Bengaluru : ರೀಲ್ಸ್ ಹುಚ್ಚಾಟ: ತಂದೆಯನ್ನೇ ಚೀಲದಲ್ಲಿ ತುಂಬಿ ಪಾರ್ಸೆಲ್ ಮಾಡಲು ಯತ್ನಿಸಿದ ಫ್ಯಾಮಿಲಿ.!

Bengaluru : ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಹುಚ್ಚಾಟ ಕೆಲವೊಮ್ಮೆ ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಒಂದು ವಿಚಿತ್ರ ಘಟನೆ ಸಾಕ್ಷಿಯಾಗಿದೆ. ರೀಲ್ಸ್ ಗಾಗಿ ಕುಟುಂಬವೊಂದು ತಮ್ಮದೇ ತಂದೆಯನ್ನು ಗೋಣಿಚೀಲದಲ್ಲಿ ಕಟ್ಟಿಕೊಂಡು ಕೊರಿಯರ್ ಕಚೇರಿಗೆ ತಂದು ಪಾರ್ಸೆಲ್ ಮಾಡಲು ಯತ್ನಿಸಿದ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.
Bengaluru ನಗರದಲ್ಲಿ ಅಮಾನುಷ ಕೃತ್ಯ
ಬೆಂಗಳೂರಿನ ವಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಿಯರ್ ಕಚೇರಿಯೊಂದಕ್ಕೆ ಮಂಗಳವಾರ ಐವರು ಸದಸ್ಯರ ಕುಟುಂಬವೊಂದು ಬಂದಿತ್ತು. ಮಹಿಳೆ, ಆಕೆಯ ಪತಿ, ಅತ್ತೆ ಮತ್ತು ಮೈದುನ ಸೇರಿ ದೊಡ್ಡದೊಂದು ಪಾರ್ಸೆಲ್ ಹೊತ್ತುಕೊಂಡು ಬಂದಿದ್ದರು. ಪಾರ್ಸೆಲ್ ಗಾತ್ರ ದೊಡ್ಡದಾಗಿದ್ದರಿಂದ ಅನುಮಾನಗೊಂಡ ಕೊರಿಯರ್ ಸಿಬ್ಬಂದಿ, ‘ಒಳಗೆ ಏನಿದೆ?’ ಎಂದು ಪ್ರಶ್ನಿಸಿದ್ದಾರೆ. ಆದರೆ ಕುಟುಂಬದವರು ಮೌನಕ್ಕೆ ಶರಣಾದರು.
“ಇದನ್ನು ಬೇರೆ ರಾಜ್ಯಕ್ಕೆ ಪಾರ್ಸೆಲ್ ಮಾಡಿ, ಹಣ ಕೊಡುತ್ತೇವೆ”
ಅನುಮಾನ ಹೆಚ್ಚಾದ ಹಿನ್ನೆಲೆ ಚೀಲವನ್ನು ತೆರೆಯುತ್ತಿದ್ದಂತೆ ಸಿಬ್ಬಂದಿಗೆ ಆಘಾತ ಕಾದಿತ್ತು. ಅದರೊಳಗೆ ಒಬ್ಬ ವೃದ್ಧ ವ್ಯಕ್ತಿ ಇದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅವರನ್ನು ಹೊರತೆಗೆದು ನೀರು ಕುಡಿಸಿ ಸಹಾಯ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಆ ಕುಟುಂಬದ ಸದಸ್ಯರು “ಇದನ್ನು ಬೇರೆ ರಾಜ್ಯಕ್ಕೆ ಪಾರ್ಸೆಲ್ ಮಾಡಿ, ಹಣ ಕೊಡುತ್ತೇವೆ” ಎಂದು ಒತ್ತಾಯಿಸಿದ್ದಾರೆ.

READ THIS : ಯುಗಾದಿಗೆ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಬಿಗ್ ಶಾಕ್ ನೀಡಿದ ಖಾಸಗಿ ಬಸ್!
‘ಪ್ರ್ಯಾಂಕ್ ವಿಡಿಯೋ’
ಜೀವಂತ ವ್ಯಕ್ತಿಯನ್ನು ಪಾರ್ಸೆಲ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸಿಬ್ಬಂದಿ, ಯುವಕರೊಂದಿಗೆ ವಾಗ್ವಾದಕ್ಕೂ ಇಳಿದಿದ್ದಾರೆ. ಬಳಿಕ ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದಾಗ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಈ ಎಲ್ಲಾ ದೃಶ್ಯಗಳು ಕಚೇರಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು. ಬಳಿಕ ಆರೋಪಿಗಳನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಈ ಘಟನೆ ಹಿಂದೆ ‘ಪ್ರ್ಯಾಂಕ್ ವಿಡಿಯೋ’ ಎಂಬ ಅಸಲಿ ಉದ್ದೇಶ ಇರುವುದಾಗಿ ತಿಳಿದುಬಂದಿದೆ.
ರೀಲ್ಸ್ ಹುಚ್ಚಾಟ
ಪೊಲೀಸರ ಪ್ರಕಾರ, ಈ ತಂಡದಲ್ಲಿ ಮಹಿಳೆಯರು ಮತ್ತು ಯುವತಿಯರು ಸೇರಿ ಐವರು ಇದ್ದರು. ಉಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಬಸ್ ಟಿಕೆಟ್ಗಳು ಸಿಗುತ್ತಿಲ್ಲ, ಹೀಗಾಗಿ ಪ್ರಯಾಣಕ್ಕೆ ‘ಕೊರಿಯರ್’ ಮಾಡುವುದೊಂದೇ ದಾರಿ ಎಂಬ ಕಾನ್ಸೆಪ್ಟ್ನಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡಲು ಈ ಪ್ಲಾನ್ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಯಾರೂ ಈ ರೀತಿಯ ಅಪಾಯಕಾರಿ ಪ್ರ್ಯಾಂಕ್ ಮಾಡಲು ಹೋಗಬೇಡಿ
ಇನದನು ಈ ಘಟನೆ ಸಂಬಂಧ ಯುವತಿಯೊಬ್ಬಳು ವಿಡಿಯೋ ಮೂಲಕ ಕ್ಷಮೆಯಾಚಿಸಿ, “ನಾವು ಮಾಡಿದ್ದು ತಪ್ಪು ಎಂದು ಈಗ ಅರಿವಾಗಿದೆ. ಯಾರೂ ಈ ರೀತಿಯ ಅಪಾಯಕಾರಿ ಪ್ರ್ಯಾಂಕ್ ಮಾಡಲು ಹೋಗಬೇಡಿ” ಎಂದು ಮನವಿ ಮಾಡಿಕೊಂಡಿದ್ದಾಳೆ.
MUST WATCH : ಸದನದಲ್ಲಿ ಪ್ಲೆಕ್ಸ್, ಬ್ಯಾನರ್ ಗದ್ದಲ ಸರ್ಕಾರದ ವಿರುದ್ದ ಸುರೇಶ್ ಗೌಡ ಕಿಡಿ




