ಬೆಕ್ಕು ಸಾಕಲು ನಿರಾಕರಿಸಿದ ಮನೆಯವರು – ಹೈದರಾಬಾದ್ನಲ್ಲಿ ಯುವತಿ Suicide.

ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಕ್ಕು ಸಾಕುವ ವಿಚಾರಕ್ಕೆ ಯುವ ವೈದ್ಯೆಯೊಬ್ಬಳು Suicide ಮಾಡಿಕೊಂಡಿದ್ದಾಳೆ. ತೆಲಂಗಾಣದ ಹೈದರಾಬಾದ್ನ ಅಲ್ವಾಲ್ನಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ಘಟನೆ ತಿಳಿದು ದೇಶವೇ ಬೆಚ್ಚಿಬಿದ್ದಿದೆ.
ಬೆಕ್ಕು ಸಾಕಲು ನಿರಾಕರಿಸಿದ ಮನೆಯವರು
ಮೃತ ವೈದ್ಯೆಯನ್ನು ಟಿ. ಪ್ರಿನ್ಸಿ ಅಲಿಯಾಸ್ ಶ್ರೇಷ್ಠಾ (23) ಎಂದು ಗುರುತಿಸಲಾಗಿದೆ. ಪ್ರಿನ್ಸಿ ಅವರು ಹೈದರಾಬಾದ್ನ ಅಲ್ವಾಲ್ನಲ್ಲಿ ತಮ್ಮ ತಾಯಿ ಕುಸುಮಲತಾ ಮತ್ತು ಅಜ್ಜಿಯೊಂದಿಗೆ ವಾಸವಾಗಿದ್ದರು. ಕೆಲವು ವಾರಗಳ ಹಿಂದೆ ಯುವತಿ ಬೆಕ್ಕನ್ನು ಮನೆಗೆ ಕರೆತಂದಿದ್ದು, ಮನೆಯವರು ನಿರಂತರ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ನಂತರ ಅವರ ಕುಟುಂಬವು ಬೆಕ್ಕನ್ನು ದತ್ತು ತೆಗೆದುಕೊಳ್ಳುವುದನ್ನು ವಿರೋಧಿಸಿದ್ದು ಇದು ಅವರ ನಡುವೆ ಆಗಾಗ್ಗೆ ಜಗಳಗಳಿಗೆ ಕಾರಣವಾಗಿತ್ತು.

READ THIS : ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದ ‘Dhurandhar 2’- ಮೂರೇ ದಿನದಲ್ಲಿ 500 ಕೋಟಿ ಕಲೆಕ್ಷನ್
ಫ್ಯಾನ್ಗೆ ನೇಣು ಬಿಗಿದುಕೊಂಡು Suicide!
ಶುಕ್ರವಾರ ಸಂಜೆ ಪ್ರಿನ್ಸಿ ಅವರ ತಾಯಿ ಮತ್ತು ಅಜ್ಜಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಸಂಜೆ ಅವರು ಮನೆಗೆ ವಾಪಸ್ ಬಂದಾಗ, ಪ್ರಿನ್ಸಿ ತಮ್ಮ ಕೋಣೆಯ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ನೆರೆಹೊರೆಯವರ ಸಹಾಯದೊಂದಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಶ್ರೇಷ್ಠಾ ಇತ್ತೀಚೆಗೆ ವೈದ್ಯಕೀಯ ಪದವಿ ಪೂರ್ಣಗೊಳಿಸಿ, ಸ್ನಾತಕೋತ್ತರ ಪ್ರವೇಶ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿದ್ದಳು. ಜೊತೆಗೆ ವೈದ್ಯಕೀಯ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದಳು ಎಂದು ತಿಳಿದು ಬಂದಿದೆ.

MUST WATCH : PRAMOD MUTHALIK | ರಾಜ್ಯದಲ್ಲಿ ಡಿಜೆ ಬ್ಯಾನ್ ಆಗೋದಾದ್ರೆ ಆಜಾನ್ ಕೂಡ ಬ್ಯಾನ್ ಆಗ್ಬೇಕು




