IND vs ENG Semifinal : ಇಂಗ್ಲೆಂಡ್ ವಿರುದ್ಧ 7 ರನ್ಗಳ ಅಂತರದಿಂದ ಗೆಲುವು – ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ಭಾರತ.

IND vs ENG Semifinal : ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ರನ್ಗಳ ರೋಚಕ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ. ಮಾರ್ಚ್ 8 ರಂದು ನಡೆಯುವ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೂರ್ಯಪಡೆ ಟ್ರೋಫಿಗಾಗಿ ಸೆಣಸಾಡಲಿದೆ.

ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾದರೂ, ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಸ್ಯಾಮ್ಸನ್ ಕೇವಲ 42 ಎಸೆತಗಳಲ್ಲಿ 8 ಫೋರ್ ಹಾಗೂ 7 ಸಿಕ್ಸರ್ಗಳ ನೆರವಿನಿಂದ 89 ರನ್ ಸಿಡಿಸಿದರು.
ಅವರಿಗೆ ಸಾಥ್ ನೀಡಿದ ಇಶಾನ್ ಕಿಶನ್ (39 ರನ್, 18 ಎಸೆತ) ಮತ್ತು ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ (43 ರನ್, 25 ಎಸೆತ) ಇಂಗ್ಲೆಂಡ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ (27) ಮತ್ತು ತಿಲಕ್ ವರ್ಮಾ (21) ಅವರ ಅಬ್ಬರದಿಂದಾಗಿ ಭಾರತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು. ಇದು ಟಿ20 ವಿಶ್ವಕಪ್ ನಾಕೌಟ್ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.
READ THIS : ಪ್ರಾಣಿಕಾಮ ಪ್ರಚೋದನೆ ಆರೋಪದಲ್ಲಿ ಬಿಗ್ಬಾಸ್ ಡಾಗ್ ಸತೀಶ್ ವಿರುದ್ಧ FIR!

ಕಠಿಣ ಸ್ಪರ್ಧೆ ನೀಡಿದ ಇಂಗ್ಲೆಂಡ್
ಭಾರತ 254 ರನ್ಗಳ ಗುರಿ ಒಡ್ಡಿದ್ದರೂ, ಅದಕ್ಕೆ ಗೆಲುವು ಅಷ್ಟೇನೂ ಸುಲಭವಾಗಿ ಸಿಗಲಿಲ್ಲ. ಇಂಗ್ಲೆಂಡ್ ಆಟಗಾರರು ಅದ್ಭುತ ಬ್ಯಾಟಿಂಗ್ ಮಾಡಿದರು. ಅವರನ್ನ ಕಟ್ಟಿ ಹಾಕುವುದು ಭಾರತೀಯ ಬೌಲರ್ಸ್ಗೆ ತುಸು ಕಷ್ಟವೇ ಆಯಿತು. ಅಂತಿಮವಾಗಿ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 246 ರನ್ ಗಳಿಸಿತು. ಭಾರತಕ್ಕೆ ಇಂಗ್ಲೆಂಡ್ ವಿರುದ್ಧ 7 ರನ್ಗಳ ಗೆಲುವು ಸಿಕ್ಕಿತು.

MUST WATCH : WIFE MURDERED HUSBAND | ತಿಂಗಳ ಬಳಿಕ ಕೊಲೆ ರಹಸ್ಯ ಬಟಾಬಯಲು- ಗಂಡನನ್ನು ಕೊಂದಿದ್ದಾದರೂ ಯಾಕೆ ಗೊತ್ತಾ?




