ಕ್ರಿಕೆಟರ್ Vyshak Vijay Kumar ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಟೀಮ್ ಇಂಡಿಯಾ ಮತ್ತು ಕರ್ನಾಟಕ ರಾಜ್ಯ ತಂಡದ ಪ್ರತಿಭಾವಂತ ವೇಗದ ಬೌಲರ್ ವೈಶಾಕ್ ವಿಜಯ್ಕುಮಾರ್ ಇಂದು ಬೆಂಗಳೂರಿನಲ್ಲಿ ತಮ್ಮ ಬಹುಕಾಲದ ಗೆಳತಿ ಸಾಗರಿಕ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಿಚ್ಚ ಸುದೀಪ್ ಶುಭ ಹಾರೈಕೆ
ಬೆಂಗಳೂರಿನ ‘ಮೈನ್ ಪ್ಯಾಲೇಸ್’ ನಲ್ಲಿ ನಡೆದ ವೈವಾಹಿಕ ಸಮಾರಂಭಕ್ಕೆ ಕುಟುಂಬಸ್ಥರು, ಆಪ್ತಮಿತ್ರರು ಹಾಗೂ ಕ್ರಿಕೆಟ್ ಲೋಕದ ಗಣ್ಯರು ಹಾಜರಿದ್ದರು. ವಿಶೇಷವಾಗಿ, ಸ್ಯಾಂಡಲ್ವುಡ್ ಬಾದ್ಶಾ ಕಿಚ್ಚ ಸುದೀಪ್ ನವಜೋಡಿಗೆ ಶುಭ ಹಾರೈಸಿದ್ದಾರೆ.

ಬ್ಯಾಟರ್ ಆಗಿ ಶುರುವಾದ ಹಾದಿ
ಜನವರಿ 31, 1997 ರಂದು ಬೆಂಗಳೂರಿನಲ್ಲಿ ಜನಿಸಿದ Vyshak Vijay Kumarಆರಂಭದಲ್ಲಿ ಬ್ಯಾಟರ್ ಆಗಿ ಕರ್ನಾಟಕ ಅಂಡರ್-16 ತಂಡವನ್ನು ಮುನ್ನಡೆಸಿದರು. ನಂತರ ವೇಗದ ಬೌಲರ್ ಆಗಿ ಪರಿಣಮಿಸಿ, ಇಂದು ದೇಶದ ಪ್ರಮುಖ ವೇಗದ ಬೌಲರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅವರ ತಂದೆ ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ತಮ್ಮ ಉದ್ಯೋಗವನ್ನೇ ತ್ಯಾಗ ಮಾಡಿದ್ದರು.
READ THIS : ತಿಪಟೂರಿನಲ್ಲಿ ಗುಜರಿ ವ್ಯಾಪಾರಿಯ ಬರ್ಬರ ಹತ್ಯೆ!

IPl ಪ್ರವೇಶ
- 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೂಲಕ ಐಪಿಎಲ್ ಪ್ರವೇಶ ಪಡೆದ ವೈಶಾಕ್, ತಮ್ಮ ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ದರು.
- 2025ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು 1.80 ಕೋಟಿ ರೂ. ನೀಡಿ ಅವರನ್ನು ಖರೀದಿಸಿದೆ.
ದೇಶಿ ಕ್ರಿಕೆಟ್ನಲ್ಲಿ ಸಾಧನೆ
ಕರ್ನಾಟಕ ತಂಡದ ಪರ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 100ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ವೈಶಾಕ್, ಪವರ್ಪ್ಲೇ ಹಾಗೂ ಸ್ಲಾಗ್ ಓವರ್ಗಳಲ್ಲಿ ವಿಕೆಟ್ ಪಡೆಯುವ ಚತುರತೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಟೀಮ್ ಇಂಡಿಯಾ ಪರ ಕಾಣಿಸಿಕೊಂಡಿದ್ದರು. ಈಗ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಈ ಕನ್ನಡದ ಪ್ರತಿಭೆಗೆ ಅಭಿಮಾನಿಗಳು ಮತ್ತು ಕ್ರಿಕೆಟ್ ಲೋಕದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

MUST WATCH : ತಾಲೂಕು ಕಚೇರಿಯಲ್ಲೇ PARKING PROBLEM ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಸಮಸ್ಯೆ




