LPG ಕೊರತೆಯ ನಡುವೆಯೂ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸೌದೆ ಒಲೆ ಹಾಗೂ ಸೋಲಾರ್ ಎನರ್ಜಿ ಬಳಸಿ ಪ್ರತಿದಿನ 30,000ಕ್ಕೂ ಹೆಚ್ಚು ಮಕ್ಕಳಿಗೆ ಮತ್ತು ಭಕ್ತರಿಗೆ ಅನ್ನ ದಾಸೋಹ ನೀಡಲಾಗುತ್ತಿದೆ.

ದೇಶಾದ್ಯಂತ LPG ಸಿಲಿಂಡರ್ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ, ತುಮಕೂರಿನ ಪ್ರಸಿದ್ಧ ಸಿದ್ದಗಂಗಾ ಮಠ ಇಂಧನ ಉಳಿತಾಯದಲ್ಲಿ ಮಾದರಿ ಸೃಷ್ಟಿಸಿದೆ. ಗ್ಯಾಸ್ ಕೊರತೆ ನಡುವೆಯೂ ಮಠವು ಸೌದೆ ಒಲೆಗಳನ್ನು ಬಳಸಿ ಪ್ರತಿದಿನ ಸಾವಿರಾರು ಜನರಿಗೆ ಅನ್ನ ದಾಸೋಹ ನೀಡುತ್ತಿರುವುದು ಗಮನಾರ್ಹವಾಗಿದೆ.
ಪ್ರತಿನಿತ್ಯ 30,000ಕ್ಕೂ ಹೆಚ್ಚು ಮಕ್ಕಳು ಹಾಗೂ ಭಕ್ತಾದಿಗಳಿಗೆ ಇಲ್ಲಿ ಅಡುಗೆ ಮಾಡಿ ಅನ್ನ ವಿತರಿಸಲಾಗುತ್ತದೆ.

LPG ಕೊರತೆಯ ನಡುವೆಯೂ ಅಡುಗೆ ನಿರಂತರ
ಇತ್ತೀಚೆಗೆ ಪಶ್ಚಿಮ ಏಷ್ಯಾದ ರಾಜಕೀಯ ಉದ್ವಿಗ್ನತೆ ಹಾಗೂ ಅಮೆರಿಕಾ – ಇರಾನ್ – ಇಸ್ರೇಲ್ ಸಂಘರ್ಷದ ಹಿನ್ನೆಲೆ ದೇಶಾದ್ಯಂತ LPG ಸಿಲಿಂಡರ್ಗಳ ಕೊರತೆ ಉಂಟಾಗಿದೆ.
ಈ ಕಾರಣದಿಂದಾಗಿ ಮನೆಗಳಲ್ಲಿ ಅಡುಗೆ ಮಾಡಲು ತೊಂದರೆ , ಹೋಟೆಲ್ಗಳಿಗೆ ಗ್ಯಾಸ್ ಪೂರೈಕೆಯಲ್ಲಿ ವಿಳಂಬ ,ಕಮರ್ಷಿಯಲ್ ಸಿಲಿಂಡರ್ ಬೆಲೆ ಏರಿಕೆ ಎಂಬ ಸಮಸ್ಯೆಗಳು ಹೆಚ್ಚಾಗಿವೆ.ಆದರೆ, ಈ ಸಂಕಷ್ಟದ ಸಂದರ್ಭದಲ್ಲೂ ಸಿದ್ದಗಂಗಾ ಮಠದಲ್ಲಿ ಅನ್ನ ದಾಸೋಹ ನಿರಂತರವಾಗಿ ನಡೆಯುತ್ತಿದೆ.

ಸೌದೆ ಒಲೆ ಮತ್ತು ಅಡಿಕೆ ಸಿಪ್ಪೆ – ಇಂಧನಕ್ಕೆ ಪರ್ಯಾಯ
ಸಿದ್ದಗಂಗಾ ಮಠದ ಬೃಹತ್ ಅಡುಗೆಮನೆಯಲ್ಲಿ ಗ್ಯಾಸ್ ಬಳಕೆ ಕಡಿಮೆ ಮಾಡಲಾಗಿದೆ. ಅದರ ಬದಲು ಸೌದೆ (wood fire) ಅಡಿಕೆ ಸಿಪ್ಪೆ (areca husk) ಇವುಗಳನ್ನು ಇಂಧನವಾಗಿ ಬಳಸಲಾಗುತ್ತಿದೆ.
ಸ್ಥಳೀಯವಾಗಿ ಸುಲಭವಾಗಿ ಲಭ್ಯವಾಗುವ ಈ ಸಂಪನ್ಮೂಲಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡಲಾಗುತ್ತಿದೆ.

ಸಿದ್ದಗಂಗಾ ಮಠದ ‘ತ್ರಿವಿಧ ದಾಸೋಹ’ ಪರಂಪರೆ
ಸಿದ್ದಗಂಗಾ ಮಠವು ಹಲವು ದಶಕಗಳಿಂದ ತ್ರಿವಿಧ ದಾಸೋಹ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ.
ಇದರ ಮೂರು ಪ್ರಮುಖ ಅಂಶಗಳು
- ಅನ್ನ ದಾಸೋಹ – ಹಸಿದವರಿಗೆ ಉಚಿತ ಅನ್ನ
- ವಿದ್ಯಾ ದಾಸೋಹ – ವಿದ್ಯಾರ್ಥಿಗಳಿಗೆ ಶಿಕ್ಷಣ
- ಆಶ್ರಯ ದಾಸೋಹ – ವಸತಿ ವ್ಯವಸ್ಥೆ
ಈ ವ್ಯವಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಸೋಲಾರ್ ಪವರ್ ಬಳಕೆ ಕೂಡ
ಸಂಜೆ ಸಮಯದಲ್ಲಿ ಮಠವು ತನ್ನದೇ ಆದ ಸೋಲಾರ್ ಪವರ್ ಪ್ಲಾಂಟ್ ಬಳಕೆ ಮಾಡುತ್ತದೆ.
ಸೋಲಾರ್ ಎನರ್ಜಿ ಮೂಲಕ:
- ಅಡುಗೆ ಕಾರ್ಯಗಳಿಗೆ ನೆರವು
- ವಿದ್ಯುತ್ ಬಳಕೆ ಕಡಿತ
- ಇಂಧನ ಉಳಿತಾಯ
ಇವು ಸಾಧ್ಯವಾಗಿವೆ.
ಜಗತ್ತಿಗೆ ಮಾದರಿಯಾದ ಸಿದ್ದಗಂಗಾ ಮಠ
ಇಡೀ ಜಗತ್ತೇ ಪೆಟ್ರೋಲಿಯಂ ಮತ್ತು ಗ್ಯಾಸ್ ಕೊರತೆಯಿಂದ ಪರದಾಡುತ್ತಿರುವ ಸಂದರ್ಭದಲ್ಲಿ, ಸಿದ್ದಗಂಗಾ ಮಠವು ಪರ್ಯಾಯ ಇಂಧನ ಬಳಸಿ ಅನ್ನ ದಾಸೋಹ ನಡೆಸುತ್ತಿರುವುದು ದೇಶಕ್ಕೇ ಮಾದರಿಯಾಗಿದೆ.
ಇಂಧನ ಉಳಿತಾಯ ಮತ್ತು ಸೇವಾ ಮನೋಭಾವದ ಈ ಮಾದರಿ ಇತರ ಸಂಸ್ಥೆಗಳಿಗೂ ಪ್ರೇರಣೆಯಾಗುತ್ತಿದೆ.




