Bengaluru : ಯುಗಾದಿಗೆ ಊರಿಗೆ ಹೊರಟವರಿಗೆ ಶಾಕ್ – ದರ ಹೆಚ್ಚಿಸಿದ ಖಾಸಗಿ ಬಸ್ಗಳು, ಎಲ್ಲಿಗೆ ಎಷ್ಟು?

Bengaluru : ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಊರುಗಳಿಗೆ ತೆರಳುತ್ತಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ದರ ಏರಿಕೆಯ ಬಿಸಿ ತಟ್ಟಿದೆ. ಹಬ್ಬದ ಸೀಸನ್ನನ್ನು ಅವಕಾಶವನ್ನಾಗಿ ಮಾಡಿಕೊಂಡು ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು 2ರಿಂದ 3 ಪಟ್ಟು ಹೆಚ್ಚಿಳ ಮಾಡಿದ್ದಾರೆ.
ಇನ್ನು ಬೆಂಗಳೂರು – ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಮಾರ್ಗಗಳಲ್ಲಿ ದರ ಏರಿಕೆ ಮಾಡಲಾಗಿದೆ.

ಪ್ರಮುಖ ಮಾರ್ಗಗಳ ಹೊಸ ದರಗಳು
- ಬೆಂಗಳೂರು – ಮಂಗಳೂರು: ₹600 ರಿಂದ ₹2,999
- ಬೆಂಗಳೂರು – ಧಾರವಾಡ / ಹುಬ್ಬಳ್ಳಿ: ₹400–₹1,300ರಿಂದ ₹4,500ರವರೆಗೆ
- ಬೆಂಗಳೂರು – ಶಿವಮೊಗ್ಗ: ₹400ರಿಂದ ₹2,799
- ಬೆಂಗಳೂರು – ಧರ್ಮಸ್ಥಳ: ₹500ರಿಂದ ₹3,600
- ಬೆಂಗಳೂರು – ಮೈಸೂರು: ₹350ರಿಂದ ₹2,500
READ THIS : ರೈಲ್ವೆ ನೇಮಕಾತಿ – 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾಗಿದ್ರೆ ಸಾಕು

KSRTC ನೆರವು – Bengaluru
ಆದರೆ ಇದರ ನಡುವೆ ಖಾಸಗಿ ಬಸ್ಗಳ ದರ ಏರಿಕೆಯಿಂದ ಕಂಗಾಲಾದ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೆರವಾಗಲಿದೆ. ಮಾರ್ಚ್ 18, 19 ಮತ್ತು 20 ರಂದು ಬೆಂಗಳೂರಿನ ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್), ಮೈಸೂರು ರಸ್ತೆ ಸ್ಯಾಟಲೈಟ್ ಮತ್ತು ಶಾಂತಿನಗರ ನಿಲ್ದಾಣಗಳಿಂದ ರಾಜ್ಯದ ವಿವಿಧ ಮೂಲೆಗಳಿಗೆ 2,000 ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲಾಗಿದೆ.
MUST WATCH : ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಕ್ರಮ – ಚುನಾವಣೆಯನ್ನೇ ರದ್ದು ಮಾಡಿದ ಅಧಿಕಾರಿಗಳು





