Mangaluru ಉಳ್ಳಾಲ ತಾಲೂಕಿನ ಕುತ್ತಾರು ಪ್ರದೇಶದಲ್ಲಿ ಬಾವಿ ಕೊರೆಯುವ ವೇಳೆ ಕ್ರೇನ್ನಿಂದ ಬಕೆಟ್ ಕಳಚಿ ಕಾರ್ಮಿಕನ ತಲೆ ಮೇಲೆ ಬಿದ್ದ ಪರಿಣಾಮ ಸಾವನ್ನಪ್ಪಿದ ಘಟನೆ ನಡೆದಿದೆ…

Mangaluru : ಹೊಸ ಬಾವಿ ಕೊರೆಯುವ ವೇಳೆ 30 ಅಡಿ ಎತ್ತರದಿಂದ ಮಣ್ಣು ತುಂಬಿದ ಕಬ್ಬಿಣದ ಬಕೆಟ್ ಕ್ರೇನ್ನ ಕೊಕ್ಕೆಯಿಂದ ಬೇರ್ಪಟ್ಟು ಕಾರ್ಮಿಕನ ತಲೆ ಮೇಲೆ ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಈ ಘಟನೆ Ullal ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರದಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕನನ್ನು ಶಿವಮೊಗ್ಗ ಮೂಲದ ವಲಸೆ ಕಾರ್ಮಿಕ ಶಿವಕುಮಾರ್ ಜಿ.ಕೆ (30) ಎಂದು ಗುರುತಿಸಲಾಗಿದೆ. ಅವರು ಬಾವಿಯ ಒಳಭಾಗದಲ್ಲಿ ಇನ್ನಿಬ್ಬರು ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಕ್ರೇನ್ ಮೂಲಕ ಮಣ್ಣನ್ನು ಮೇಲಕ್ಕೆತ್ತುತ್ತಿದ್ದಾಗ ತಾಂತ್ರಿಕ ದೋಷ ಉಂಟಾಗಿ ಬಕೆಟ್ ಕಳಚಿ ಶಿವಕುಮಾರ್ ಅವರ ತಲೆ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
MUST READ : IPL ಪಂದ್ಯ ಹಿನ್ನೆಲೆ ತಡರಾತ್ರಿ 2ರವರೆಗೆ Namma Metro ಸಂಚಾರ ವಿಸ್ತರಣೆ..!!

ಮೃತ ಶಿವಕುಮಾರ್ ಅವರು Soraba ತಾಲೂಕಿನ ಮಲ್ಲಾಪುರ ಗ್ರಾಮದ ನಿವಾಸಿಯಾಗಿದ್ದು, ಎರಡು ವಾರಗಳ ಹಿಂದಷ್ಟೇ ತಮ್ಮ ಕಿರಿಯ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಅವರು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದು ಕುಟುಂಬದಲ್ಲಿ ಆಕ್ರಂದನ ಮೂಡಿಸಿದೆ.
ಘಟನೆ ಸಂಬಂಧ Ullal Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
MUST WATCH : TUMAKURU | ಬಡ ಮಕ್ಕಳಿಗಾಗಿ ಶೆಡ್ ಬಾಡಿಗೆಗೆ ಕೊಟ್ಟಿದ್ದೇ ನನಗೂ ಇದಕ್ಕೂ ಸಂಬಂಧ ಇಲ್ಲ ಎಂದ VALE CHNADRU




