
TUMAKURU DASARA 2025 : ತುಮಕೂರಿನಲ್ಲಿ ನಾಡ ದಸರಾ ಸಂಭ್ರಮ ಕಳೆಗಟ್ಟಿದೆ. ಮೈಸೂರಿನಂತೆ ತುಮಕೂರಿನಲ್ಲೂ ಅದ್ಧೂರಿಯಾಗಿ ದಸರಾವನ್ನು ಆಚರಿಸಲಾಗ್ತಿದ್ದು, ಕಳೆದ ನಾಲ್ಕು ದಿನಗಳಿಂದ ದಸರಾ ಹಬ್ಬ ಆಚರಣೆ ಮಾಡಲಾಗ್ತಿದ್ದು, ದೇವಿಗೆ ನಿತ್ಯ ವಿಶೇಷ ಅಲಂಕಾರದ ಜೊತೆಗೆ ವಿಶೇಷ ಪೂಜಾ ಕೈಂಕರ್ಯ ನಡೆಸಲಾಗ್ತಿದೆ.
ತುಮಕೂರು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಧಾರ್ಮಿಕ ಮಂಟಪ ನಿರ್ಮಾಣ ಮಾಡಲಾ ಗಿದ್ದು, ಮಂಟಪದಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೇವಿಗೆ ನಿತ್ಯ ನವರಾತ್ರಿ ಅಂಗವಾಗಿ ಒಂದೊಂದು ಅವತಾರದಲ್ಲಿ ದೇವಿಗೆ ಅಲಂಕಾರ ಮಾಡಲಾಗ್ತಿದ್ದು, ಇಂದು ದೇವಿಗೆ ಸ್ಕಂದ ಮಾತೆ ಅಲಂಕಾರವನ್ನು ಮಾಡಲಾಗಿತ್ತು. 5ನೇ ದಿನವಾದ ಇಂದು ದೇವಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಪೂಜಾ ಕಾರ್ಯ ನೆರವೇರಿಸಲಾಯ್ತು.
ಇಂದು ಪೂಜಾ ಕಾರ್ಯದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಜಿ. ಪ್ರಭು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿ, ನಾಡಿಗೆ ಉತ್ತಮ ಮಳೆ ಬೆಳೆ ಆಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ರು.
ಇನ್ನು ದಸರಾ ಅಂಗವಾಗಿ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಾನಾ ಕಾರ್ಯಕ್ರಮಗಳು ನಡೆಯುತ್ತಿದ್ದು, ದಸರಾ ಕಾರ್ಯಕ್ರಮವನ್ನು ವೀಕ್ಷಿಸಲು ದೂರದ ಊರುಗಳಿಂದ ಜನರು ಆಗಮಿಸ್ತಾ ಇದ್ದಾರೆ.
ಇತ್ತ ದಸರಾ ಅಂಗವಾಗಿ ತುಮಕೂರು ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ಇಡೀ ನಗರ ಝಗಮಗ ಅಂತಿದೆ, ಇನ್ನು ದೀಪಲಂಕಾರವನ್ನು ಜನರು ವೀಕ್ಷಣೆ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಜನರು ಅಂಬಾರಿ ಬಸ್ ಏರಿ ಫುಲ್ ಎಂಜಾಯ್ ಮಾಡ್ತಾ ಇದ್ದಾರೆ.





