ಬೆಂಗಳೂರಿಗೆ ನಿತ್ಯ Tumkur ನಿಂದ ನೂರಾರು ಮಂದಿ ಪ್ರಯಾಣಿಗರು ಕೆಲಸಕ್ಕೆ ಓಡಾಡುತ್ತಾರೆ.

ಸಿಲಿಕಾನ್ ಸಿಟಿ ಬೆಂಗಳೂರಿಗೆ ನಿತ್ಯ ತುಮಕೂರಿನಿಂದ ನೂರಾರು ಮಂದಿ ಪ್ರಯಾಣಿಗರು ಕೆಲಸಕ್ಕೆ ಓಡಾಡ್ತಾರೆ. ಈ ಪ್ರಯಾಣಿಕರು ಬಸ್ಗಳಿಗಿಂತ ರೈಲುಗಳಲ್ಲಿ ಪ್ರಯಾಣ ಮಾಡುವುದು ಹೆಚ್ಚಾಗಿದ್ದು, ರೈಲಿನಲ್ಲಿ ಪ್ರಯಾಣಿಕರ ದಟ್ಟನೆ ಹೆಚ್ಚಾಗಿರುತ್ತದೆ.
ರೈಲ್ವೆಇಲಾಖೆ ಗುಡ್ ನ್ಯೂಸ್
ಇದೀಗ Tumkur ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದ್ದು,ತುಮಕೂರು- ಬಾಣಸವಾಡಿನಡುವೆ ಮೆಮು ವಿಶೇಷ ರೈಲು ಸೇವೆಯನ್ನು ಇಂದಿನಿಂದ ಆರಂಭಿಸಲಾಗಿದೆ. ಈ ಮೆಮು ರೈಲು ವೇಗವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಆಗಲಿದೆ.
READ THIS : ‘ಬೆಕ್ಕು ಸಾಕೋದು ಬೇಡ’ ಎಂದಿದ್ದಕ್ಕೆ ವೈದ್ಯೆ Suicide!

Tumkur – ಮೆಮು ರೈಲು ಸೇವೆ ಆರಂಭ
ಇನ್ನು ಈ ವಿಶೇಷ ಮೆಮು ರೈಲು ಮಧ್ಯಾಹ್ನ 3.30ಕ್ಕೆ ಬಾಣಸವಾಡಿಯಿಂದ ಹೊರಟು ಸಂಜೆ 5.15ಕ್ಕೆ ತುಮಕೂರಿಗೆ ತಲುಪಲಿದೆ. ನಂತರ ತುಮಕೂರಿನಿಂದ ಸಂಜೆ 5.45ಕ್ಕೆ ಮರುಪ್ರಯಾಣ ಆರಂಭಿಸಿ ರಾತ್ರಿ 7.40ಕ್ಕೆ ಬಾಣಸವಾಡಿಗೆ ತಲುಪಲಿದೆ. ಕಡಿಮೆ ಸಮಯದಲ್ಲಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ವಿಶೇಷ ಮೆಮು ರೈಲು ಬಿಡಲಾಗಿದೆ.
ಯಾರಿಗೆ ಸಹಾಯಕವಾಗಲಿದೆ?
ಯಶವಂತಪುರ, ಹೆಬ್ಬಾಳ, ಚಿಕ್ಕಬಾಣಾವರ, ಗೊಲ್ಲಹಳ್ಳಿ, ದೊಡ್ಡಬೆಲೆ, ನಿಡವಂದ, ಹಿರೇಹಳ್ಳಿ ಹಾಗೂ ಕ್ಯಾತ್ಸಂದ್ರ ನಿಲ್ದಾಣಗಳಲ್ಲಿ ಈ ಮೆಮು ರೈಲು ನಿಲುಗಡೆಯನ್ನು ಹೊಂದಿದೆ. ದಿನನಿತ್ಯ ಪ್ರಯಾಣಿಸುವ ಉದ್ಯೋಗಿಗಳು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಈ ವಿಶೇಷ ರೈಲು ಸೇವೆ ಹೆಚ್ಚಿನ ಸಹಾಯವಾಗಲಿದೆ.
MUST WATCH : ಕಚೇರಿಯಲ್ಲೇ ಅಧಿಕಾರಿ ಸೂ**ಡ್ ಕೇಸ್ಗೆ ಆಕ್ರೋಶ- ಮೇಲಾಧಿಕಾರಿಯ ತಲೆದಂಡಕ್ಕೆ ಆಗ್ರಹ





