ಬೆಳಗಾವಿಯ ನಾನಾವಾಡಿ ಕಮಾಂಡೋ ವಿಂಗ್ನಲ್ಲಿ ಸ್ವಿಮ್ಮಿಂಗ್ ಮಾಡುವಾಗಲೇ Heart Attack ದಿಂದ ಸೇನಾಧಿಕಾರಿ ಅಮಿತ್ ಸಿಂಗ್ ಸಾವನ್ನಪ್ಪಿದ ಘಟನೆ ನೆಡೆದಿದೆ..

ಸ್ವಿಮ್ಮಿಂಗ್ ಮಾಡುವ ವೇಳೆ ತೀವ್ರ Heart Attack ಸಂಭವಿಸಿ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಈ ಘಟನೆ Belagavi ನಗರದ ನಾನಾವಾಡಿ ಪ್ರದೇಶದಲ್ಲಿರುವ ಕಮಾಂಡೋ ವಿಂಗ್ ಆವರಣದಲ್ಲಿ ನಡೆದಿದೆ.
ಟ್ರೇನಿಂಗ್ ವೇಳೆ ನಡೆದ ದುರ್ಘಟನೆ
ಮಾಹಿತಿಯ ಪ್ರಕಾರ, ಹರಿಯಾಣ ಮೂಲದ ಲೆಫ್ಟಿನೆಂಟ್ ಅಮಿತ್ ಸಿಂಗ್ ಅವರು Maratha Light Infantry Regimental Centre (ಎಂಎಲ್ಐಆರ್ಸಿ) ಕಮಾಂಡೋ ವಿಂಗ್ನಲ್ಲಿ ಟ್ರೇನಿಂಗ್ ಪಡೆಯುತ್ತಿದ್ದರು.
MUST READ : ನಿಂತಿದ್ದ ಕ್ಯಾಂಟರ್ಗೆ Tata Ace ಡಿಕ್ಕಿ – ಮೂವರು ಸಾವು ..!

ಈ ವೇಳೆ, ಕಮಾಂಡೋ ವಿಂಗ್ ಆವರಣದಲ್ಲಿರುವ ಸ್ವಿಮ್ಮಿಂಗ್ ಪೂಲ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಅವರಿಗೆ ತೀವ್ರ ಹೃದಯಾಘಾತವಾಗಿದೆ.
ತಕ್ಷಣ ಪ್ರಥಮ ಚಿಕಿತ್ಸೆ – ಆದರೂ ಜೀವ ಉಳಿಯಲಿಲ್ಲ
ಘಟನೆ ಸಂಭವಿಸಿದ ಕೂಡಲೇ ಲೈಫ್ ಗಾರ್ಡ್ ಪ್ರದೀಪ್ ಕುಮಾರ್ ಅವರು ಅಧಿಕಾರಿಯನ್ನು ನೀರಿನಿಂದ ಹೊರತೆಗೆದು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.

ಆದರೆ, Belagavi Institute of Medical Sciences (BIMS) Hospital ಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಲೆಫ್ಟಿನೆಂಟ್ ಅಮಿತ್ ಸಿಂಗ್ ಅವರು ಕೊನೆಯುಸಿರೆಳೆದಿದ್ದಾರೆ.
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ಈ ಘಟನೆ Tilakwadi Police Station ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಪೊಲೀಸರು ಮಾಹಿತಿ ದಾಖಲಿಸಿಕೊಂಡಿದ್ದಾರೆ.
MUST WATCH : ಜಾನುವಾರು ಸಾಗಾಟ ವಿಚಾರಕ್ಕೆ ಇದೆಂಥಾ ದಬ್ಬಾಳಿಕೆ- ಬಜರಂಗ ದಳದವರ ಮೇಲೆ ಹಲ್ಲೆ ಮಾಡಿದ್ರಾ..?

