ್ಲಿ ವಿದ್ಯಾರ್ಥಿನಿಯ ಕಾಲಿಗೆ ಗಂಭೀರ ಗಾಯಗಳಾಗಿದ್ದು,ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಯ ದೃಶ್ಯ ಬಸ್ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆ
Tumakuru ಬಸ್ ನಿಲ್ದಾಣದ ಪಾವಗಡ ಅಂಕಣಕ್ಕೆ ಪಾವಗಡಕ್ಕೆ ತೆರಳುವ ಬಸ್ ಬಂದಿದೆ, ಮೊದಲೇ ಪಾವಗಡ ಬಸ್ಗಾಗಿ ಸಾಕಷ್ಟು ಮಂದಿ ಪ್ರಯಾಣಿಕರು ಕಾಯ್ತಾ ಇದ್ದು, ಬಸ್ ಬಂದ ಕೂಡಲೇ ಪ್ರಯಾಣಿಕರು ಸೀಟು ಹಿಡಿಯಲು ಬಸ್ ಬಳಿ ಓಡಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಕೂಡ ಸೀಟಿಗಾಗಿ ಓಡಿದ್ದು, ಬಸ್ ಕೂಡ ಸ್ವಲ್ಪ ವೇಗವಾಗಿ ಅಂಕಣಕ್ಕೆ ಬಂದಿದೆ.
ಈ ವೇಳೆ ಆಕಸ್ಮಿಕವಾಗಿ ಬಸ್ನ ಟೈಯರ್ಗೆ ವಿದ್ಯಾರ್ಥಿನಿ ಸಿಲುಕಿದ್ದು, ಕಾಲಿಗೆ ಗಂಭೀರ ಗಾಯಗಳಾಗಿದೆ. ಕೂಡಲೇ ಸಹ ಪ್ರಯಾಣಿಕರು ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.
READ THIS : ಕೆಲ ಗಂಟೆಗಳಲ್ಲೇ ಭಾರೀ ಮಳೆ – ರಾಜ್ಯದ ಈ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬಸ್ ಹತ್ತಲು ಸಾಮಾನ್ಯವಾಗಿ ನೂಕು ನುಗ್ಗಲು
ಇನ್ನು, ಪಾವಗಡ- ತುಮಕೂರಿಗೆ ಅರ್ಧಗಂಟೆ ಒಂದು ಬಸ್ ಎಂಬಂತೆ ಸಂಚಾರ ಮಾಡ್ತಾ ಇದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆ ಬಸ್ಗಾಗಿ ಸಾಕಷ್ಟು ಮಂದಿ ನೌಕರರು ಹಾಗೂ ವಿದ್ಯಾರ್ಥಿಗಳು ಬಸ್ಗಾಗಿ ಕಾಯ್ತಾ ಇರ್ತಾರೆ. ಅದ್ರಲ್ಲೂ ಸಂಜೆ ವೇಳೆ ಬಸ್ಗಾಗಿ ನೂರಾರು ಮಂದಿ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ನೌಕರರು ಕಾಯ್ತಾ ಇದ್ದು, ಈ ವೇಳೆ ಬಸ್ ಹತ್ತಲು ಸಾಮಾನ್ಯವಾಗಿ ನೂಕು ನುಗ್ಗಲು ಉಂಟಾಗುತ್ತೆ.
KSRTC ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶ
ಅಲ್ದೇ ಸೀಟಿಗಾಗಿ ಪ್ರಯಾಣಿಕರು ಮುಗಿಬೀಳ್ತಾ ಇರ್ತಾರೆ. ಇಂತಹ ಸಂದರ್ಭದಲ್ಲಿ ಕೆಲ ಅವಘಡಗಳು ಸಂಭವಿಸುತ್ತಲೇ ಇರ್ತಾವೆ. ಹೀಗಾಗಿ ಈ ಬಗ್ಗೆ ಕೆಎಸ್ಆರ್ಟಿಸಿ ಸಿಬ್ಬಂದಿ ಎಚ್ಚೆತ್ತು ಹೆಚ್ಚುವರಿ ಬಸ್ ಸೇವೆ ಒದಗಿಸುವುದರ ಜೊತೆಗೆ ಬಸ್ ಹತ್ತುವ ವೇಳೆ ಓರ್ವ ಸಿಬ್ಬಂದಿಯನ್ನು ನೇಮಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.

MUST WATCH : ಹುಳಿಯಾರಿನಲ್ಲಿ ಲಾಕಪ್ ಡೆತ್ ಕೇಸ್ ಘಟನೆಗೆ ರಾಜ್ಯಾದ್ಯಂತ ಖಂಡನೆ




