ಹೊಟ್ಟೆ ನೋವು ತಾಳಲಾರದೇ ಮಹಿಳೆ ಸೂಸೈ Suicide.? ಒಂದೇ ಕುಣಿಕೆಯಲ್ಲಿ ನೇತಾಡಿದ ತಾಯಿ ಮಗಳು.!

ಹೊಟ್ಟೆ ನೋವು ತಾಳಲಾಗದೇ ಮಹಿಳೆಯೊಬ್ಬಳು ತನ್ನ ಎರಡು ವರ್ಷದ ಮಗುವಿನೊಂದಿಗೆ ನೇಣು ಬಿಗಿದುಕೊಂಡು Suicide ಮಾಡಿಕೊಂಡಿರುವ ದಾರುಣ ಘಟನೆ ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಹಾಗಲವಾಡಿ ಗ್ರಾಮದ ನಿವಾಸಿ ಯತೀಶ್ ಎಂಬುವರ ಪತ್ನಿ ಗಂಗಾಮಣಿ ಹಾಗೂ ಎರಡು ವರ್ಷದ ಮಗಳು ಪ್ರೇಕ್ಷ ಎಂದು ಗುರುತಿಸಲಾಗಿದೆ.
ಒಂದೇ ಕುಣಿಕೆಯಲ್ಲಿ ನೇತಾಡಿದ ತಾಯಿ ಮಗಳು.!
ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮದ ಯತೀಶ್ ಜೊತೆ ಗಂಗಾಮಣಿ ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ರು. ಈ ದಂಪತಿಗೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ಆದರೆ ಮನೆಯಲ್ಲಿ ಯಾರು ಇಲ್ಲದ ವೇಳೆ ಗಂಗಾಮಣಿ ತನ್ನ ಎರಡು ವರ್ಷದ ಮಗಳೊಂದಿಗೆ ಮನೆಯ ಮೇಲ್ಚಾವಣಿಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

READ THIS : ಜೈಲಿನ ಕಠಿಣ ನಿಯಮಗಳಿಂದ ಫುಲ್ ಕಂಗಾಲಾಗ್ತಿರೋ D GANG!
ನಡೆದಿದ್ದೇನು?
ಇನ್ನು ಮೃತ ಮಹಿಳೆಗೆ ಕಳೆದ ಕೆಲ ವರ್ಷಗಳಿಂದ ಋತುಚಕ್ರದ ವೇಳೆ ತೀವ್ರ ರಕ್ತಸ್ರಾವದಿಂದ ವೀಪರೀತ ಹೊಟ್ಟೆನೋವು ಆಗ್ತಿತಂತೆ. ಈ ಸಮಸ್ಯೆ ಬಗ್ಗೆ ಹಲವು ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆದ್ರೂ ಗುಣಮುಖವಾಗದೇ ಇದ್ದಿದ್ರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆ ರವಾನೆ ಮಾಡಲಾಗಿದ್ದು, ಇಬ್ಬರ ಸಾವಿನ ಸುದ್ದಿ ಕೇಳಿ ಗ್ರಾಮಸ್ಥರಲ್ಲಿ ಬರಸಿಡಿಲು ಬಡಿದಂತಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿಷಯ ತಿಳಿದು ಶಿರಾ ಉಪವಿಭಾಗದ ಡಿವೈಎಸ್ಪಿ ಶೇಖರ್ ಹಾಗೂ ಸಿಬ್ಬಂದಿ ವರ್ಗ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.
ಸದ್ಯ ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಸ್ಥಳೀಯರಲ್ಲಿ ಅನುಮಾನ ಮೂಡಿಸಿದ್ದು, ತಾಯಿ ಮತ್ತು ಮಗುವಿನ ಆತ್ಮಹತ್ಯೆಯ ಬಗೆಗಿನ ಸತ್ಯಸತ್ಯತೆ ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.

MUST WATCH : ಸದನದಲ್ಲೂ ಪ್ರತಿಧ್ವನಿಸಿದ GAS ಟ್ರಬಲ್..! CM SIDDARAMAIAH ಏನಂದ್ರು ಗೊತ್ತಾ ?




