ರಾಜ್ಯದಲ್ಲಿ LPG ಸಿಲಿಂಡರ್ ಕೊರತೆ ನಡುವೆ ಹೋಟೆಲ್ ಮಾಲೀಕರಿಗೆ ಸರ್ಕಾರದಿಂದ ಬಿಗ್ ರಿಲೀಫ್ ಸಿಕ್ಕಿದೆ..!!

ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ ಹೋಟೆಲ್ ಮಾಲೀಕರಿಗೆ ಸರ್ಕಾರದಿಂದ ಮಹತ್ವದ ನಿರ್ಧಾರ ಪ್ರಕಟವಾಗಿದೆ. Commercial LPG Cylinder ಸಂಬಂಧಿಸಿ ಪ್ರತಿದಿನ 1,000 ಕಮರ್ಷಿಯಲ್ ಸಿಲಿಂಡರ್ ಹೋಟೆಲ್ಗಳಿಗೆ ಪೂರೈಸಲು ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿ ನೀಡಿದ್ದಾರೆ…

ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ 100% ಗ್ಯಾಸ್ ಪೂರೈಕೆ
ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯ ನಡುವೆಯೂ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಏರ್ಲೈನ್ಸ್ ಮತ್ತು ರೈಲ್ವೆ ಕ್ಯಾಂಟೀನ್ಗಳಿಗೆ ಶೇಕಡಾ 100 ರಷ್ಟು ಕಮರ್ಷಿಯಲ್ ಗ್ಯಾಸ್ ಪೂರೈಕೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದು ಸಾರ್ವಜನಿಕ ಸೇವೆಗಳಿಗೆ ಯಾವುದೇ ತೊಂದರೆ ಆಗದಂತೆ ತೆಗೆದುಕೊಂಡ ಕ್ರಮ ಎಂದು ಹೇಳಿದ್ದಾರೆ..
MUST READ : ಇಂದು 37 Rajya Sabha ಸ್ಥಾನಗಳಿಗೆ ಚುನಾವಣೆ..!!

ರಾಜ್ಯಕ್ಕೆ ದಿನಕ್ಕೆ 44 ಸಾವಿರ ಸಿಲಿಂಡರ್ ಅಗತ್ಯ
ರಾಜ್ಯದಲ್ಲಿ ಪ್ರತಿದಿನ ಸುಮಾರು 44,000 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಅಗತ್ಯವಿದೆ. ಆದರೆ ಸದ್ಯ ರಾಜ್ಯಕ್ಕೆ ಕೇವಲ 9,000 ಸಿಲಿಂಡರ್ ಮಾತ್ರ ಲಭ್ಯವಾಗುತ್ತಿವೆ.
ಆ 9 ಸಾವಿರ ಸಿಲಿಂಡರ್ಗಳ ಹಂಚಿಕೆ ಈ ರೀತಿ ಮಾಡಲಾಗಿದೆ
- 4,000 ಸಿಲಿಂಡರ್ – ಆಸ್ಪತ್ರೆಗಳಿಗೆ
- 2,500 ಸಿಲಿಂಡರ್ – ಆಟೋಗಳಿಗೆ
- 1,000 ಸಿಲಿಂಡರ್ – ಹೋಟೆಲ್ಗಳಿಗೆ
ಇದರ ಮೂಲಕ ಪ್ರಮುಖ ಸೇವಾ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಅನಗತ್ಯವಾಗಿ ಸಿಲಿಂಡರ್ ಬುಕ್ ಮಾಡಬೇಡಿ – ಸಚಿವರ ಮನವಿ
ಇದೇ ವೇಳೆ ಸಚಿವರು ಗ್ರಾಹಕರಿಗೆ ಮಹತ್ವದ ಮನವಿ ಮಾಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ಗಳನ್ನು ಬುಕ್ ಮಾಡಬಾರದು ಎಂದು ತಿಳಿಸಿದ್ದಾರೆ.
ಹೀಗೆ ಮಾಡಿದರೆ ಗ್ಯಾಸ್ ಕೊರತೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ…

ಗ್ಯಾಸ್ ಕೊರತೆ ಕುರಿತು ಕೇಂದ್ರಕ್ಕೆ ಸಿಎಂ ಪತ್ರ
ರಾಜ್ಯದಲ್ಲಿ ಗ್ಯಾಸ್ ಅಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಎರಡನೇ ಬಾರಿ ಪತ್ರ ಬರೆಯಲಿದ್ದಾರೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ.
ರಾಜ್ಯದ ಜನರಿಗೆ ತೊಂದರೆ ಉಂಟಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡುವುದಾಗಿ ಹೇಳಿದ್ದಾರೆ.
MUST WATCH : ಕ್ರೀಡಾ ತರಬೇತಿ ಕೇಂದ್ರಗಳ ಲೋಕಾರ್ಪಣೆ – SPORTS CITYಯತ್ತ ನಮ್ಮ ತುಮಕೂರು | TUMAKURU NEWS |




