Tumkur ಗೂ ತಟ್ಟಿದ ಗ್ಯಾಸ್ ಸಿಲಿಂಡರ್ ಅಭಾವ -ಸಿಲಿಂಡರ್ ಸಿಗದೇ ತುಮಕೂರಿನ ಪ್ರತಿಷ್ಠಿತ ಹೋಟೆಲ್ ಬಂದ್!

ಇರಾನ್ ಇಸ್ರೇಲ್ ಹಾಗೂ ಅಮೇರಿಕಾ ನಡುವಿನ ಯುದ್ದದ ಎಫೆಕ್ಟ್ ಇದೀಗ ತುಮಕೂರಿಗೂ ತಟ್ಟಿದೆ. ಇಂಧನ ಸಾಗಾಣೆಯ ಪ್ರಮುಖ ಮಾರ್ಗವಾಗಿರುವ ಹೋರ್ಮುಸ್ ಜಲಸಂಧಿ ಬಂದ್ ಆಗಿರುವ ಹಿನ್ನಲೆ ದೇಶದ ಹಲವು ಭಾಗಗಳಲ್ಲಿ ಇಂಧನ ಮತ್ತು ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಇದರ ಪರಿಣಾಮವಾಗಿ ತುಮಕೂರಿನಲ್ಲಿಯೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಅಭಾವ ಕಾಣಿಸಿಕೊಂಡಿದ್ದು, ಹೋಟೆಲ್ ಉದ್ಯಮಗಳು ಸಂಕಷ್ಠಕ್ಕೆ ಸಿಲುಕಿದೆ.

ಸಿಲಿಂಡರ್ ಸಿಗದೇ ತುಮಕೂರಿನ ಪ್ರತಿಷ್ಠಿತ ಹೋಟೆಲ್ ಬಂದ್.!
ಇನ್ನು ಗ್ಯಾಸ್ ಸಿಲಿಂಡರ್ ಬಿಸಿ ತುಮಕೂರಿಗೂ ತಟ್ಟಿದ್ದು, Tumkur ನಗರದ ಹೊರಪೇಟೆಯಲ್ಲಿರುವ ಪ್ರಸಿದ್ದವಾದ ಪ್ರಸಾದ್ ಹೋಟೆಲ್ ಕೂಡ ಗ್ಯಾಸ್ ಸಿಲಿಂಡರ್ ಸಿಗದ ಕಾರಣ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ದಿನನಿತ್ಯ ನೂರಾರು ಗ್ರಾಹಕರು ಊಟ ತಿಂಡಿಗಾಗಿ ಬರುತ್ತಿದ್ದ ಈ ಪ್ರತಿಷ್ಠಿತ ಹೋಟೆಲ್ ಪ್ರಸಾದ್ ಕೂಡ, ಸಿಲಿಂಡರ್ ದೊರೆಯದ ಕಾರಣ ಬೀಗ ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಹೋಟೆಲ್ ಬಂದ್ ಆದ ಕಾರಣ ಸಿಬ್ಬಂದಿಗೂ ರಜೆ ನೀಡಿದ್ದು, ಗ್ಯಾಸ್ ಪೂರೈಕೆ ಸರಿ ಆದ ಬಳಿಕ ಮಾತ್ರ ಮತ್ತೇ ಹೋಟೆಲ್ ಆರಂಭಿಸುವ ನಿರ್ಧಾರ ಕೈಗೊಂಡಿದ್ದಾರೆ.
READ THIS : 2026ರ IPL ವೇಳಾಪಟ್ಟಿ ಪ್ರಕಟ – ಉದ್ಘಾಟನಾ ಪಂದ್ಯದಲ್ಲಿ ಈ ತಂಡದೊಂದಿಗೆ RCB ಸೆಣಸಾಟ!

ತುಮಕೂರಿಗೂ ತಟ್ಟಿದ ಗ್ಯಾಸ್ ಸಿಲಿಂಡರ್ ಅಭಾವ
ಇನ್ನು ಜಿಲ್ಲೆಯ ಹಲವು ಹೋಟೆಲ್ ಮಾಲೀಕರು ಕೂಡ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆಯಿಂದ ತೀವ್ರ ಸಂಕಷ್ಠಕ್ಕೆ ಸಿಲುಕಿದ್ದು, ಕೆಲ ಹೋಟೆಲ್ಗಳಲ್ಲಿ ಬೆಳಗಿನ ತಿಂಡಿ ಮಾತ್ರ ನೀಡ್ತಿದ್ದಾರೆ.
ಇನ್ನು ಕೆಲ ಹೋಟೆಲ್ಗಳು ಬಂದ್ ಮಾಡುವ ಸ್ಥಿತಿಗೆ ತಲುಪಿದ್ದು, ಇಂಧನ ಪೂರೈಕೆಯಲ್ಲಿ ಉಂಟಾದ ಅಡಚಣೆ ಸಣ್ಣ ವ್ಯಾಪಾರಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಎಂದು ಹೋಟೆಲ್ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಸಮಸ್ಯೆ ಮುಂದುವರಿದ್ರೆ ಹೋಟೆಲ್ ಉದ್ಯಮ ಮಾತ್ರವಲ್ಲದೇ ದಿನನಿತ್ಯ ಊಟ ತಿಂಡಿಗಾಗಿ ಹೋಟೆಲ್ ಅವಲಂಬಿಸುವ ಜನರಿಗೂ ತೊಂದ್ರೆ ಉಂಟಾಗುವ ಸಾಧ್ಯತೆ ಇದೆ.

MUST WATCH : ಇದು PRAJASHAKTHI TV IMPACT ರಾಜಕಾಲುವೆಯಲ್ಲಿನ ಕಸದ ಸಮಸ್ಯೆಗೆ ಮುಕ್ತಿ..!




