ಪ್ರೀತಿಸುವಂತೆ ಸಹಪಾಠಿ ಒತ್ತಾಯಿಸಿದ್ದಕ್ಕೆ ಮಹಡಿ ಮೇಲಿಂದ ಹಾರಿ ವಿದ್ಯಾರ್ಥಿನಿ Suicide.

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ದಾರುಣ ಘಟನೆಯೊಂದು ಸಂಭವಿಸಿದ್ದು, ಸಹಪಾಠಿಯ ಕಿರುಕುಳಕ್ಕೆ ಬೇಸತ್ತು 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದ ಮೇಲಿಂದ ಜಿಗಿದು Suicide ಮಾಡಿಕೊಂಡಿದ್ದಾಳೆ.
ವಿದ್ಯಾರ್ಥಿನಿ Suicide
ಮದಿಯಾ ನಶೀರ್ ಪಾಷಾ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ. ಭೆಮಳಖೇಡ ಗ್ರಾಮದ ಶಾಲೆಯೊಂದರಲ್ಲಿ ಆಕೆ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
READ THIS : ಇರಾನ್ – ಇಸ್ರೇಲ್ WAR EFFECT : ದೇಶಾದ್ಯಂತ LPG ಗ್ಯಾಸ್ ಅಭಾವ

ಪ್ರೀತಿಸುವಂತೆ ಸಹಪಾಠಿ ಒತ್ತಾಯ
ಸಹಪಾಠಿಯಿಂದ ಲವ್ ಮಾಡುವಂತೆ ಚುಡಾಯಿಸಿದಕ್ಕೆ ಹಾಗೂ ಪ್ರೀತಿಸುವಂತೆ ಒತ್ತಡ ಹಾಕಿದ್ದಕ್ಕೆ ಶಾಲಾ ಕಟ್ಟಡದ ಮೇಲಿಂದ ಜಿಗಿದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಹಪಾಠಿ ಬಾಲಕಿಯನ್ನು ಚುಡಾಯಿಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈವರೆಗೂ ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪ್ರಕರಣ ದಾಖಲು
ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಭೆಮಳಖೇಡ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

MUST WATCH : ಸದನದಲ್ಲಿ CM ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಶಾಸಕ SHIVALINGEGOWDA




