
U-19 ODI CRICKET : 14 ವರ್ಷದ ವೈಭವ್ ಸೂರ್ಯವಂಶಿಯ (VAIBHAV SURYAVANSHI) ಬ್ಯಾಟಿಂಗ್ ವೈಭವ ವಿಶ್ವ ಕ್ರಿಕೆಟ್ ನಲ್ಲಿ ಹೊಸ ಅಲೆ ಎಬ್ಬಿಸಿದೆ. ಭಾರತೀಯ ಯೂತ್ ಕ್ರಿಕೆಟ್ನಲ್ಲಿ ನಕ್ಷತ್ರದಂತೆ ಹೊರ ಹೊಮ್ಮಿರುವ ಈ ಯುವ ಪ್ರತಿಭೆ, ಅಂಡರ್-19 ಯೂತ್ ಒಡಿಐ (U-19 ODI CRICKET ) ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ, ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ.
ಯೆಸ್ ..ಐಪಿಎಲ್ ನಂತರ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ವೈಭವ್, ಅಲ್ಲಿ ರನ್ ಗಳ ಸುರಿಮಳೆ ಅರಿಸಿದ್ದು, ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲೂ ತಮ್ಮ ಮಿಂಚು ಮುಂದುವರಿಸಿದ್ದಾರೆ. ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 22 ಎಸೆತಗಳಲ್ಲಿ 38 ರನ್ ಸಿಡಿಸಿದ ವೈಭವ್, ಎರಡನೇ ಪಂದ್ಯದಲ್ಲಿ 70 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದಾರೆ.
ವೈಭವ್ ಸೂರ್ಯವಂಶಿ ಸಿಕ್ಸರ್ಗಳ ದಾಖಲೆ ಬರೆದಿದ್ದು, ಎದುರಾಳಿಗೆ ನಡುಕ ಹುಟ್ಟಿಸುವಷ್ಟು ಪವರ್ಪ್ಯಾಕ್ ಆಟವಾಡ್ತಾ ಇದ್ದಾರೆ. ತಮ್ಮ ನಿರಂತರ ಪ್ರದರ್ಶನ ಮತ್ತು ಫೈರಿ ಬ್ಯಾಟಿಂಗ್ ಶೈಲಿಯಿಂದ ವೈಭವ್ ಈಗಾಗಲೇ ಹಲವಾರು ಕ್ರಿಕೆಟ್ ಪಂಡಿತರ ಗಮನ ಸೆಳೆದಿದ್ದಾರೆ.




