IPL ಹಬ್ಬಕ್ಕೆ ದಿನಾಂಕ ಫಿಕ್ಸ್ – ಚಿನ್ನಸ್ವಾಮಿ ಅಂಗಳದಲ್ಲಿ ಆರ್ಸಿಬಿ-ಹೈದರಾಬಾದ್ ಮಧ್ಯೆ ಮೊದಲ ಪಂದ್ಯ.

ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ 19ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಬುಧವಾರ ಬಿಸಿಸಿಐ ಟೂರ್ನಿಯ ಮೊದಲ ಹಂತದ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 28 ರಂದು ಟೂರ್ನಿಗೆ ಭರ್ಜರಿ ಚಾಲನೆ ದೊರೆಯಲಿದೆ.
ಆರ್ಸಿಬಿ – ಹೈದರಾಬಾದ್ ಮಧ್ಯೆ ಮೊದಲ ಪಂದ್ಯ
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ನಡೆಯಲಿದೆ.

ಉಳಿದ ಪಂದ್ಯಗಳ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆ
ಬಿಸಿಸಿಐ ಸದ್ಯ ಮೊದಲ ಹಂತದಲ್ಲಿ ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ ನಡೆಯಲಿರುವ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಎರಡನೇ ಹಂತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ವಾರಾಂತ್ಯಗಳಲ್ಲಿ ಅಭಿಮಾನಿಗಳಿಗೆ ‘ಡಬಲ್ ಹೆಡರ್’ ಪಂದ್ಯಗಳ ಮನರಂಜನೆ ಸಿಗಲಿದೆ.
ಇಲ್ಲಿದೆ ನೋಡಿ ಬೆಂಗಳೂರು ತಂಡದ ವೇಳಾಪಟ್ಟಿ
ಹಾಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಕಿಂಗ್ ಕೊಹ್ಲಿ ಪಡೆ ಮೊದಲ ಹಂತದಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಎರಡು ಪಂದ್ಯಗಳು ಬೆಂಗಳೂರಿನ ತವರು ಮೈದಾನದಲ್ಲಿ ನಡೆಯಲಿದ್ದು, ಇನ್ನು ಎರಡು ಪಂದ್ಯಗಳು ಎದುರಾಳಿಗಳ ಅಂಗಳದಲ್ಲಿ ನಡೆಯಲಿವೆ.

READ THIS : ಮಹಡಿ ಮೇಲಿಂದ ಹಾರಿ ವಿದ್ಯಾರ್ಥಿನಿ Suicide – ಆಗಿದ್ದೇನು?
RCB vs CSK
ಏಪ್ರಿಲ್ 5ರಂದು ಬೆಂಗಳೂರಿನಲ್ಲೇ ನಡೆಯಲಿರುವ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ‘ದಕ್ಷಿಣ ಭಾರತದ ದರ್ಬಿ’ ಪಂದ್ಯವು ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ಕುತೂಹಲ ಹುಟ್ಟಿಸಿದೆ.
IPL ಮೊದಲ ಹಂತದ ಕಂಪ್ಲೀಟ್ ವೇಳಾಪಟ್ಟಿ ಇಲ್ಲಿದೆ
ಮಾರ್ಚ್ 28: ಆರ್ಸಿಬಿ vs ಎಸ್ಆರ್ಹೆಚ್, ಬೆಂಗಳೂರು (ರಾತ್ರಿ 7.30)
ಮಾರ್ಚ್ 29: ಎಂಐ vs ಕೆಕೆಆರ್, ಮುಂಬೈ (ರಾತ್ರಿ 7.30)
ಮಾರ್ಚ್ 30: ಆರ್ಆರ್ vs ಸಿಎಸ್ಕೆ, ಗುವಾಹಟಿ (ರಾತ್ರಿ 7.30)
ಮಾರ್ಚ್ 31: ಪಿಬಿಕೆಎಸ್ vs ಜಿಟಿ, ಮುಲ್ಲನ್ಪುರ (ರಾತ್ರಿ 7.30)
ಏಪ್ರಿಲ್ 1: ಎಲ್ಎಸ್ಜಿ vs ಡಿಸಿ, ಲಕ್ನೋ (ರಾತ್ರಿ 7.30)
ಏಪ್ರಿಲ್ 2: ಕೆಕೆಆರ್ vs ಎಸ್ಆರ್ಹೆಚ್, ಕೋಲ್ಕತ್ತಾ (ರಾತ್ರಿ 7.30)
ಏಪ್ರಿಲ್ 3: ಸಿಎಸ್ಕೆ vs ಪಿಬಿಕೆಎಸ್, ಚೆನ್ನೈ (ರಾತ್ರಿ 7.30)
ಏಪ್ರಿಲ್ 4: ಡಿಸಿ vs ಎಂಐ, ದೆಹಲಿ (ಮಧ್ಯಾಹ್ನ 3.30)
ಏಪ್ರಿಲ್ 4: ಜಿಟಿ vs ಆರ್ಆರ್, ಅಹಮದಾಬಾದ್ (ರಾತ್ರಿ 7.30)
ಏಪ್ರಿಲ್ 5: ಎಸ್ಆರ್ಎಚ್ vs ಎಲ್ಎಸ್ಜಿ, ಹೈದರಾಬಾದ್ (ಮಧ್ಯಾಹ್ನ 3.30)
ಏಪ್ರಿಲ್ 5: ಆರ್ಸಿಬಿ vs ಸಿಎಸ್ಕೆ, ಬೆಂಗಳೂರು (ರಾತ್ರಿ 7.30)
ಏಪ್ರಿಲ್ 6: ಕೆಕೆಆರ್ vs ಪಿಬಿಕೆಎಸ್, ಕೋಲ್ಕತ್ತಾ (ರಾತ್ರಿ 7.30)
ಏಪ್ರಿಲ್ 7: ಆರ್ಆರ್ vs ಎಂಐ, ಗುವಾಹಟಿ (ರಾತ್ರಿ 7.30)
ಏಪ್ರಿಲ್ 8: ಡಿಸಿ vs ಜಿಟಿ, ದೆಹಲಿ (ರಾತ್ರಿ 7.30)
ಏಪ್ರಿಲ್ 9: ಕೆಕೆಆರ್ vs ಎಲ್ಎಸ್ಜಿ, ಕೋಲ್ಕತ್ತಾ (ರಾತ್ರಿ 7.30)
ಏಪ್ರಿಲ್ 10: ಆರ್ಆರ್ vs ಆರ್ಸಿಬಿ, ಗುವಾಹಟಿ (ರಾತ್ರಿ 7.30)
ಏಪ್ರಿಲ್ 11: ಪಿಬಿಕೆಎಸ್ vs ಎಸ್ಆರ್ಎಚ್ , ಮುಲ್ಲನ್ಪುರ (ಮಧ್ಯಾಹ್ನ 3.30)
ಏಪ್ರಿಲ್ 11: ಸಿಎಸ್ಕೆ vs ಡಿಸಿ, ಚೆನ್ನೈ (ರಾತ್ರಿ 7.30)
ಏಪ್ರಿಲ್ 12: ಎಲ್ಎಸ್ಜಿ vs ಜಿಟಿ, ಲಕ್ನೋ (ಮಧ್ಯಾಹ್ನ 3.30)
ಏಪ್ರಿಲ್ 12: ಎಂಐ vs ಆರ್ಸಿಬಿ, ಮುಂಬೈ (ರಾತ್ರಿ 7.30)

ಮಾರ್ಚ್28 ರಿಂದ ಏಪ್ರಿಲ್12ರವರೆಗೆ ಪಂದ್ಯಗಳು
19ನೇ ಆವೃತ್ತಿಯ ಈ IPL ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದ್ದು, ಮೊದಲ ಹಂತದಲ್ಲೇ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ಸಿಬಿ ನಡುವೆ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಮಾರ್ಚ್28 ರಿಂದ ಏಪ್ರಿಲ್12 ರವರೆಗೆ ಒಟ್ಟು 20 ಪಂದ್ಯಗಳು ನಡೆಯಲಿವೆ.
ಕಳೆದ ಸೀಸನ್ನಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದ ಆರ್ಸಿಬಿ ಈ ಬಾರಿ ಮತ್ತೆ ಗೆಲುವಿನ ಆಸೆಯಲ್ಲಿದೆ. ಪಾಟಿದಾರ್ ನೇತೃತ್ವದಲ್ಲಿ ತಂಡವು ಬಲಿಷ್ಠವಾಗಿದೆ. ಅಭಿಮಾನಿಗಳು ಮೊದಲ ಹಂತದ ಪಂದ್ಯಗಳಿಗೆ ಕಾತುರರಾಗಿದ್ದಾರೆ ಮತ್ತು ಟಿಕೆಟ್ಗಳಿಗಾಗಿ ಕಾಯುತ್ತಿದ್ದಾರೆ.
MUST WATCH : ತುಮಕೂರಿನಲ್ಲಿ ಯುವಕನಿಗೆ ಚಾಕು ಇರಿ* ಕೇಸ್ – SP ಅಶೋಕ್ ಶಾಕಿಂಗ್ ಸ್ಟೇಟ್ ಮೆಂಟ್





