ಸಿದ್ಧಗಂಗಾ ಮಠಕ್ಕೆ ಗೃಹ ಸಚಿವ G. Parameshwar ಭೇಟಿ.

ತುಮಕೂರಿನ ಸುಪ್ರಸಿದ್ಧ ಸಿದ್ಧಗಂಗಾ ಮಠಕ್ಕೆ ಇಂದು ಬೆಳ್ಳಂಬೆಳಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭೇಟಿ ನೀಡಿದರು. ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಬಳಿಕ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಮಹತ್ವದ ವಿಷಯಗಳ ಬಗ್ಗೆ ಮಾಹಿತಿ
ಇನ್ನು ಈ ಸಂದರ್ಭದಲ್ಲಿ, 50 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ, ಎತ್ತಿನಹೊಳೆ ಯೋಜನೆ, ಮತ್ತು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
READ THIS : Gold ಖರೀದಿಸುವವರಿಗೆ ಸಿಹಿ ಸುದ್ದಿ – 3 ದಿನಗಳಲ್ಲಿ ಬರೋಬ್ಬರಿ 3,650 ರುಪಾಯಿ ಕುಸಿತ

ನಾವು ರಾಜಕೀಯ ಪ್ರಸ್ತಾಪ ಮಾಡಿದರೂ ಅವರು ಮೌನವಾಗಿ ನಕ್ಕುಬಿಡುತ್ತಾರೆ
ಸಿದ್ಧಗಂಗಾ ಮಠದ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ G. Parameshwar, ‘ನಮ್ಮ ಕುಟುಂಬ ತಂದೆಯ ಕಾಲದಿಂದಲೂ ಶ್ರೀಮಠಕ್ಕೆ ನಡೆದುಕೊಳ್ಳುತ್ತಿದೆ. ಮಠ ನಮಗೆ ಮನಶಾಂತಿ ಮತ್ತು ಸ್ಪೂರ್ತಿಯ ಸೆಲೆ. ಶ್ರೀಗಳು ಎಂದಿಗೂ ರಾಜಕೀಯ ಮಾರ್ಗದರ್ಶನ ನೀಡುವುದಿಲ್ಲ. ನಾವು ರಾಜಕೀಯ ಪ್ರಸ್ತಾಪ ಮಾಡಿದರೂ ಅವರು ಮೌನವಾಗಿ ನಕ್ಕುಬಿಡುತ್ತಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಮಠದ 1200 ವಿದ್ಯಾರ್ಥಿಗಳಿಗೆ ಶುಭ ಕೋರಿದ್ದೇನೆ’ ಎಂದರು.

MUST WATCH : ಅಯ್ಯಯ್ಯೋ ಇಲ್ಲಿ ಚರಂಡಿ ಕಳ್ಳತನ ಆಗಿದ್ಯಂತೆ?! ಚರಂಡಿಯನ್ನು ಬಿಡದೇ ಕದ್ದಿರೋದು ಯಾರು..?!




