ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಮದುವೆಯ ಹೊಸ Photos ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಮದುವೆಯ ಸಂಭ್ರಮ ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಮುಂದುವರಿದಿದೆ. ಇತ್ತೀಚೆಗೆ ಈ ಜೋಡಿ ತಮ್ಮ ಮದುವೆಗೆ ಸಂಬಂಧಿಸಿದ ಹೊಸ Photos ಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ವಿವಾಹಪೂರ್ವ ಶಾಸ್ತ್ರಗಳ ಫೋಟೋಗಳನ್ನು ಈಗ ಹಂಚಿಕೊಂಡಿದ್ದಾರೆ. ಫೆಬ್ರವರಿ 25ರಂದು ನಡೆದ ವಿವಿಧ ಶಾಸ್ತ್ರಗಳ ವೇಳೆ ತೆಗೆದ ಚಿತ್ರಗಳನ್ನು ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
ಈ ಫೋಟೋಗಳು ಕಲರ್ಫುಲ್ ಆಗಿದ್ದು, ಜೋಡಿಯ ಸಂತೋಷದ ಕ್ಷಣಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಉದಯಪುರದಲ್ಲಿ ಅದ್ದೂರಿ ಮದುವೆ
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26ರಂದು ಉದಯಪುರದಲ್ಲಿ ಭರ್ಜರಿಯಾಗಿ ನೆರವೇರಿತು. ಈ ಮದುವೆಗೆ ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು.
ಇದಕ್ಕೂ ಮೊದಲು ರಶ್ಮಿಕಾ ಕೆಲವು ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಇದೀಗ ಹೊಸ ಚಿತ್ರಗಳು ಮತ್ತೆ ವೈರಲ್ ಆಗಿವೆ.
MUST READ : Dina Bhavishya : ದಿನ ಭವಿಷ್ಯ 11 ಮಾರ್ಚ್ 2026..

ಹೊಸ ಫೋಟೋಗಳಲ್ಲಿ ರಶ್ಮಿಕಾ ಮತ್ತು ವಿಜಯ್ ತಮ್ಮ ಸ್ನೇಹಿತರ ಜೊತೆ ಒಂದೇ ರೀತಿಯಲ್ಲಿ ಪೋಸ್ ನೀಡಿರುವುದು ಗಮನ ಸೆಳೆಯುತ್ತಿದೆ. ಈ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ ಮತ್ತು ಕಾಮೆಂಟ್ ಗಳನ್ನು ಪಡೆಯುತ್ತಿವೆ.

ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಬಗ್ಗೆ ಹಲವು ಕನಸುಗಳನ್ನು ಕಂಡಿದ್ದರು. ಈಗ ಆ ಕನಸುಗಳು ನನಸಾಗಿವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಈ ಜೋಡಿಯ ಮದುವೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

‘ಯುವರಾಣಿ’ಯಂತೆ ಕಂಗೊಳಿಸಿದ ರಶ್ಮಿಕಾ
ಫೆಬ್ರವರಿ 26 ರ ದಿನ ರಶ್ಮಿಕಾ ಜೀವನದಲ್ಲಿ ವಿಶೇಷ ದಿನವಾಗಿಯೇ ಉಳಿಯಲಿದೆ. ಹೊಸ ಫೋಟೋಗಳಲ್ಲಿ ರಶ್ಮಿಕಾ ಯುವರಾಣಿ ರೀತಿಯಲ್ಲಿ ಕಂಗೊಳಿಸುತ್ತಿದ್ದಾರೆ ಎಂದು ಅನೇಕ ಅಭಿಮಾನಿಗಳು ಪ್ರಶಂಸಿಸಿದ್ದಾರೆ.
ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ.
MUST WATCH : ತುಮಕೂರಿನಲ್ಲಿ ಹಾಡಹಗಲೇ ಜನರ ಮುಂದೆಯೇ ಚಾಕು ಇರಿತ- ಹಳೆ ದ್ವೇಷದಿಂದಲೇ ಕೊ* ಶಂಕೆ? | TUMAKURU NEWS |




