ಮದುವೆಯಾಗಿ 3 ತಿಂಗಳೊಳಗೆ ಪತಿಗೆ ಮುಹೂರ್ತ ಇಟ್ಟ ಪತ್ನಿ: ಪ್ರಿಯಕರನ ಜೊತೆ ಸೇರಿ Murder.

ತುಮಕೂರು ಜಿಲ್ಲೆಯ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಗುಜರಿ ವ್ಯಾಪಾರಿ ಮನ್ಸೂರ್ ಪಾಷ ಅವರ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮದುವೆಯಾದ ಕೇವಲ ಮೂರು ತಿಂಗಳೊಳಗೆ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಿಯಕರನ ಜೊತೆ ಸೇರಿ Murder
ಇನ್ನು ಗುಜರಿ ವ್ಯಾಪಾರಿಯಾಗಿದ್ದ ಮನ್ಸೂರ್ ಪಾಷ ಕೊಲೆಯಾದ ವ್ಯಕ್ತಿ. ಬಂಧಿತರಲ್ಲಿ ಮೃತನ ಪತ್ನಿ ಫರ್ಜಾನಾ (31), ಆಕೆಯ ಪ್ರಿಯಕರ ಧನರಾಜ್ (24), ಹಾಗೂ ಅವರ ಸಹಚರರಾದ ವೆಂಕಟೇಶ್ (24) ಮತ್ತು ದರ್ಶನ್ (24) ಸೇರಿದ್ದಾರೆ. ಆರೋಪಿಗಳು ಚಿಕ್ಕಮಗಳೂರು ಮೂಲದವರಾಗಿದ್ದು, ಕೊಲೆ ಮಾಡಲು ಬಳಸಿದ ಬೊಲೆರೋ ಪಿಕಪ್ ವಾಹನ, ಪಲ್ಸರ್ ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನೆಲೆ
ಮನ್ಸೂರ್ ಪಾಷಗೆ ಇದೇ ವರ್ಷ ಜನವರಿಯಲ್ಲಿ ಕುಟುಂಬಸ್ಥರ ನಿಶ್ಚಯದಂತೆ ಫರ್ಜಾನಾ ಜೊತೆ ವಿವಾಹವಾಗಿದ್ರು. ಮದುವೆಯ ನಂತರ ಇಬ್ಬರೂ ತಿಪಟೂರಿನಲ್ಲಿ ವಾಸವಿದ್ರು. ಮಾರ್ಚ್ 4ರಂದು ಗುಜರಿ ಸಾಮಗ್ರಿ ತರಲು ಹೋಗಿದ್ದ ಮನ್ಸೂರ್ ಪಾಷ ಬಳಿಕ ಮನೆಗೆ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ನಂತರ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ಸಮೀಪದ ತೋಟವೊಂದರಲ್ಲಿ ಮನ್ಸೂರ್ ಪಾಷನ ಶವ ಪತ್ತೆಯಾಯಿತು. ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ತನಿಖೆಯಲ್ಲಿ ಬಯಲಾಯ್ತು ಸತ್ಯ
ಪ್ರಕರಣವನ್ನು ಪೊಲೀಸರು ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ನಡೆಸಿದರು. ಆರಂಭದಲ್ಲಿ ಚಿಕ್ಕಮಗಳೂರಿನ ಮೂವರು ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿತು.
ಪ್ರೇಮ ಸಂಬಂಧ
ವಿಚಾರಣೆ ವೇಳೆ ಬಂಧಿತರಲ್ಲಿ ಒಬ್ಬನಾದ ಧನರಾಜ್ ಜೊತೆ ಮನ್ಸೂರ್ ಪಾಷನ ಪತ್ನಿ ಫರ್ಜಾನಾ ಕಳೆದ ಏಳು ತಿಂಗಳಿನಿಂದ ಪ್ರೇಮ ಸಂಬಂಧ ಹೊಂದಿದ್ದಳು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಫರ್ಜಾನಾ ತನ್ನ ಅಕ್ಕನನ್ನು ಭೇಟಿಯಾಗಲು ಚಿಕ್ಕಮಗಳೂರಿಗೆ ತೆರಳುತ್ತಿದ್ದಾಗ ವೆಂಕಟೇಶ್ ಎಂಬಾತನ ಮೂಲಕ ಧನರಾಜ್ ಪರಿಚಯವಾಗಿದ್ದ. ನಂತರ ಈ ಪರಿಚಯ ಪ್ರೀತಿಗೆ ತಿರುಗಿತ್ತು.
ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಚಿಕ್ಕಮಗಳೂರಿನ ಹಲವೆಡೆ ಒಟ್ಟಿಗೆ ಓಡಾಡುತ್ತಿದ್ದರು. ಒಮ್ಮೆ ತಿಪಟೂರು ರೈಲು ನಿಲ್ದಾಣದ ಬಳಿ ಇಬ್ಬರೂ ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. ಈ ಘಟನೆಯ ನಂತರ ಕುಟುಂಬಸ್ಥರು ತುರ್ತಾಗಿ ಫರ್ಜಾನಾಗೆ ಮನ್ಸೂರ್ ಪಾಷ ಜೊತೆ ವಿವಾಹ ಮಾಡಿಸಿದ್ದರು.
READ THIS : ಟಿಪ್ಪರ್ ಲಾರಿ ಡಿಕ್ಕಿಗೆ MBBS ವಿದ್ಯಾರ್ಥಿನಿ ಸಾವು..!!

ಕೊಲೆ ಸಂಚು
ಮದುವೆಯಾದ ನಂತರವೂ ಫರ್ಜಾನಾ ಮತ್ತು ಧನರಾಜ್ ನಡುವಿನ ಸಂಬಂಧ ಮುಂದುವರಿದಿತ್ತು. ಹೊಸ ಸಿಮ್ ಕಾರ್ಡ್ ಖರೀದಿಸಿ ಫರ್ಜಾನಾ ಮತ್ತೆ ಧನರಾಜ್ ಜೊತೆ ಸಂಪರ್ಕದಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಬ್ಬರಿಗೆ ಅಡ್ಡಿಯಾಗಿದ್ದ ಮನ್ಸೂರ್ ಪಾಷನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಈ ಯೋಜನೆಗೆ ದರ್ಶನ್ ಮತ್ತು ವೆಂಕಟೇಶ್ ಸಹ ಕೈಜೋಡಿಸಿದ್ದರು. ಮಾರ್ಚ್ 4ರಂದು ದರ್ಶನ್ ಮುಖಾಂತರ “ಗುಜ ರಿಸಾಮಗ್ರಿ ಇದೆ” ಎಂದು ಹೇಳಿ ಮನ್ಸೂರ್ ಪಾಷಗೆ ಕರೆ ಮಾಡಲಾಗಿತ್ತು. ಆತನನ್ನು ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ಸಮೀಪಕ್ಕೆ ಕರೆಸಿಕೊಂಡು ಹೊಂಚು ಹಾಕಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ಆರೋಪಿಗಳು ಎಸ್ಕೇಪ್
ಇನ್ನು ಕೊಲೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ದರ್ಶನ್ ಮಾಡಿದ ಕರೆ ಹಾಗೂ ಮೊಬೈಲ್ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಪ್ರಕರಣವನ್ನು ತಿಪಟೂರು ಗ್ರಾಮಾಂತರ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

MUST WATCH : ತುಮಕೂರಿನಲ್ಲಿ ಗ್ಯಾಸ್ ಸಿಲಿಂಡರ್ ಅಭಾವ! ಹೋಟೆಲ್ ಗೆ ಬಿತ್ತು ಬೀಗ, ಜನರಿಗೆ ಟೆನ್ಷನ್




