SPECIAL TRAIN MANGALORE TO BENGALORE : ದಸರಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಬೆಂಗಳೂ ರಿನಿಂದ ಹೊಸಪೇಟೆ ಮತ್ತು ಮಂಗಳೂರಿಗೆ ಒಂದು ಟ್ರಿಪ್ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.
ರೈಲು ಸಂಖ್ಯೆ 06257/06258 ಸೆಪ್ಟೆಂಬರ್ 30ರಂದು ಯಶವಂತಪುರದಿಂದ ರಾತ್ರಿ 11.55ಕ್ಕೆ ಹೊರಡಲಿದೆ ಮತ್ತು ಅಕ್ಟೋಬರ್ 1ರಂದು ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರು ಜಂಕ್ಷನ್ನಿಂದ ಮರುದಿನ ಅ.1 ರಂದು ಮಧ್ಯಾಹ್ನ 2.35ಕ್ಕೆ ಹೊರಡುವ ಈ ರೈಲು, ರಾತ್ರಿ 11.30ಕ್ಕೆ ಯಶವಂತಪುರ ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟ ಣೆಯಲ್ಲಿ ತಿಳಿಸಿದೆ.
ಎಸ್ಎಂವಿಬಿ - ಹೊಸಪೇಟೆ ನಡುವೆ ವಿಶೇಷ ರೈಲು:
ಎಸ್ಎಂವಿಬಿಯಿಂದ ಸೆ.26 ಮತ್ತು ಸೆ.28ರಂದು ಸಂಜೆ 7 ಗಂಟೆಗೆ ಹೊರಡುವ ರೈಲು, ಮರುದಿನ ಬೆಳಗ್ಗೆ 4.15ಕ್ಕೆ ಹೊಸಪೇಟೆ ತಲುಪಲಿದೆ. ಇನ್ನು, ಹೊಸಪೇಟೆಯಿಂದ ಸೆ.27 ಮತ್ತು ಸೆ.29ರಂದು ರಾತ್ರಿ 8.45ಕ್ಕೆ ಹೊರಡುವ ರೈಲು, ಮರು ದಿನ ಬೆಳಗ್ಗೆ 8.10ಕ್ಕೆ ಎಸ್ಎಂವಿಬಿಗೆ ತಲುಪಲಿದೆ.
ಇನ್ನು ಬೆಂಗಳೂರು - ಮಂಗಳೂರು ನಡುವೆ ಕಾರ್ಯಾಚರಿಸಲಾಗುತ್ತಿರುವ ದಸರಾ ವಿಶೇಷ ರೈಲಿಗೆ ಪ್ರಯಾಣಿಕರಿಂದ ಭಾರೀ ಪ್ರತಿಸ್ಪಂದನೆ ದೊರಕಿದೆ. ಕೇವಲ 22 ಗಂಟೆಗಳೊಳಗೆ ಸ್ಲೀಪರ್ ಕೋಚ್ನ ಎಲ್ಲಾ ಸೀಟುಗಳು ಬುಕ್ ಆಗಿವೆ. ಹಬ್ಬದ ಸಮಯದಲ್ಲಿ ಇಂತಹ ವಿಶೇಷ ರೈಲುಗಳ ಅವಶ್ಯಕತೆ ಎಷ್ಟು ಇರುವುದೆಂಬುದು ಇದರಿಂದ ಸಾಬೀತಾಗಿದೆ ಎಂದು ರೈಲು ಪ್ರಯಾಣಿಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ದಸರಾ ಪ್ರಯಾಣಕ್ಕೆ ಯೋಜನೆ ಮಾಡಿಕೊಂಡಿರುವವರು ಈ ವಿಶೇಷ ರೈಲುಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.