Tumakuru : ಹಾಡಹಗಲೇ ರಕ್ತದೋಕುಳಿ! – ನೋಡ್ತಾ ನೋಡ್ತಾ ಇದ್ದಂತೆ ಚಾಕು ಇರಿದು ಕೊಲೆ

ತುಮಕೂರಿನಲ್ಲಿ ಹಾಡಹಗಲೇ ನೆತ್ತರು ಹರಿದಿದ್ದು, ರಕ್ತದೋಕುಳಿಗೆ ಜನರು ಬೆಚ್ಚಿಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೆ ಗಲಾಟೆ ಆಗ್ತಾ ಇದ್ದು, ಆ ಗಲಾಟೆಗಳು ಕೊಲೆಗಳಂತಹ ಕೃತ್ಯಗಳಿಗೆ ತಿರುಗಿಕೊಳ್ಳುತ್ತಿವೆ. ಚಾಕು- ಚೂರಿ- ಲಾಂಗು ಮಚ್ಚುಗಳಿಂದ ಅಟ್ಯಾಕ್ ಮಾಡಿ ರಕ್ತದೋಕುಳಿ ನಡೆಸುತ್ತಿದ್ದು, ಕಾನೂನು ಸುವ್ಯವಸ್ಥೆ ಮೇಲೆ ಜನರಿಗೆ ಭಯವೇ ಇಲ್ಲವಾ ಎಂಬ ಪ್ರಶ್ನೆ ಎದ್ದಿದೆ. ಇದೀಗ Tumakuru ಸಿಟಿ ಸೆಂಟರ್ನಲ್ಲೇ ಸಂಜೆ ಸುಮಾರಿಗೆ ಯುವಕನಿಗೆ ಚಾಕು ಇರಿದು ಕೊಲೆ ಮಾಡಿರುವ ಭಯಾನಕ ಘಟನೆ ನಡೆದುಹೋಗಿದೆ.

ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ
ತುಮಕೂರಿನ ಸದಾಶಿವ ನಗರದ ಇಸ್ರಾ ಶಾದಿ ಮಹಲ್ ಹಾಗೂ ಮೆಳೆಕೋಟೆ ರಸ್ತೆಯಲ್ಲಿ ಸಾರ್ವಜನಿಕರ ಎದುರಿನಲ್ಲೇ ಯುವಕನೋರ್ವನಿಗೆ ಚಾಕು ಇರಿತವಾಗಿದ್ದು, ತೀವ್ರ ರಕ್ತಸ್ರಾವದಿಂದ ಯುವಕ ಸಾವನ್ನಪ್ಪಿದ್ದಾನೆ.
ವೀರ ಸಾಗರ ನಿವಾಸಿಯಾಗಿರುವ ಮಹಮದ್ ಮುಬಾರಕ್ ಪಾಷ ಎಂಬುವವನನ್ನು ಮರಳೂರು ದಿಣ್ಣೆ ನಿವಾಸಿಯಾಗಿರುವ ಮುಬಾರಕ್ ಎಂಬಾತನ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ಶುರುವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಮಹಮದ್ ಮುಬಾರಕ್ ಪಾಷ ಎಂಬಾತನಿಗೆ ಮುಬಾರಕ್ ಚಾಕುವಿನಿಂದ ಕುತ್ತಿಗೆ, ತಲೆ ಹಾಗೂ ಎದೆಯ ಭಾಗಕ್ಕೆ ಭೀಕರವಾಗಿ ಇರಿದಿದ್ದಾನೆ. ಚಾಕು ಇರಿತದಿಂದ ಗಾಯಗೊಂಡಿದ್ದ ಮಹಮದ್ ಮುಬಾರಕ್ ಪಾಷ ಸಾವನ್ನಪ್ಪಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.
READ THIS : ಮಾರ್ಚ್ 13ಕ್ಕೆ IPL ವೇಳಾಪಟ್ಟಿ ಪ್ರಕಟ – RCB ತಂಡದ ಮೊದಲ ಎದುರಾಳಿ ಯಾರು?

ಚಾಕು ಇರಿದು ಬರ್ಬರವಾಗಿ ಕೊಂದು ಎಸ್ಕೇಪ್
ಇನ್ನು ಮಹಮದ್ ಮುಬಾರಕ್ ಪಾಷ ಕಾರ್ಪೆಂಟರ್ ಕೆಲಸ ಮಾಡ್ತಾ ಇದ್ದು, ಕೆಲಸಕ್ಕೆ ಹೋಗಿರಲಿಲ್ವಂತೆ. ನೆನ್ನೆ ಮಧ್ಯಾಹ್ನ ಯಾರೋ ಕಾಲ್ ಮಾಡಿದ್ದಾರೆ ಎಂದು ಮನೆಯಿಂದ ಹೋಗಿದ್ದ ಮುಬಾರಕ್ ಪಾಷಗೆಚಾಕು ಇರಿದು ಕೊಲೆ ಮಾಡಲಾಗಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.
ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇತ್ತ ಕೊಲೆ ಮಾಡಿರುವ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

MUST WATCH : ಬಜರಂಗ ದಳ ಕಾರ್ಯಕರ್ತರ ಕಾರ್ಯಾಚರಣೆ – ಅಕ್ರಮವಾಗಿ ಸಾಗಿಸ್ತಿದ್ದ ಗೋವುಗಳ ರಕ್ಷಣೆ




