Chitradurga : ಭೀಕರ ರಸ್ತೆ ಅಪಘಾತಕ್ಕೆ ಮೂವರು ಪೊಲೀಸರು ಸಾವು.

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ಮೂವರು ಪೊಲೀಸರು ಮೃತಪಟ್ಟ ಘಟನೆ Chitradurga ಜಿಲ್ಲೆಯ ಚೆಳ್ಳಕೆರೆ ತಾಲೂಕಿನ ಹೆಗ್ಗೆರೆ ಬಳಿ ಶ್ರೀರಂಗಪಟ್ಟಣ – ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಈ ಮೂವರೂ ಪೊಲೀಸರು ಸಶಸ್ತ್ರ ಪಡೆ ಪೊಲೀಸ್ ಅಧಿಕಾರಿಗಳಾಗಿದ್ದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ದುರ್ಮರಣ
ಮೃತರನ್ನು ಮಂಜುನಾಥ್ (32), ಸಚಿನ್ (30) ಮತ್ತು ಅಮರೇಶ್ (29) ಎಂದು ಗುರುತಿಸಲಾಗಿದೆ. ಮಂಜುನಾಥ್ ಕೊಪ್ಪಳ ಜಿಲ್ಲೆಯ ಗಂಗಾವತಿಯವರು, ಸಚಿನ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು ಮತ್ತು ಅಮರೇಶ್ ರಾಯಚೂರು ಜಿಲ್ಲೆಯ ಸಿಂಧನೂರಿನವರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಮಹಾಂತೇಶ್ ಮತ್ತು ಶಿವಮೊಗ್ಗ ಜಿಲ್ಲೆಸಾಗರದ ಈಶ್ವರ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಐದೂ ಮಂದಿ ಸಶಸ್ತ್ರ ಮೀಸಲು ಪಡೆಯ 2023ರ ಬ್ಯಾಚಿನ ಅಧಿಕಾರಿಗಳಾಗಿದ್ದಾರೆ.
READ THIS : Raichur|ತಾಯಿ ಎದುರಲ್ಲೇ ಮಗನ ಬರ್ಬರ ಕೊಲೆ

ಗೆಳೆಯನ ಮದುವೆಗೆ ಹೊರಟಿದ್ದವರು ದಾರುಣ ಸಾವು
ಇವರೆಲ್ಲರು ತಮ್ಮ ಸ್ನೇಹಿತ ವೀರೇಶ್ ಅವರ ಮದುವೆಗೆ ಬಳ್ಳಾರಿಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಎಲ್ಲರೂ ಒಂದೇ ಬ್ಯಾಚ್ನವರಾಗಿದ್ದು, ಮೊದಲಿನಿಂದಲೂ ಆತ್ಮೀಯ ಸ್ನೇಹಿತರಾಗಿದ್ದರು. ಸ್ನೇಹಿತನ ಮದುವೆಗೆ ಖುಷಿಯಿಂದ ಹೊರಟಿದ್ದವರಲ್ಲಿ ಮೂವರು ದಾರಿಮಧ್ಯೆಯೇ ಪ್ರಾಣ ಕಳೆದುಕೊಂಡಿದ್ದಾರೆ. ವಿಷಯ ತಿಳಿದು ಅತ್ತ ವಿರೇಶ್ ಕೂಡ ದುಃಖಿತರಾಗಿದ್ದಾರೆ. ಇನ್ನು ಡಿಕ್ಕಿಯ ತೀವ್ರತೆ ಎಷ್ಟಿತ್ತು ಎಂದರೆ, ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಗೃಹ ಸಚಿವರು
ಕಾರು ಹಿರಿಯೂರು ಕಡೆಯಿಂದ ವೇಗವಾಗಿ ಬರುತ್ತಿತ್ತು. ಲಾರಿ ಚಳ್ಳಕೆರೆಗೆ ಹೊರಟಿತ್ತು. ಈ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿಯಾಗಿದೆ. ಆಕ್ಸಿಡೆಂಟ್ ಆಗುತ್ತಿದ್ದಂತೆ ಅಲ್ಲಿಯೇ ಇದ್ದ ಪ್ರಕಾಶ್ ಸ್ಪಾಂಜ್ ಕಂಪನಿಯ ಸಿಬ್ಬಂದಿ, ಆಂಬುಲೆನ್ಸ್, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೂವರು ಸಶಸ್ತ್ರ ಮೀಸಲು ಪಡೆ ಪೊಲೀಸರು ಅಪಘಾತದಲ್ಲಿಮೃತಪಟ್ಟ ವಿಷಯ ತಿಳಿದು ಗೃಹ ಸಚಿವ ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ, ಐಜಿ ಲಾಭುರಾಮ್, ಡಿಐಜಿ ಪರಶುರಾಂ, ಎಸ್ಪಿ ರಂಜಿತ್ ಕುಮಾರ್ ಭಂಡಾರು ಸ್ಥಳಕ್ಕೆ ಭೇಟಿ ನೀಡಿದ್ದರು.
MUST WATCH : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಪ್ರಾಣಾಪಾಯದಿಂದ ಚಾಲಕ ಜಸ್ಟ್ ಮಿಸ್




