ದಿನಕ್ಕೆ 49 ಸಾವಿರ ಎಲ್ಪಿಜಿ ಸಿಲಿಂಡರ್ ಕೊರತೆ, ಸರಿಪಡಿಸಲು ಪೆಟ್ರೋಲಿಯಂ ಸಚಿವರಿಗೆ CM ಸಿದ್ದರಾಮಯ್ಯ ಆಗ್ರಹ.

ರಾಜ್ಯದಲ್ಲಿ ಹೆಚ್ಚುತ್ತಿರುವ ವಾಣಿಜ್ಯ ಎಲ್ಪಿಜಿ ಕೊರತೆಯಿಂದ ಹೋಟೆಲ್ ಹಾಗೂ ಆತಿಥ್ಯ ವಲಯದಲ್ಲಿ ಉಂಟಾಗಿರುವ ಗಂಭೀರ ಪರಿಸ್ಥಿತಿಯ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿಅವರಿಗೆ ತುರ್ತು ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
LPG ಪೂರೈಕೆಗೆ ಆದ್ಯತೆ
ಪತ್ರದಲ್ಲಿ, ಗೃಹ ಬಳಕೆದಾರರಿಗೆ LPG ಪೂರೈಕೆಗೆ ಆದ್ಯತೆ ನೀಡುವ ಕೇಂದ್ರದ ನಿರ್ದೇಶನಗಳ ಪರಿಣಾಮವಾಗಿ ವಾಣಿಜ್ಯ ಎಲ್ಪಿಜಿ ಲಭ್ಯತೆಯಲ್ಲಿ ಭಾರೀ ಕೊರತೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿಗಳ ಅನ್ವಯ ಅಗತ್ಯ ಕ್ಷೇತ್ರಗಳಿಗೆ ಹಂಚಿಕೆಯನ್ನು ಮಿತಿಗೊಳಿಸಿ ಆದ್ಯತೆ ನೀಡುತ್ತಿದೆ ಎಂದೂ ಉಲ್ಲೇಖಿಸಿದ್ದಾರೆ.
READ THIS : ಹುಡುಗಿಗಾಗಿ ತಮ್ಮನಿಗೆ ಚಟ್ಟ ಕಟ್ಟಿದ ಪಾಪಿ ಅಣ್ಣ!
CM ಆತಂಕ
ಆದರೆ, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕ್ಯಾಟರಿಂಗ್ ಸಂಸ್ಥೆಗಳು ಹಾಗೂ ಪಿಜಿ ವಸತಿಗಳಿಂದ ದಿನಕ್ಕೆ ಸುಮಾರು 50,000 ಸಿಲಿಂಡರ್ಗಳ ಬೇಡಿಕೆ ಇರುವುದಾದರೆ, ಪ್ರಸ್ತುತ ಕೇವಲ 1,000 ಸಿಲಿಂಡರ್ಗಳನ್ನು ಮಾತ್ರ ಪೂರೈಸಲಾಗುತ್ತಿದೆ. ಇದರ ಪರಿಣಾಮವಾಗಿ ಅನೇಕ ಸಂಸ್ಥೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿದ್ದು, ವಿದ್ಯಾರ್ಥಿಗಳು, ಐಟಿ ವೃತ್ತಿಪರರು, ರೈತರು ಹಾಗೂ ಹಾಲು ಉತ್ಪಾದಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಪಿಜಿ ವಿತರಣೆಯಲ್ಲಿ ಪಾರದರ್ಶಕತೆ ಕೊರತೆ
ಇದಲ್ಲದೆ, ಗೃಹ ಬಳಕೆದಾರರ ಎಲ್ಪಿಜಿ ಪೂರೈಕೆಗೆ ಐಟಿ ವ್ಯವಸ್ಥೆ ಇದ್ದರೂ, ವಾಣಿಜ್ಯ ಹಾಗೂ ಆಟೋ ಎಲ್ಪಿಜಿ ವಿತರಣೆಗೆ ಸಮಗ್ರ ಮೇಲ್ವಿಚಾರಣಾ ವ್ಯವಸ್ಥೆಯ ಕೊರತೆ ಇದೆ ಎಂದು ಅವರು ಹೇಳಿದ್ದಾರೆ. ಆಟೋ ರಿಕ್ಷಾಗಳಿಗೆ ಮುಖ್ಯ ಇಂಧನವಾಗಿರುವ ಆಟೋ ಎಲ್ಪಿಜಿ ವಿತರಣೆಯಲ್ಲಿ ಪಾರದರ್ಶಕತೆ ಕೊರತೆ ಉಂಟಾಗುತ್ತಿದೆ ಎಂದೂ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ
ಶೀಘ್ರದಲ್ಲೇ ಭಾರತಕ್ಕೆ ಎರಡು ಎಲ್ಪಿಜಿ ಟ್ಯಾಂಕರ್ಗಳು ಬರಲಿರುವ ಮಾಹಿತಿ ಇದೆ ಎಂದು ಹೇಳಿರುವ CM, ವಿಶೇಷವಾಗಿ ಬೆಂಗಳೂರು ನಗರವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕಕ್ಕೆ ಸಮರ್ಪಕ ಪ್ರಮಾಣದಲ್ಲಿ ವಾಣಿಜ್ಯ ಹಾಗೂ ಆಟೋ ಎಲ್ಪಿಜಿ ಪೂರೈಕೆಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.

MUST WATCH : ಅಮಾಯಕನ ಮೇಲೆ ಸಬ್ ಇನ್ಸ್ ಪೆಕ್ಟರ್, ಪಿಡಿಒ ದರ್ಪ ಮೆರೆದ್ರಾ?!




